ಕೆಲವರು ಎಷ್ಟು ಕಂಜೂಸು ಇರುತ್ತಾರೆಂದರೆ, ಒಂದು ರೂಪಾಯಿ ದಾನ ಮಾಡಲು ಕೂಡ ಹಿಂದೆ ಮುಂದೆ ನೋಡುತ್ತಾರೆ. ಆದ್ರೆ ಹಿರಿಯರು ಹೇಳುವ ಪ್ರಕಾರ, ನೀವು ದಾನ ಮಾಡಿದಷ್ಟು ನಿಮ್ಮ ಧನ ಹೆಚ್ಚುತ್ತದೆ. ನೀವು ದಾನ ಮಾಡಿದ ಪುಣ್ಯ ನಿಮಗೆ ಲಭಿಸುತ್ತದೆ ಎಂದು. ನಾವು ಇಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಥೆಯೊಂದನ್ನ ಹೇಳಲಿದ್ದೇವೆ.
ಒಂದೂರಲ್ಲಿ ಓರ್ವ ವ್ಯಾಪಾರಿ ಇದ್ದ. ಅವನ ಹೆಸರು ಜಗ್ಗಪ್ಪ. ಜಗ್ಗಪ್ಪನ ಮನೆತನದವರು ದಾನಿಗಳಾಗಿದ್ದರು. ಆದ್ರೆ ಜಗ್ಗಪ್ಪ ಮಾತ್ರ ಜುಗ್ಗನಾಗಿದ್ದ. ಅಂದ್ರೆ ಕಂಜೂಸಾಗಿದ್ದ. ಒಂದು ರೂಪಾಯಿ ಕೂಡ ಖರ್ಚು ಮಾಡುತ್ತಿರಲಿಲ್ಲ. ತನ್ನ ಮನೆಯವರಿಗೂ ಅವನು ಸರಿಯಾಗಿ ಊಟ ಹಾಕುತ್ತಿರಲಿಲ್ಲ. ಅಲ್ಲದೇ, ತಾನೂ ಸ್ವಾದಿಷ್ಟ ಭೋಜನ ಮಾಡಲು ಹಿಂದೆ ಮುಂದೆ ನೋಡುತ್ತಿದ್ದ.
ಮಾತು ಮಾತಿಗೂ ಸುಳ್ಳು ಹೇಳುವವರು ಈ ಕಥೆಯನ್ನ ಖಂಡಿತಾ ಓದಿ.. ಭಾಗ 1
ಇಂಥ ಕಂಜೂಸು ಜಗ್ಗಪ್ಪ ಒಮ್ಮೆ ತನ್ನ ಸಹೋದರನ ಮನೆಗೆ ಹೋಗುತ್ತಾನೆ. ಅಲ್ಲಿ ಸಹೋದರನ ಕುಟುಂಬಸ್ಥರು ಸ್ವಾದಿಷ್ಟ ಭೋಜನ ಮಾಡುತ್ತಿರುತ್ತಾರೆ. ಪಾಯಸ, ಹಪ್ಪಳ, ಅನ್ನ, ಘಮ ಘಮಿಸುವ ಸಾರು, ಹೀಗೆ ರುಚಿಕರ ಊಟ ಮಾಡುತ್ತಿರುತ್ತಾರೆ. ಸಹೋದರ ಜಗ್ಗಪ್ಪನನ್ನು ಕಂಡು, ಊಟಕ್ಕೆ ಕರೆಯುತ್ತಾನೆ. ಜಗ್ಗಪ್ಪನಿಗೆ ಊಟ ಮಾಡಬೇಕೆಂಬ ಬಯಕೆ ಇದ್ದರೂ ಕೂಡ, ಬೇಡ ನಾನು ಊಟ ಮಾಡಿಕೊಂಡೇ ಬಂದಿದ್ದೇನೆ ಎನ್ನುತ್ತಾನೆ.
ಯಾಕಂದ್ರೆ ಈಗ ತಾನು ಸಹೋದರನ ಮನೆಯಲ್ಲಿ ಊಟ ಮಾಡಿದ್ರೆ, ಮುಂದೆ ಅವನನ್ನೂ ತಾನು ತನ್ನ ಮನೆಗೆ ಊಟಕ್ಕೆ ಕರೆಯಬೇಕಾಗುತ್ತದೆ ಎಂದು. ಸಹೋದರ ಊಟ ಮುಗಿಸಿ, ಜಗ್ಗಪ್ಪನ ಜೊತೆ ರಾಜನನ್ನು ನೋಡಲು ಹೋಗುತ್ತಾನೆ. ಅಲ್ಲಿ ರಾಜನ ಅರಮನೆಯಲ್ಲೂ ಭಕ್ಷ್ಯ ಭೋಜನಗಳಿರುತ್ತದೆ. ಜಗ್ಗಪ್ಪನಿಗೆ ಆ ಭೋಜನವನ್ನು ಉಣ್ಣಬೇಕೆಂಬ ಆಸೆ ಇರುತ್ತದೆ. ಆದ್ರೆ ರಾಜ ಇವರನ್ನು ಊಟಕ್ಕೆ ಕರೆಯುವುದಿಲ್ಲ. ಬದಲಾಗಿ ತಾನೊಬ್ಬನೇ ಉಂಡು, ಇವರ ಬಳಿ ಬಂದ ಕಾರಣ ಕೇಳುತ್ತಾನೆ. ಇವರಿಬ್ಬರು ವ್ಯಾಪಾರದ ಬಗ್ಗೆ ಮಾತನಾಡಿಕೊಂಡು ಬರುತ್ತಾರೆ.
ಮಾತು ಮಾತಿಗೂ ಸುಳ್ಳು ಹೇಳುವವರು ಈ ಕಥೆಯನ್ನ ಖಂಡಿತಾ ಓದಿ.. ಭಾಗ 2
ಜಗ್ಗಪ್ಪ ಮನೆಗೆ ಬಂದ್ರೂ ಅವನಿಗೆ ಸ್ವಾದಿಷ್ಟ ಭೋಜನದ ಯೋಚನೆಯೇ ಇರುತ್ತದೆ. ಹಾಗಾದ್ರೆ ಕಂಜೂಸು ಜಗ್ಗಪ್ಪ ತಾನೂ ಮನೆಯಲ್ಲಿ ಭೋಜನ ಮಾಡಿಸಿಕೊಂಡು ತಿನ್ನುತ್ತಾನಾ..? ಅಥವಾ ಕಂಜೂಸುತನ ಮಾಡಿಯೇ ಜಿವಿಸುತ್ತಾನಾ..? ಈ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.