Thursday, December 4, 2025

Latest Posts

ಈ 3 ರೀತಿಯ ದುಃಖವನ್ನು ಪ್ರತೀ ಮನುಷ್ಯನೂ ಅನುಭವಿಸಲೇಬೇಕು..

- Advertisement -

ಮನುಷ್ಯನಾಗಿ ಹುಟ್ಟಿದ ಮೇಲೆ ಅವನು ಜೀವನದಲ್ಲಿ ಸುಖ ದುಃಖ, ನೋವು ನಲಿವು, ಎಲ್ಲವನ್ನೂ ಅನುಭವಿಸಲೇಬೇಕಾಗುತ್ತದೆ. ಅವನು ಶ್ರೀಮಂತನಾಗಬಹುದು ಅಥವಾ ಬಡವನೂ ಆಗಬಹುದು. ಯಾರೇ ಆದರೂ ಅವರು ಕಷ್ಟ ಸುಖ ಎರಡನ್ನೂ ಅನುಭವಿಸಲೇಬೇಕು. ಅದರಲ್ಲಿ 3 ರೀತಿಯ ದುಃಖವನ್ನು ಪ್ರತೀ ಮನುಷ್ಯನು ಅನುಭವಿಸಲೇಬೇಕು. ಹಾಗಾದ್ರೆ ಅದ್ಯಾವ ದುಃಖ ಅಂತಾ ತಿಳಿಯೋಣ ಬನ್ನಿ..

ಜೀವನದಲ್ಲಿ ಸೋಲುತ್ತಿದ್ದೀರಿ ಎನ್ನಿಸುತ್ತಿದ್ದಲ್ಲಿ ಈ ಕಥೆ ಓದಿ..

ಮೊದಲನೇಯ ದುಃಖ ದೈಹಿಕ ದುಃಖ. ಈ ದೈಹಿಕ ದುಃಖವನ್ನು ಎರಡು ಭಾಗದಲ್ಲಿ ವಿಂಗಡಿಸಲಾಗಿದೆ. ಮೊದಲನೇಯದ್ದು ತನುವಿನ ದುಃಖ ಮತ್ತು ಎರಡನೇಯದ್ದು ಮಾನಸಿಕ ದುಃಖ. ಕೆಲವರು ಎಷ್ಟೇ ಶ್ರೀಮಂತರಿದ್ದರು, ನೋಡಲು ಚೆಂದವಿದ್ದರೂ, ಅವರಿಗೆ ತರಹೇವಾರಿ ಖಾಯಿಲೆ ಇರುತ್ತದೆ. ಹಾಗಾಗಿ ಅವರು ಸಪ್ಪೆ ಆಹಾರವನ್ನೇ ತಿನ್ನಬೇಕಾಗುತ್ತದೆ.

ಮತ್ತೆ ಎಷ್ಟೇ ಶ್ರೀಮಂತರಿದ್ದರೂ ಕೆಲವರಿಗೆ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ. ಅವರು ಯಾವಾಗಲೂ ಚಿಂತೆಯಲ್ಲೇ ಇರುತ್ತಾರೆ. ಎಷ್ಟಿದ್ದರೂ ಸಾಲದು ಎಂಬಂತೆ ಬದುಕುವುದು. ತನ್ನ ಬಳಿ ಸಾವಿರ ರೂಪಾಯಿ ಬಟ್ಟೆ ಇದ್ದರೆ, 2 ಸಾವಿರದ ಬಟ್ಟೆಯನ್ನು ಕಂಡು ದುಃಖಿಸುವುದು. ನನ್ನ ಬಳಿ ಬೈಕ್ ಇದ್ದರೆ, ಇನ್ನೊಬ್ಬರ ಬಳಿ ಇರುವ ಕಾರನ್ನು ಕಂಡು ದುಃಖಿಸುವುದು. ಇದು ಮಾನಸಿಕ ದುಃಖ.

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕಂದ್ರೆ ಈ ಮಾತು ಕೇಳಿ..

ಎರಡನೇಯ ದುಃಖ ಭೌತಿಕ ದುಃಖ. ಭೌತಿಕ ದುಃಖವೆಂದರೆ, ಬೇರೆಯವರಿಂದ ನಿಮಗಾಗುವ ದುಃಖ. ಉದಾಹರಣೆಗೆ ನೀವು ಸರಿ ದಾರಿಯಲ್ಲೇ ಹೋಗುತ್ತಿರುತ್ತೀರಿ. ಆದರೆ ಎದುರಿನಿಂದ ಬಂದ ವಾಹನ ನಿಮ್ಮ ವಾಹನಕ್ಕೆ ಡಿಕ್ಕಿ ಹೊಡೆಯುತ್ತದೆ. ಆ ಅಪಘಾತದಲ್ಲಿ ನೀವು ನೋವನ್ನು ಅನುಭವಿಸುತ್ತೀರಿ. ಇದು ಭೌತಿಕ ದುಃಖ.

ಮೂರನೇಯ ದುಃಖ ದೈವಿಕ ದುಃಖ. ನೀವಿರುವ ಮನೆ ಮಳೆ ಬಂದು ಕೊಚ್ಚಿ ಹೋಗುತ್ತದೆ. ಅಥವಾ ಗುಡ್ಡ ಕುಸಿತವಾಗಿ ಅಪಘಾತವಾಗುತ್ತದೆ. ಅಥವಾ ಮಳೆ ಬಿಸಿಲು ಹೆಚ್ಚಾದ ಕಾರಣ ನಿಮ್ಮ ಆರೋಗ್ಯ ಹಾಳಾಗುತ್ತದೆ. ಇದೇ ದೈವಿಕ ದುಃಖ. ಹಾಗಾಗಿ ಇಂಥ ದುಃಖಗಳನ್ನು ಮನುಷ್ಯ ಅನುಭವಿಸಲೇಬೇಕು.

- Advertisement -

Latest Posts

Don't Miss