ಈ ಹಿಂದಿನ ಭಾಗದಲ್ಲಿ ನಾವು ಸ್ಲೋ ಪಾಯ್ಸನ್ ರೀತಿ ಕೆಲಸ ಮಾಡುವ ಆಹಾರಗಳಲ್ಲಿ 5 ಆಹಾರಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಉಳಿದ 5 ಆಹಾರಗಳ ಬಗ್ಗೆ ವಿವರಣೆ ನೀಡಲಿದ್ದೇವೆ.
ಗಂಟಲ ಕಿರಿ ಕಿರಿಯನ್ನು ಹೋಗಲಾಡಿಸುವುದು ಹೇಗೆ..?
ಆರನೇಯ ಆಹಾರ ಕೋಲ್ಡ್ ಡ್ರಿಂಕ್. ಕೆಲವರ ಮನೆಯ ಫ್ರಿಜ್‌ನಲ್ಲಿ ಕೋಲ್ಡ್ ಡ್ರಿಂಕ್ಸ್ ಇರಲೇಬೇಕು. ಯಾಕಂದ್ರೆ ಪ್ರತಿದಿನ ಸ್ವಲ್ಪವಾದರೂ ಕೂಲ್ಡ್ ಡ್ರಿಂಕ್ಸ್ ಕುಡಿಯದಿದ್ದಲ್ಲಿ ಅವರಿಗೆ ಸಮಾಧಾನವಾಗುವುದಿಲ್ಲ. ಹೀಗೆ ಅಭ್ಯಾಸವಾದ ಕೂಲ್ಡ್ ಡ್ರಿಂಕ್ಸ್ ಸೇವನೆಯಿಂದ ಕ್ಯಾನ್ಸರ್ ಬರುವುದು ಖಚಿತ.
ಏಳನೇಯ ಆಹಾರ ಫಾಸ್ಟ್ ಫುಡ್. ಬೆಂಗಳೂರು, ಮುಂಬೈ, ದೆಹಲಿ ಸೇರಿ, ಹಲವು ದೊಡ್ಡ ದೊಡ್ಡ ಸಿಟಿಗಳಲ್ಲಿ ಕೆಲಸ ಮಾಡುವ ಜನರಿಗೆ ಬೆಳಿಗ್ಗೆ ಬೇಗ ಎದ್ದು ತಿಂಡಿ ಮಾಡಿಕೊಳ್ಳಲು, ಮಧ್ಯಾಹ್ನ ಮತ್ತು ರಾತ್ರಿಗೆ ಅಡುಗೆ ಮಾಡಿಕೊಳ್ಳಲು ಸಮಯವಿರುವುದಿಲ್ಲ. ಹಾಗಾಗಿ ಅವರು ಹೆಚ್ಚಾಗಿ ಫಾಸ್ಟ್ ಫುಡ್ ಮೊರೆ ಹೋಗ್ತಾರೆ. ಅಂಥವರು ಭವಿಷ್ಯದಲ್ಲಿ ಹೃದಯದ ಸಮಸ್ಯೆ, ಬೊಜ್ಜಿನ ಸಮಸ್ಯೆ ಸೇರಿ ಶುಗರ್, ಬಿಪಿ, ಕ್ಯಾನ್ಸರ್ನಂಥ ಮಾರಕ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಫಾಸ್ಟ್ ಫುಡ್ ಸೇವನೆ ಲಿಮಿಟಿನಲ್ಲಿರಲಿ. ಅಥವಾ ಅದನ್ನು ತ್ಯಜಿಸಿಬಿಡಿ.
ಎಂಟನೇಯ ಆಹಾರ ಮೊಳಕೆ ಬಂದ ಬಟಾಟೆ. ಆಲೂಗಡ್ಡೆ ಆರೋಗ್ಯಕ್ಕೆ ಉತ್ತಮವಾದ ತರಕಾರಿ ಏನಲ್ಲ. ಇದನ್ನ ಲಿಮಿಟಿನಲ್ಲೇ ತಿನ್ನಬೇಕು. ಆದ್ರೆ ಅದು ಮೊಳಕೆ ಬರುವ ಮೊದಲೇ ತಿಂದರೆ ಉತ್ತಮ. ನೀವೇನಾದ್ರೂ ಮೊಳಕೆ ಬಂದ ಬಟಾಟೆಯನ್ನ ಹೆಚ್ಚಾಗಿ ಸೇವಿಸಿದ್ರೆ, ಅದು ನಿಮ್ಮ ಆರೋಗ್ಯವನ್ನ ಹಾಳು ಮಾಡುತ್ತದೆ. ಹಾಗಾಗಿಯೇ ಅದನ್ನ ಸ್ಲೋ ಪಾಯ್ಸನ್ ಎಂದು ಪರಿಗಣಿಸಲಾಗಿದೆ.
ಈ 10 ಆಹಾರಗಳು ಸ್ಲೋ ಪಾಯ್ಸನ್ ಇದ್ದ ಹಾಗೆ.. ಭಾಗ 1
ಒಂಭತ್ತನೇಯ ಆಹಾರ ಮಶ್ರೂಮ್. ಮಶ್ರೂಮ್ ತಿನ್ನುವಾಗ ಅದನ್ನು ಸ್ವಚ್ಛಗೊಳಿಸಿ, ಸರಿಯಾಗಿ ಬೇಯಿಸಿಯೇ ತಿನ್ನಬೇಕು. ಇಲ್ಲದಿದ್ದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.
ಹತ್ತನೇಯ ಆಹಾರ ಸರಿಯಾಗಿ ಬೇಯಿಸದ ಮಾಂಸ. ಸರಿಯಾಗಿ ಬೇಯಿಸದ ಮಾಂಸ ತಿಂದಲ್ಲಿ ಕ್ಯಾನ್ಸರ್ ಸೇರಿ, ಹಲವು ಅನಾರೋಗ್ಯ ಸಮಸ್ಯೆ ಬರುತ್ತದೆ. ಅದರಲ್ಲೂ ಗರ್ಭಿಣಿಯರು ಲಿಮಿಟ್‌ನಲ್ಲಿ ಮಾಂಸಾಹಾರ ಸೇವಿಸಬೇಕು. ಹಾಗೆ ಸೇವಿಸುವಾಗ ಆ ಮಾಂಸವನ್ನು ಸರಿಯಾಗಿ ಬೇಯಿಸಿ ತಿನ್ನಬೇಕು.