Friday, November 14, 2025

Latest Posts

ಪದೇ ಪದೇ ತಲೆಸುತ್ತು ಬರುತ್ತಿದ್ದರೆ, ಈ ಟಿಪ್ಸ್ ಅನುಸರಿಸಿ..

- Advertisement -

ಗರ್ಭಿಣಿಯರಿಗೆ ತಲೆಸುತ್ತು ಬರುವುದು ಕಾಮನ್. ಯಾಕಂದ್ರೆ ಇದು ಗರ್ಭಾವಸ್ಥೆಯ ಲಕ್ಷಣವಾಗಿದೆ. ಆದ್ರೆ ಕಲವರಿಗೆ ಸುಮ್ಮ ಸುಮ್ಮನೆ ತಲೆಸುತ್ತು ಬರುತ್ತದೆ. ಹೀಗೆ ತಲೆಸುತ್ತು ಬರುವವರು ಕೆಲ ಮನೆಮದ್ದುಗಳನ್ನ ಉಪಯೋಗಿಸಬಹುದು. ಹಾಗಾದ್ರೆ ತಲೆಸುತ್ತನ್ನ ತಡೆಯಲು ಇರುವ ಮನೆ ಮದ್ದುಗಳ್ಯಾವುದು ಅಂತಾ ತಿಳಿಯೋಣ ಬನ್ನಿ..

ಮಣ್ಣಿನ ಮಡಿಕೆಯಲ್ಲಿಟ್ಟ ನೀವು ಕುಡಿದರೆ ಅದೆಷ್ಟು ಆರೋಗ್ಯಕರ ಪ್ರಯೋಜನಗಳಿದೆ ಗೊತ್ತಾ..?

ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾದಾಗ, ನಿಶ್ಯಕ್ತಿಯಾಗಿ ತಲೆಸುತ್ತು ಬರುತ್ತದೆ. ಹಾಗಾಗಿ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚು ಮಾಡುವ ಆಹಾರವನ್ನು ಸೇವಿಸಬೇಕು. ಕ್ಯಾರೆಟ್ ಮತ್ತು ಬೀಟ್‌ರೂಟ್ ಸೇವಿಸಿ. ಇಲ್ಲವಾದ ಇದರ ಜ್ಯೂಸ್ ಮಾಡಿಯಾದ್ರೂ ಕುಡಿಯಿರಿ. ಇದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿ, ಸಿಪ್ಪೆ ತೆಗೆದ ಬಾದಾಮ್ ಮತ್ತು ಕಲ್ಲುಸಕ್ಕರೆಯನ್ನ ತಿಂದು, ಬಿಸಿ ಬಿಸಿ ಹಾಲನ್ನು ಕುಡಿಯಿರಿ. ಅಥವಾ ಎರಡು ಖರ್ಜೂರ ತಿಂದು, ಬಿಸಿ ಬಿಸಿ ಹಾಲು ಕುಡಿಯಿರಿ. ಇದರಿಂದಲೂ ದೇಹದಲ್ಲಿ ರಕ್ತ ಹೆಚ್ಚುತ್ತದೆ. ಉಗುರ ಬೆಚ್ಚಗಿನ ನೀರಿನಲ್ಲಿ ಒಂದು ಸ್ಪೂನ್ ನಿಂಬೆ ರಸವನ್ನು ಸೇರಿಸಿ, ಕುಡಿಯಿರಿ. ಪ್ರತಿದಿನ ಒಂದು ತುಳಸಿ ಎಲೆಯ ಸೇವನೆಯಿಂದಲೂ ತಲೆಸುತ್ತುವ ಸಮಸ್ಯೆಯಿಂದ ದೂರ ಉಳಿಸಬಹುದು.

ಹೆಣ್ಣಿನಲ್ಲಿ ಈ 4 ಗುಣಗಳಿದ್ದರೆ, ಆಕೆಯ ಜೀವನ ಅತ್ಯುತ್ತಮವಾಗಿರತ್ತೆ..

ಆದ್ರೆ ನೀವು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಸಮಯಕ್ಕೆ ತಕ್‌ಕಂತೆ ಊಟ, ತಿಂಡಿ ಮಾಡದಿದ್ದಲ್ಲಿ, ನಿಶ್ಯಕ್ತಿ, ಜೀರ್ಣಕ್ರಿಯೆ ಸಮಸ್ಯೆ ಎಲ್ಲ ಉದ್ಭವವಾಗುತ್ತದೆ. ಮುಖ್ಯವಾದ ವಿಷಯ ಅಂದ್ರೆ, ನಾಲ್ಕು ದಿನವಷ್ಟೇ ನೀವು ಮನೆ ಮದ್ದು ಬಳಸಬೇಕು. ಆ ನಾಲ್ಕು ದಿನದಲ್ಲಿ ನಿಮಗೆ ತಲೆಸುತ್ತುವುದು ಕೊಂಚವೂ ಕಂಟ್ರೋಲ್ ಆಗಲಿಲ್ಲವೆಂದಲ್ಲಿ, ತಡಮಾಡದೇ ವೈದ್ಯರ ಬಳಿ ಈ ಬಗ್ಗೆ ಚಿಕಿತ್ಸೆ ಪಡೆದುಕೊಳ್ಳಿ.

- Advertisement -

Latest Posts

Don't Miss