ಮೆಂತ್ಯೆಸೊಪ್ಪು ಆರೋಗ್ಯಕ್ಕಷ್ಟೇ ಉತ್ತಮವಲ್ಲ. ಬದಲಾಗಿ ರುಚಿಕರವೂ ಹೌದು. ಇದರಿಂದ ತಯಾರಿಸಲ್ಪಡುವ ತಿಂಡಿ ಸಖತ್ ಟೇಸ್ಟಿಯಾಗಿರತ್ತೆ. ನಾವಿಂದು ಮೆಂತ್ಯೆಸೊಪ್ಪು ಮತ್ತು ಕಡಲೆ ಹಿಟ್ಟು ಬಳಸಿ ತಯಾರಿಸಬಹುದಾದ ತಿಂಡಿಯ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಈ ತಿಂಡಿ ತಯಾರಿಸೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಮೆಂತ್ಯೆಸೊಪ್ಪು, ಒಂದು ಕಪ್ ಗೋಧಿ ಹಿಟ್ಟು, 3 ಟೇಬಲ್ ಸ್ಪೂನ್ ಕಡಲೆ ಹಿಟ್ಟು, ಕೊಂಚ ಕೊತ್ತೊಂಬರಿ ಸೊಪ್ಪು, ಎರಡು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಅರ್ಧ ಕಪ್ ಟೊಮೆಟೋ ಪ್ಯೂರಿ, ಚಿಟಿಕೆ ಅರಿಶಿನ ಪುಡಿ, ಅರ್ಧ ಸ್ಪೂನ್ ಖಾರದ ಪುಡಿ, ಒಂದು ಸ್ಪೂನ್ ವೋಮದ ಕಾಳು, ಶುಂಠಿ ಪೇಸ್ಟ್, ಅರ್ಧ ಸ್ಪೂನ್ ಜೀರಿಗೆ ಪುಡಿ, ಹಿಟ್ಟು ಕಲಿಸಲು ಮತ್ತು ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಮೆಂತ್ಯೆ ಸೊಪ್ಪು ಮತ್ತು ಉಪ್ಪನ್ನು ಹಾಕಿ ಮಿಕ್ಸ್ ಮಾಡಿ. ಈಗ ಇದಕ್ಕೆ ಗೋಧಿಹಿಟ್ಟು, ಕಡಲೆ ಹಿಟ್ಟು, ಕೊತ್ತೊಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಟೊಮೆಟೋ ಪ್ಯೂರಿ, ಅರಿಶಿನ ಪುಡಿ, ಮೆಣಸಿನ ಪುಡಿ, ವೋಮದ ಕಾಳು, ಶುಂಠಿ ಪೇಸ್ಟ್, ಜೀರಿಗೆ ಪುಡಿ, ಇವೆಲ್ಲವನ್ನೂ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಜೊತೆಗೆ ಚಪಾತಿ ಹಿಟ್ಟು ಕಲಿಸಲು ಬೇಕಾದಷ್ಟು ನೀರು ಮತ್ತು ತುಪ್ಪ ಹಾಕಿ ಹಿಟ್ಟು ತಯಾರಿಸಿ. ಈಗ ಪುರಿಯಂತೆ ಲಟ್ಟಿಸಿ, ಕರಿದರೆ ಮೆಂತ್ಯೆ ಪೂರಿ ರೆಡಿ..