ಪ್ರತೀ ಮನುಷ್ಯನು ತಾನು ಆರ್ಥಿಕವಾಗಿ ಪ್ರಬಲನಾಗಿರಬೇಕು. ಮನೆಯಲ್ಲಿ ಹೆಂಡತಿ ಮಕ್ಕಳೊಟ್ಟಿಗೆ ಆರಾಮವಾಗಿ ಜೀವನ ಕಳೆಯಬೇಕು. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕು ಅಂತಾ ಬಯಸುತ್ತಾನೆ. ಹಾಗಾದ್ರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.
ಒಮ್ಮೆ ಒಂದು ಊರಲ್ಲಿ ಓರ್ವ ಬೌದ್ಧ ಭಿಕ್ಷು ತನ್ನ ಕುಟೀರದಲ್ಲಿ ವಾಸವಿದ್ದ. ಅವನು ಪ್ರತಿದಿನ ಆ ಊರಿನಲ್ಲಿ ಭಿಕ್ಷೆಗೆ ಹೋದಾಗ, ಹಲವರು ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದರು. ಅದಕ್ಕೆ ಭಿಕ್ಷು ಪರಿಹಾರ ಹೇಳುತ್ತಿದ್ದರು. ಆ ಊರಿನ ಶ್ರೀಮಂತ ಮನುಷ್ಯನ ಮನೆಯಲ್ಲಿ ಪ್ರತಿದಿನ ಜಗಳವಾಗುತ್ತಿತ್ತು. ಪತ್ನಿ, ತಂದೆ ತಾಯಿ ಅಥವಾ ಮಕ್ಕಳು. ಹೀಗೆ ಯಾರೊಂದಿಗಾದ್ರೂ ಪ್ರತಿದಿನ ಜಗಳವಾಡುತ್ತಿದ್ದ. ಜಗಳವಾಡಿ ಆಡಿ ಅವನಿಗೆ ಸಾಕಾಗಿ ಹೋಗಿತ್ತು.
ಈ 7 ಮಾತುಗಳನ್ನು ಎಂದಿಗೂ ಯಾರಲ್ಲಿಯೂ ಹೇಳಬೇಡಿ..ಭಾಗ 2
ಒಮ್ಮೆ ಆ ಬೌದ್ಧ ಭಿಕ್ಷು ಶ್ರೀಮಂತನ ಮನೆಗೆ ಬಂದ, ಶ್ರೀಮಂತ ಭಿಕ್ಷುವಿಗೆ ಭೋಜನ ನೀಡಿದ. ಅಲ್ಲದೇ ತನ್ನ ಮನೆಯಲ್ಲಿ ಹೀಗೆ ಪ್ರತಿದಿನ ಜಗಳವಾಗುತ್ತಿದೆ. ಇದಕ್ಕೇನಾದರೂ ಪರಿಹಾರ ಕೊಡಿ ಎಂದು ಕೇಳಿದ. ಅದಕ್ಕೆ ಭಿಕ್ಷು, ನಾನು ನಿನ್ನ ಮನೆಗೆ ಆಹಾರ ಕೇಳಲು ಬಂದಿದ್ದೆ ಹೊರತು, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತ ಸಮಯ ಕಳೆಯಲು ಅಲ್ಲವೆಂದು ಹೇಳುತ್ತಾರೆ. ಆಗ ಕ್ರೋಧಿತನಾದ ಶ್ರೀಮಂತ, ಬೇಕಾಬಿಟ್ಟಿಯಾಗಿ ಬೈಯ್ಯುತ್ತಾನೆ.
ನಿನಗೆ ನಾನು ಭೋಜನ ಕೊಟ್ಟಿದ್ದೇನೆ, ನೀನು ನನಗೇ ಎದುರುತ್ತರ ನೀಡುತ್ತಿಯಾ..? ಎಂದು ಬಾಯಿಗೆ ಬಂದ ಹಾಗೆ ಬಯ್ಯುತ್ತಾನೆ. ಆದರೆ ಬೌದ್ಧ ಭಿಕ್ಷು ಅದ್ಯಾವುದಕ್ಕೂ ಎದುರುತ್ತರ ಕೊಡದೇ, ಸುಮ್ಮನೆ ಮಾತನ್ನ ಕೇಳುತ್ತ ನಿಲ್ಲುತ್ತಾನೆ. ಕೆಲ ಹೊತ್ತಿನ ಬಳಿಕ ಶ್ರೀಮಂತ ಶಾಂತನಾಗುತ್ತಾನೆ. ಆಗ ಮಾತನಾಡಿದ ಭಿಕ್ಷು, ನೀನು ನನಗೆ ಅಷ್ಟೆಲ್ಲ ಬೈದೆ. ಆದ್ರೆ ನಾನು ನಿನಗೇನೂ ಬೈಯಲಿಲ್ಲ. ಹಾಗಾಗಿ ನಿನ್ನ ಸಿಟ್ಟು ಇಲ್ಲಿಗೇ ನಿಂತಿತು. ನಾನೇನಾದರೂ ನಿನಗೆ ಬೈದಿದ್ದರೆ, ನಮ್ಮಿಬ್ಬರ ಮಧ್ಯೆ ಭಯಂಕರ ಜಗಳವಾಗುತ್ತಿತ್ತು.
ಈ 7 ಮಾತುಗಳನ್ನು ಎಂದಿಗೂ ಯಾರಲ್ಲಿಯೂ ಹೇಳಬೇಡಿ..ಭಾಗ 1
ಹಾಗಾಗಿ ಮನೆಯಲ್ಲಿ ಆದಷ್ಟು ತಾಳ್ಮೆಯಿಂದ ವರ್ತಿಸಿದ್ದಲ್ಲಿ, ನಿನ್ನ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗುತ್ತದೆ. ನಿನ್ನ ಎದುರಿರುವವರು ವಾದ ಮಾಡಲು ಬಂದರೆ, ಜಗಳ ಮಾಡಲು ಬಂದರೆ, ನೀನು ಶಾಂತವಾಗಿ ವರ್ತಿಸು. ಆಗ ಜಗಳ ಅಲ್ಲಿಗೆ ನಿಲ್ಲುತ್ತದೆ. ಮನೆಯಲ್ಲಿ ನೆಮ್ಮದಿ ಇರುತ್ತದೆ. ಏನಾದರೂ ಸಮಸ್ಯೆ ಇದ್ದಲ್ಲಿ, ಕೂತು ಮಾತಾಡಿ ಪರಿಹರಿಸಿಕೊ ಎಂದು ಬೌದ್ಧ ಭಿಕ್ಷು ಸಲಹೆ ನೀಡುತ್ತಾನೆ.