Friday, October 18, 2024

Latest Posts

ನೆಮ್ಮದಿ ಬೇಕಂದ್ರೆ ಈ 4 ಸಂಗತಿಯಿಂದ ದೂರವಿರಿ..

- Advertisement -

ಕೆಲವರಿಗೆ ಹೊತ್ತಿನ ತುತ್ತಿದ್ದರೆ ಸಾಕು. ಹಾಗೆ ಹೊತ್ತಿಗೆ ತುತ್ತು ಸಿಕ್ಕವನಿಗೆ ಕೈ ತುಂಬ ದುಡ್ಡು ಬೇಕು. ದುಡ್ಡಿದ್ದವನಿಗೆ ನೆಮ್ಮದಿ ಬೇಕು.  ಹೀಗೆ ಮನುಷ್ಯನ ಬಳಿ ಏನೇ ಇದ್ದರೂ ನೆಮ್ಮದಿ ಇರದಿದ್ದಲ್ಲಿ, ಅವನು ಬದುಕಲು ಸಾಧ್ಯವಿಲ್ಲ. ಕೆಲ ಸಲ ಕೋಟ್ಯಾಧಿಶ್ವರನಾದ, ಚೆಂದದ ಪತ್ನಿ ಇರುವ, ವಿದ್ಯಾವಂತ ಮಕ್ಕಳಿರುವ ಮನುಷ್ಯ ನೇಣಿಗೆ ಶರಣಾಗುತ್ತಾನೆ. ಯಾಕಂದ್ರೆ ಅವನ ಬಳಿ ಎಲ್ಲವೂ ಇದೆ. ಆದ್ರೆ ನೆಮ್ಮದಿ ಇಲ್ಲ. ಹಾಗಾದ್ರೆ ನೆಮ್ಮದಿ ಬೇಕಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಚಳಿಗಾಲದಲ್ಲಿ ರಾಗಿಲಡ್ಡು ವಿಶೇಷ.. ಈ ಸಮಸ್ಯೆಗಳಿಗೆ ದಿವ್ಯ ಔಷಧ..!

ಮೊದಲನೇಯ ಸಂಗತಿ ಅಂದ್ರೆ ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ ಅನ್ನೋದನ್ನ ಯೋಚಿಸುವುದನ್ನ ಬಿಡಿ. ಹೆಚ್ಚಿನವರು ಬದುಕುವುದೇ ಇನ್ನೊಬ್ಬರಿಗೋಸ್ಕರ. ನಾನು ಹೀಗೆ ಮಾಡಿದ್ರೆ ಅವರು ಏನನ್ನಬಹುದು..? ಇವರು ಏನನ್ನಬಹುದು..? ಅವರು ನನ್ನ ಬಗ್ಗೆ ತಪ್ಪು ತಿಳಿದುಕೊಂಡರೆ..? ಅನ್ನೋ ಹತ್ತಾರು ಯೋಚನೆಯನ್ನ ಮಾಡುತ್ತಲೇ ಜೀವನ ಕಳೆಯುತ್ತಾರೆ. ಕೊನೆಗಾಲದಲ್ಲಿ ಛೇ ನಾನು ಅವರಿವರ ಬಗ್ಗೆ ತಲೆ ಕೆಡಿಸಿಕೊಂಡು ಜೀವನ ಮಾಡುವ ಬದಲು, ನನ್ನಿಚ್ಛೆಯಂತೆ ಜೀವನ ಮಾಡಬೇಕಿತ್ತು ಎಂದು ಕೊರಗುತ್ತಾರೆ. ಹಾಗಾಗಿ ನೀವು ನೆಮ್ಮದಿಯಾಗಿರಬೇಕು ಅಂದ್ರೆ ಬೇರೆಯವರು ಏನೆನ್ನುತ್ತಾರೆ ಅನ್ನೋ ಬಗ್ಗೆ ಯೋಚಿಸಬೇಡಿ.

ಎರಡನೇಯ ಸಂಗತಿ ನಾನು ಸೋತರೆ ಜನ ನಗುತ್ತಾರೆಂದು ಯೋಚಿಸುವುದನ್ನ ಬಿಟ್ಟುಬಿಡಿ. ನೀವೇನಾದರೂ ಕೆಲಸ ಮಾಡಲು ಹೊರಟಿರುತ್ತೀರಿ. ಉದಾಹರಣೆಗೆ ಒಂದು ಉದ್ಯಮ ಆರಂಭಿಸಲು ಹೊರಟಿರುತ್ತೀರಿ. ಆದ್ರೆ ನಾನು ಈ ಉದ್ಯಮದಲ್ಲಿ ಯಶಸ್ಸು ಕಾಣದೇ ಸೋತರೆ, ಜನ ನಗುತ್ತಾರೆ, ನನ್ನನ್ನು ಹೀಯಾಳಿಸುತ್ತಾರೆಂದು ನೀವು ಹಿಂಜರಿಯಬಾರದು. ಜನ ನಕ್ಕರೆ ನಗಲಿ, ನೀವು ನಿಮ್ಮ ಯಶಸ್ಸಿನತ್ತ ಗಮನ ಕೊಡಿ. ಉತ್ತಮರ ಸಲಹೆ, ಸರಿಯಾದ ಆರ್ಥಿಕ ವ್ಯವಸ್ಥೆಯೊಂದಿಗೆ ಉದ್ಯಮ ಆರಂಭಿಸಿ, ಮುನ್ನಡೆಯಿರಿ.

ವಯಸ್ಸಾದ ಚರ್ಮವನ್ನು ತಡೆಯಲು ತೆಗೆದುಕೊಳ್ಳಬೇಕಾದ ಆಹಾರಗಳು..!

ಮೂರನೇಯ ಸಂಗತಿ ಟೈಂ ವೇಸ್ಟ್ ಮಾಡುವುದನ್ನ ಬಿಟ್ಟುಬಿಡಿ. ನೀವು ಟೈಂ ವೇಸ್ಟ್ ಮಾಡುವುದನ್ನ ಬಿಡದಿರುವಷ್ಟು ನಿಮ್ಮ ಯಶಸ್ಸು ನಿಮ್ಮಿಂದ ದೂರ ಹೋಗುತ್ತಿರುತ್ತದೆ. ನೀವು ಯಸಸ್ವಿಯಾಗಬೇಕು ಅಂದ್ರೆ ಅದಕ್ಕೆ ಬೇಕಾದ ಕೆಲಸವನ್ನು ಮಾಡಬೇಕು. ಆ ಕೆಲಸವನ್ನು ಮಾಡಲು ನೀವು ಉದಾಸೀನ ತೋರಿದರೆ, ನೀವೆಂದೂ ಉದ್ಧಾರವಾಗಲು ಸಾಧ್ಯವಿಲ್ಲ. ಇಂದಿನ ಕಾಲದಲ್ಲಿ ಹೆಚ್ಚಿನ ಟೈಂ ವೇಸ್ಟ್ ಆಗುತ್ತಿರುವುದೇ, ಮೊಬೈಲ್‌ನಿಂದ. ಕೂತಲ್ಲೇ ಕಲರ್ ಫುಲ್ ಜಗತ್ತನ್ನ ತೋರಿಸುವ ಮೊಬೈಲ್ ಸ್ವೈಪ್ ಮಾಡುತ್ತಲೇ, ಇಂದಿನ ಯುವ ಪೀಳಿಗೆಯ ಸಮಯ ವ್ಯರ್ಥವಾಗುತ್ತಿದೆ.

ನಾಲ್ಕನೇಯ ಸಂಗತಿ ನನ್ನಿಂದ ಈ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವ ಮಾತನ್ನ ನಿಮ್ಮ ತಲೆಯಿಂದ ತೆಗೆದು ಹಾಕಿ. ನನ್ನಿಂದ ದೊಡ್ಡವರಿಗೆ, ಅನುಭವ ಇದ್ದವರಿಗೆ ಈ ಕೆಲಸ ಮಾಡಲು ಆಗಲಿಲ್ಲ, ಇನ್ನು ನಾನೇನು ಮಾಡಬಲ್ಲೆ ಎಂಬ ಯೋಚನೆಯನ್ನ ನಿಮ್ಮ ಮನಸ್ಸಿನಿಂದ ತೆಗೆದು ಹಾಕಿ. ನೀವು ಪ್ರಯತ್ನಿಸಿದರೆ, ಯಾರಿಂದಲೂ ಆಗದ ಕೆಲಸ ನಿಮ್ಮಿಂದ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವುದೇ ಕೆಲಸವನ್ನು ಪ್ರಯತ್ನಿಸದೇ, ಕೈ ಚೆಲ್ಲಿ ಕೂರುವುದು ಮೂರ್ಖತನವಾಗುತ್ತದೆ.

- Advertisement -

Latest Posts

Don't Miss