ಪ್ರತಿದಿನ ಸ್ನಾನ ಮಾಡದಿದ್ರೆ ಏನಾಗತ್ತೆ ಮತ್ತು ಸ್ನಾನ ಮಾಡಿದ್ರೆ ಏನಾಗತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಪ್ರತಿದಿನ ಸ್ನಾನ ಮಾಡದಿದ್ರೆ, ಆರೋಗ್ಯ ಹಾಳಾಗತ್ತೆ. ಸೌಂದರ್ಯ ಕೂಡ ಹಾಳಾಗತ್ತೆ. ಮೈ ತುಂಬ ಕೊಳಕು ವಾಸನೆ ಬರತ್ತೆ. ಆದ್ರೆ ಸ್ನಾನವನ್ನ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಮಾಡಿದ್ರೆ ಇನ್ನೂ ಒಳ್ಳೆಯದು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಸೋಪ್ ಆ್ಯಡ್ ಬಂದಾಗ, ಅದರಲ್ಲಿ ಬರುವ ಸುಂದರವಾದ ನಟಿಯರು ಹೇಳ್ತಾರೆ, ನೀವು ಈ ಸೋಪ್ನಿಂದ ಸ್ನಾನ ಮಾಡಿದ್ರೆ, ನಿಮ್ಮ ತ್ವಚೆಯ ಸೌಂದರ್ಯ ಇಮ್ಮಡಿಯಾಗತ್ತೆ. ನೀವು ತಾಯಿಯಾದ್ರೂ, ಯಂಗ್ ಆಗಿ ಕಾಣ್ತೀರಾ, ಹಾಗೆ, ಹೀಗೆ ಇತ್ಯಾದಿ ಮಾತುಗಳನ್ನ ಹೇಳ್ತಾರೆ. ಆದ್ರೆ ಈ ಆ್ಯಡ್ನಲ್ಲಿ ನಟಿಸುವ ನಟಿಯರು ಆ ಸೋಪನ್ನ ಬಳಸೋದಿಲ್ಲಾ. ಯಾಕಂದ್ರೆ ಅದ್ರಲ್ಲಿ ಅಷ್ಟು ಕೆಮಿಕಲ್ ಇರತ್ತೆ. ಹಾಗಾಗಿ ಅಂಥ ಸೋಪ್ ಬಳಕೆಯಿಂದ ತ್ವಚೆ ರಫ್ ಆಗತ್ತೆ.
ಹಾಗಾದ್ರೆ ಸೋಪ್ ಬದಲು ಏನನ್ನು ಹಚ್ಚಿ ಸ್ನಾನ ಮಾಡಬೇಕು ಅಂತಾ ಹೇಳಿದ್ರೆ, ಮುಲ್ತಾನಿ ಮಣ್ಣನ್ನ ಹಚ್ಚಿ ಸ್ನಾನ ಮಾಡ್ಬೇಕು. ಇದನ್ನ ಮುಲ್ತಾನಿ ಮಿಟ್ಟಿ ಅಂತಲೂ ಕರೆಯುತ್ತಾರೆ. ರಾತ್ರಿ ಕೊಂಚ ಮೊಸರು ಮತ್ತು ಮುಲ್ತಾನಿ ಮಿಟ್ಟಿಯನ್ನ ಮಿಕ್ಸ್ ಮಾಡಿ ಇಡಿ. ಮರುದಿನ, ಸಾಬೂನು ಬಳಸಿದ ಹಾಗೆ ಇದನ್ನು ಬಳಸಿ, ಸ್ನಾನ ಮಾಡಿ.
ಕಡಲೆ ಹಿಟ್ಟನ್ನ ಕೂಡ ನೀವು ಬಳಸಬಹುದು. ಕಡಲೆ ಹಿಟ್ಟು ಮತ್ತು ಹಾಲಿನ ಕೆನೆ ಮಿಕ್ಸ್ ಮಾಡಿ, ರಾತ್ರಿ ನೆನೆಸಿಡಿ. ಮರುದಿನ ಸ್ನಾನ ಮಾಡುವಾಗ, ಸೋಪ್ ರೀತಿ ಇದನ್ನು ಬಳಸಿ, ಸ್ನಾನ ಮಾಡಿ. ಮಸೂರ್ ದಾಲ್ ತಂದು ಅದರ ಹಿಟ್ಟು ಮಾಡಿ, ಇದೇ ರೀತಿ ಬಳಸಬಹುದು.
ಆದ್ರೆ ಒಂದು ವಿಚಾರ ನೆನಪಿರಲಿ, ಕಡಲೆ ಹಿಟ್ಟು, ಮುಲ್ತಾನಿ ಮಿಟ್ಟಿ ಮತ್ತು ಮಸೂರ್ ದಾಲ್ ಹಿಟ್ಟು ಬಳಸುವಾಗ, ಅದನ್ನು ಕೊಂಚ ನಿಮ್ಮ ಕೈಗೆ ಹಚ್ಚಿ, ಕೊಂಚ ಹೊತ್ತು ಬಿಟ್ಟು ಕ್ಲೀನ್ ಮಾಡಿಕೊಳ್ಳಿ. ಇದರಿಂದ ನಿಮಗೆ ಯಾವುದೇ ಅಲರ್ಜಿಯಾಗಲಿಲ್ಲವೆಂದಲ್ಲಿ ಮಾತ್ರ ಆ ಹಿಟ್ಟನ್ನು ಬಳಸಿ, ಇಲ್ಲವಾದಲ್ಲಿ ಆ ಹಿಟ್ಟಿನ ಬಳಕೆ ಮಾಡಬೇಡಿ..