ಮನೆಯಲ್ಲಿ ಅನ್ನ ಉಳಿದ್ರೆ, ಅದನ್ನ ಚೆಲ್ಲಿಬಿಡ್ತಾರೆ. ಇಲ್ಲಾದ್ರೆ ಮರುದಿನ ಚಿತ್ರಾನ್ನ ಮಾಡಿಕೊಂಡು ತಿಂತಾರೆ. ಆದ್ರೆ ನೀವು ಉಳಿದ ಅನ್ನದಿಂದ ಸ್ನ್ಯಾಕ್ಸ್ ಕೂಡ ತಯಾರು ಮಾಡಬಹುದು. ಮಧ್ಯಾಹ್ನ ಮಾಡಿದ ಅನ್ನದಲ್ಲಿ ಸ್ವಲ್ಪ ಅನ್ನ ಉಳಿದ್ರು ಸಂಜೆ ಈ ತಿಂಡಿ ಮಾಡಿ ತಿನ್ನಬಹುದು. ಇದನ್ನ ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಅನ್ನ, ಅರ್ಧ ಕಪ್ ಮೊಸರು, ಒಂದು ಕಪ್ ಅಕ್ಕಿ ಹಿಟ್ಟು, ಕೊಂಚ ಜೀರಿಗೆ, 1 ಸ್ಪೂನ್ ಹಸಿ ಮೆಣಸಿನಕಾಯಿ, 10 ಎಸಳು ಕರಿಬೇವು, ಕೊತ್ತೊಂಬರಿ ಸೊಪ್ಪು, ಕಾಲು ಸ್ಪೂನ್ ಬೇಕಿಂಗ್ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ.
ಮಾಡುವ ವಿಧಾನ: ಮೊದಲು ಅನ್ನ ಮತ್ತು ಕೊಂಚ ನೀರು ಹಾಕಿ, ಮಿಕ್ಸಿ ಜಾರ್‌ನಲ್ಲಿ ರುಬ್ಬಿಕೊಳ್ಳಿ. ಇದನ್ನ ಒಂದು ಬೌಲ್‌ಗೆ ಹಾಕಿ. ಈ ಪೇಸ್ಟ್‌ಗೆ ಅರ್ಧ ಕಪ್ ಮೊಸರು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಅಕ್ಕಿ ಹಿಟ್ಟು ಸೇರಿಸಿ. ಜೊತೆಗೆ ಜೀರಿಗೆ, ಉಪ್ಪು, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವು, ಕೊತ್ತೊಂಬರಿ ಸೊಪ್ಪು, ಬೇಕಿಂಗ್ ಸೋಡಾ, ಮತ್ತು ನೀರು ಸೇರಿಸಿ, ಬಜ್ಜಿ ಹಿಟ್ಟಿನ ಹದಕ್ಕೆ ಕಲಿಸಿ.
ಎಣ್ಣೆ ಕಾಯಿಸಲು ಇಟ್ಟು, ಎಣ್ಣೆ ಕಾದ ಬಳಿಕ, ರೆಡಿ ಮಾಡಿಟ್ಟುಕೊಂಡ ಮಿಶ್ರಣದಿಂದ ಬಜ್ಜಿ ಕರಿದರೆ ತಿಂಡಿ ರೆಡಿ. ಇದನ್ನು ಚಟ್ನಿ ಅಥವಾ ಸಾಸ್ ಜೊತೆ ಸವಿಯಬಹುದು.
ಹಸಿ ಹಾಲು(ಕಾಯಿಸದ ಹಾಲು) ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ..? ನಷ್ಟವೋ..?