Friday, September 20, 2024

Latest Posts

Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 2

- Advertisement -

ಇದಕ್ಕೆ ಸಂಬಂಧಿಸಿದಂತೆ ನಾವು ನಿಮಗೆ, ವಿದ್ಯೆ ಕಲಿಯದವರು ಕೂಡ, ಮಾಡಬಹುದಾದ ಕೆಲಸದಲ್ಲಿ 5 ಕೆಲಸದ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಕೆಲಸಗಳ ಬಗ್ಗೆ ಹೇಳಲಿದ್ದೇವೆ.

ಆರನೇಯ ಕೆಲಸ ಪೇಪರ್ ಪ್ಲೇಟ್ ಮೇಕಿಂಗ್ ಬ್ಯುಸಿನೆಸ್. ಪೇಪರ್ ಪ್ಲೇಟ್, ಹಾಳೆ ತಟ್ಟೆಯನ್ನ ಜನ ಹೆಚ್ಚಾಗಿ ಬಳಸುತ್ತಿದ್ದಾರೆ. ಹಾಗಾಗಿ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಆದ್ರೆ ಇದಕ್ಕೆ ಕೊಂಚ ಹೆಚ್ಚು ಬಂಡವಾಳ ಬೇಕಾಗುತ್ತದೆ. 2 ಲಕ್ಷದತನಕ ಈ ಪ್ಲೇಟ್ ತಯಾರಿಸುವ ಮಷಿನ್ ಸಿಗುತ್ತದೆ. ಈ ಮಷಿನ್, ಮಷಿನ್ ಇಡಲು ಜಾಗ, ಕೆಲ ಕಚ್ಚಾ ವಸ್ತು, ಮತ್ತು ಓರ್ವ ಕೆಲಸಗಾರನಿದ್ದರೆ, ನೀವು ಪ್ಲೇಟ್ ತಯಾರಿಸಬಹುದು. ನಿಮ್ಮ ಉದ್ಯಮದಲ್ಲಿ ಲಾಭ ಹೆಚ್ಚಾಗುತ್ತಿದ್ದಂತೆ, ನೀವು ಇನ್ನಷ್ಟು ಕೆಲಸಗಾರರನ್ನು ಇಟ್ಟುಕೊಳ್ಳಬಹುದು.

ಕಾಲೇಜು ಮತ್ತು ಆಫೀಸಿನಲ್ಲಿ ಮಹಿಳಾ ದಿನಾಚರಣೆಯನ್ನು ಈ ರೀತಿ ಸೆಲೆಬ್ರೇಟ್ ಮಾಡಬಹುದು ನೋಡಿ..

ಏಳನೇಯ ಕೆಲಸ ಬ್ಯಾಗ್, ಪರ್ಸ್, ಮಾಡಿ ಮಾರೋದು. ಬಟ್ಟೆಯಿಂದ, ವಾಯರ್‌ನಿಂದ, ಮತ್ತು ಇನ್ನೂ ಕೆಲ ವಸ್ತುಗಳನ್ನ ಬಳಸಿ, ತಯಾರಿಸಿದ ಬ್ಯಾಗ್, ಪರ್ಸ್‌ಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ಹಾಗಾಗಿ ನೀವು ಚಂದವಾಗಿ ಪರ್ಸ್, ಬ್ಯಾಗ್ ತಯಾರಿಸಿದ್ರೆ, ಅದನ್ನ ಆನ್‌ಲೈನ್‌ನಲ್ಲಿ ಮಾರಬಹುದು. ಅಥವಾ ನೀವೇ ಒಂದು ಅಂಗಡಿ ಇಡಬಹುದು. ಇವೆರಡೂ ಆಗದಿದ್ದಲ್ಲಿ, ಹತ್ತಿರದಲ್ಲಿರುವ ಶಾಪ್‌ನಲ್ಲಿ ಈ ಬ್ಯಾಗ್‌ಗಳನ್ನ ಮಾರಾಟಕ್ಕಿಡಬಹುದು.

ಎಂಟನೇಯ ಕೆಲಸ ಜ್ಯೂಸ್ ಶಾಪ್ ನಡೆಸುವುದು. ಇದರ ಬದಲು ನೀವು ಚಿಕ್ಕದಾಗಿ, ಟೀ, ಕಾಫಿ, ಸ್ಯಾಂಡವಿಚ್ ಅಂಗಡಿ ಕೂಡ ಇಡಬಹುದು. ಯಾಕಂದ್ರೆ ಇದಕ್ಕೆ ಬಂಡವಾಳ ಕಡಿಮೆ ಇರತ್ತೆ. ಟೀ, ಕಾಫಿ, ಜ್ಯೂಸ್ ಸೇರಿ, ನೀವು ಮಾರುವ ಪಾನೀಯ, ತಿಂಡಿ ಹೇಗೆ ಮಾಡೋದು ಅಂತಾ ನಿಮಗೆ ಗೊತ್ತಿರಬೇಕು. ಬಾಡಿಗೆ ಕಡಿಮೆ ಇದ್ದೂ, ಜನಜಂಗುಳಿ ಇರುವ ಪ್ರದೇಶ ಸಿಕ್ಕರೆ ಇನ್ನೂ ಒಳ್ಳೆಯದು. ಇದಕ್ಕಾಗಿ ನೀವು ಇನ್ನೊಬ್ಬರನ್ನ ಕೆಲಸಕ್ಕಿಟ್ಟುಕೊಳ್ಳಬಹುದು.

ಒಂಭತ್ತನೇಯ ಕೆಲಸ ಸಾರಿ ಪ್ಲೇಟಿಂಗ್, ಹೇರ್ ಸ್ಟೈಲಿಶ್ ಬ್ಯುಸಿನೆಸ್. ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ತಮ್ಮ ಎಂಗೇಜ್‌ಮೆಂಟ್, ಮದುವೆ, ಸೀಮಂತ ಪದ್ಧತಿ ಪ್ರಕಾರ ಆಗದಿದ್ದರೂ, ಮೇಕಪ್ ಮಾತ್ರ ಪರ್ಫೆಕ್ಟ್ ಆಗಿರಬೇಕು ಅಂತಾ ಬಯಸುತ್ತಾರೆ. ಬರೀ ಮೇಕಪ್ ಸರಿ ಆದ್ರೆ ಸಾಕಾ..? ಉಟ್ಟಿರೋ ಸೀರೆ ಮೈಗಂಟಿದ ಹಾಗೆ, ಸೂಪರ್ ಆಗಿ ಕಾಣ್ಬೇಕು. ಇನ್ನು ಹೆಣ್ಣಿನ ಸೌಂದರ್ಯ ಹೆಚ್ಚಿಸೋದು, ಹೇರ್ ಸ್ಟೈಲ್. ಚೆನ್ನಾಗಿರುವ ಹೇರ್‌ಸ್ಟೈಲ್ ನಿಂದ ಮಧುಮಗಳು ಇನ್ನೂ ಚೆಂದಗಾಣಿಸ್ತಾಳೆ.

WOMEN’S DAY SPECIAL- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 1

ಅದಕ್ಕಾಗಿಯೇ ಸಪರೇಟ್ ಆಗಿ ಹೇರ್‌ಸ್ಟೈಲ್‌ ಮತ್ತು ಸೀರೆ ಉಡಿಸುವವರೇ ಇರ್ತಾರೆ. ಅವರು ಸೀರೆಯನ್ನ ನೀಟಾಗಿ ಪ್ಲೇಟಿಂಗ್ ಮಾಡಿ, ಐರನ್ ಮಾಡಿ ಸೀರೆ ಉಡಿಸುತ್ತಾರೆ. ಅದಕ್ಕಾಗಿ ಇಂತಿಷ್ಟು ಅಂತಾ ಚಾರ್ಜ್ ಕೂಡಾ ಮಾಡ್ತಾರೆ. ಜೊತೆಗೆ ಮೇಕಪ್ ಆರ್ಟಿಸ್ಟ್ ಜೊತೆ, ಹೇರ್ ಸ್ಟೈಲಿಶ್ ಕೂಡ ಇರ್ತಾರೆ. ಅವರಿಗೂ ಸಪರೇಟ್ ಆಗಿ ಚಾರ್ಜ್ ಮಾಡಲಾಗತ್ತೆ. ಹಾಗಾಗಿ ಹೇರ್ ಸ್ಟೈಲಿಂಗ್ ಕೋರ್ಸ್ ಮಾಡಿ, ಈ ಕೆಲಸವನ್ನು ಮಾಡಬಹುದು.

ಹತ್ತನೇಯ ಕೆಲಸ ಮಣ್ಣಿನ ಆಭರಣ ಮಾಡಿ ಮಾರೋದು. ಇದನ್ನ ಟೆರೆಕೊಟ್ಟಾ ಜ್ಯುವೆಲ್ಲರಿ ಬ್ಯುಸಿನೆಸ್‌ ಅಂತಾ ಹೇಳ್ತಾರೆ. ಈ ಆಭರಣ ತಯಾರಿಸಲು ಮಣ್ಣಿನ ಬಳಕೆ ಮಾಡಲಾಗತ್ತೆ. ಈ ಆಭರಣ ತಯಾರಿಸುವುದನ್ನ ಹೇಳಿಕೊಡಲಾಗತ್ತೆ.  ಅಂಥ ಕ್ಲಾಸನ್ನ ನೀವು ಅಟೆಂಡ್ ಮಾಡಬೇಕು. ಇದಾದ ಬಳಿಕ ಹೊಸ ಹೊಸ ಡಿಸೈನ್ ಇರುವ ಆಭರಣ ತಯಾರಿಸಿದ್ರೆ, ನಿಮ್ಮ ಆಭರಣಕ್ಕೆ ಬೇಡಿಕೆ ಹೆಚ್ಚಾಗತ್ತೆ. ನೀವು ಇದನ್ನ ಆನ್‌ಲೈನ್, ಅಥವಾ ಹತ್ತಿರದ ಅಂಗಡಿಗಳಲ್ಲಿ ಮಾರಾಟ ಮಾಡಬಹುದು. ಡೈರೆಕ್ಟ್‌ ಬರೋಕ್ಕೆ ಶುರುವಾದ ಮೇಲೆ ನೀವೇ ಆಭರಣ ಮಾರಾಟ ಮಾಡಬೇಕು.

- Advertisement -

Latest Posts

Don't Miss