ಈ ಮೊದಲ ಭಾಗದಲ್ಲಿ ನಾವು ವ್ಯಾಪಾರಸ್ಥ ಸಾವಿನ ಚಿಂತೆ ಮಾಡುತ್ತ, ನರಳಿ ಹಾಸಿಗೆ ಹಿಡಿದ ಬಗ್ಗೆ, ವ್ಯಾಪಾರ ನಷ್ಟವಾದ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರೆದ ಭಾಗವಾಗಿ, ಶ್ರೀಮಂತ ಹಾಗೇ ಹಾಸಿಗೆ ಹಿಡಿದು ಬಿಡುತ್ತಾನಾ..? ವ್ಯಾಪಾರ ನಿಲ್ಲಿಸಿಬಿಡುತ್ತಾನಾ..? ಮುಂದೇನಾಯಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಶ್ರೀಮಂತ ವ್ಯಾಪಾರಿಯ ಮನೆಗೆ ಓರ್ವ ಸಾಧು ಬಂದ. ವ್ಯಾಪಾರಸ್ಥ ಅಳುತ್ತ ಸಾಧುಗಳಲ್ಲಿ ಹೇಳಿದ. ನನಗೆ ಸಾವಿನ ಚಿಂತೆ ಶುರುವಾಗಿದೆ. ಅದರಿಂದಲೇ ಹೀಗೆ ಖಾಯಿಲೆ ಬಂದು ನರಳುತ್ತಿದ್ದೇನೆ. ಅತ್ತ ವ್ಯಾಪಾರದಲ್ಲೂ ನಷ್ಟವಾಗುತ್ತಿದೆ. ಏನಾದರೂ ಪರಿಹಾರ ತಿಳಿಸಿ ಎಂದು ಕೇಳಿದ. ಅದಕ್ಕೆ ಸಾಧು, ನಾನು ಏಳು ದಿನ ಕಳೆದ ಮೇಲೆ ಪುನಃ ಬರುತ್ತೇನೆ. ಅಲ್ಲಿಯ ತನಕ ನೀನು, ನಾನು ಸಾವು ಬಂದಾಗಲೇ ಸಾಯುತ್ತೇನೆ. ಅಲ್ಲಿಯವರೆಗೂ ಖುಷಿಯಾಗಿರುತ್ತೇನೆ ಎಂದು ಅಂದುಕೊಂಡು ಬದುಕಬೇಕು.
ನೀವು ಇದನ್ನು ಸ್ವೀಕಾರ ಮಾಡಿದ್ದಲ್ಲಿ, ಜೀವನದಲ್ಲಿ ಖುಷಿಯಿಂದ ಇರುತ್ತೀರಿ.. ಭಾಗ 1
ಅಲ್ಲದೇ, ಬೇಗ ಸ್ನಾನಾದಿಗಳನ್ನು ಮುಗಿಸಿ. ಆರೋಗ್ಯಕರ ಊಟ ಮಾಡು. ದಿನವಿಡೀ ಹೀಗೆ ಮಲಗದೇ, ಪತ್ನಿಯೊಂದಿಗೆ ಹರಟೆ ಹೊಡಿ. ಮತ್ತು ನಾ ಹೇಳಿದ ಮಾತನ್ನು ಚಾಚು ತಪ್ಪದೇ ಪಾಲಿಸು ಎಂದು ಹೇಳುತ್ತಾರೆ. ವ್ಯಾಪಾರಸ್ಥನ ಪತ್ನಿ ಸಾಧುವಿಗೆ ಭೋಜನ ಕೊಟ್ಟು ಕಳುಹಿಸುತ್ತಾಳೆ. ಆದರೆ ಸಾಧು ಹೋಗುವ ಮುನ್ನ, ವ್ಯಾಪಾರಸ್ಥನ ಪತ್ನಿಯಲ್ಲಿಯೂ ಒಂದು ಮಾತನ್ನು ಹೇಳುತ್ತಾರೆ. ನೀನು ನಿನ್ನ ಪತಿಗೆ ವ್ಯಾಪಾರದಲ್ಲಿ ನಷ್ಟವಾಗುತ್ತಿದೆ. ನೀವು ಅಲ್ಲಿ ಹೋಗದಿದ್ದರೆ, ಲಾಭ ಬರುವುದಿಲ್ಲ. ಅಲ್ಲಿ ನೀವಿರುವುದು ತುಂಬಾ ಮುಖ್ಯ. ಹಾಗಾಗಿ ನೀವು ಬೇಗ ಆರಾಮವಾಗಬೇಕು ಎಂದು ಬುದ್ಧಿ ಹೇಳು. ಅಲ್ಲದೇ, ಅವರಿಗೇನೂ ಆಗಿಲ್ಲವೆಂಬಂತೆ, ನೀನು ಅವನೊಂದಿಗೆ ಖುಷಿ ಖುಷಿಯಾಗಿ, ಮಾತನಾಡುತ್ತ ಕಾಲ ಕಳಿ ಎನ್ನುತ್ತಾರೆ. ಅದಕ್ಕೆ ಆ ಹೆಂಗಸು ಸರಿ ಹಾಗೆ ಆಗಲಿ ಎಂದು ಹೇಳುತ್ತಾಳೆ.
ಒಂದು ವಾರ ಬಿಟ್ಟು ಸಾಧು ವಾಪಸ್ ಮನೆಗೆ ಬರುತ್ತಾರೆ. ಆಗ ವ್ಯಾಪಾರಸ್ಥ, ಶುಭ್ರವಾದ ಬಟ್ಟೆ ಧರಿಸಿ, ಸೋಫಾದ ಮೇಲೆ ಕುಳಿತು ಕೊಂಡು, ಖುಷಿ ಖುಷಿಯಾಗಿ ವ್ಯಾಪಾರದ ಕೆಲಸವನ್ನು ಮಾಡುತ್ತಿರುತ್ತಾನೆ. ಅವನಿಗ ಪೂರ್ತಿ ಆರೋಗ್ಯವಾಗಿರುತ್ತಾನೆ. ಸಾಧುವನ್ನ ಕಂಡ ತಕ್ಷಣ, ವ್ಯಾಪಾರಸ್ಥ ಓಡಿ ಬಂದು ಅವರ ಕಾಲಿಗೆ ಬೀಳುತ್ತಾನೆ. ಮತ್ತು ನೀವು ಹೇಳಿಕೊಟ್ಟಿದ್ದನ್ನ ನಾನು ಚಾಚು ತಪ್ಪದೇ ಪಾಲಿಸುತ್ತೇನೆ. ನಾನು ಸಾವು ಯಾವ ದಿನ ಬರುತ್ತದೆಯೋ, ಅಂದೇ ಸಾಯುತ್ತೇನೆ. ಇನ್ನೆಂದೂ ಸಾವಿನ ಬಗ್ಗೆ ಚಿಂತೆ ಮಾಡುವುದಿಲ್ಲ ಎನ್ನುತ್ತಾನೆ.
ಎಲ್ಲರೊಂದಿಗಿದ್ದು ಏಕಾಂಗಿಯಾಗಿ ಇರೋದನ್ನ ಕಲಿಯಿರಿ..
ಈ ಕಥೆಯ ತಾತ್ಪರ್ಯವೇನೆಂದರೆ, ನೀವು ಯಾವುದಾದರೂ ಒಂದು ವಿಷಯದ ಬಗ್ಗೆ ಹೆಚ್ಚು ಚಿಂತಿಸುವುದನ್ನು ಬಿಟ್ಟಲ್ಲಿ, ನೀವು ಖುಷಿಯಾಗಿ ಆರಾಮವಾಗಿ ಇರುತ್ತೀರಿ. ಆದ್ರೆ ನಿಮ್ಮ ಖುಷಿಯನ್ನು ಹಾಳು ಮಾಡುವ ವಿಚಾರದ ಬಗ್ಗೆ ಹೆಚ್ಚು ಯೋಚಿಸಿದ್ದಲ್ಲಿ, ಅದು ನಿಮ್ಮನ್ನು ಚಿಂತೆಗೀಡು ಮಾಡುತ್ತದೆ. ಮತ್ತು ಚಿಂತೆ ಚಿತೆಗೆ ಸಮ ಅನ್ನೋ ಮಾತನ್ನ ನೆನಪಿನಲ್ಲಿಡಿ.