ನಮಗೆ ನೈಸರ್ಗಿಕವಾಗಿ ಸಿಕ್ಕ ಕೆಲವು ವಸ್ತುಗಳು ಬರೀ ಆರೋಗ್ಯಕ್ಕಷ್ಟೇ, ಅಥವಾ ಬರೀ ಸೌಂದರ್ಯಕ್ಕಷ್ಟೇ ಬಳಕೆಯಾಗುತ್ತಿಲ್ಲ. ಇದರಿಂದ ಆರೋಗ್ಯ, ಸೌಂದರ್ಯ ಮತ್ತು ಕೂದಲಿನ ಸೌಂದರ್ಯವನ್ನ ಕೂಡ ಉತ್ತಮ ಮಾಡಿಕೊಳ್ಳಬಹುದು. ಹಾಗಾದ್ರೆ ಯಾವುದು ಆ ವಸ್ತು ಅಂತಾ ತಿಳಿಯೋಣ ಬನ್ನಿ..
ಆರೋಗ್ಯ, ಸೌಂದರ್ಯ ಮತ್ತು ಕೂದಲು ಚೆನ್ನಾಗಿರಲು ನಾವು ಬಳಸಬೇಕಾದ ಒಂದೇ ಒಂದು ವಸ್ತು ಅಂದ್ರೆ, ಆ್ಯಲೋವೆರಾ ಜೆಲ್. ನ್ಯಾಚುರಲ್ ಆ್ಯಲೋವೆರಾವನ್ನ ಕುಮಾರಿ ಎಂದು ಕರೆಯಲಾಗತ್ತೆ. ಯಾಕಂದ್ರೆ ಇಂದು ಸೌಂದರ್ಯವನ್ನ ಹೆಚ್ಚಿಸಿ, ನಾವು ಯವ್ವನಯುತರಾಗಿರುವಂತೆ ಮಾಡತ್ತೆ. ಹಾಗಾಗಿ ಇದನ್ನ ಕುಮಾರಿ ಗಿಡ ಅಂತಲೂ ಕರೆಯುತ್ತಾರೆ.
ಆಲ್ಯೋವೆರಾ ಜ್ಯೂಸನ್ನ ಸರಿಯಾದ ರೀತಿಯಲ್ಲಿ ಕುಡಿದರೆ, ಇದು ದೇಹಕ್ಕೆ ತಂಪನ್ನ ನೀಡತ್ತೆ. ಶುಗರ್ ಲೇವಲ್ ಕಂಟ್ರೋಲ್ ಮಾಡತ್ತೆ. ನಿಮ್ಮ ಸೌಂದರ್ಯ ಅಭಿವೃದ್ಧಿ ಮಾಡತ್ತೆ. ನೀವು ಆ್ಯಲೋವೆರವನ್ನ ಮುಖಕ್ಕೆ ಹಚ್ಚಿ ಮಸಾಜ್ ಮಾಡಿದ್ರೆ, ನಿಮ್ಮ ಮುಖ ಕ್ಲೀನ್ ಆ್ಯಂಡ್ ಕ್ಲೀಯರ್ ಆಗಿರತ್ತೆ. ಇಷ್ಟೇ ಅಲ್ಲದೇ, ವಾರಕ್ಕೆ ಎರಡು ಬಾರಿ ಕೂದಲ ಬುಡಕ್ಕೆ ಆ್ಯಲೋವೆರಾ ಜೆಲ್ ಹಚ್ಚಿ ಮಸಾಜ್ ಮಾಡಿದ್ರೆ, ಕೂದಲ ಬುಡ ಗಟ್ಟಿಯಾಗತ್ತೆ.
ನಿಮ್ಮ ಕಣ್ಣು ಉರಿಯುತ್ತಿದ್ದರೆ, ಕರ್ಚೀಫ್‌ಗೆ ಕೊಂಚ ಆ್ಯಲೋವೆರಾ ಜೆಲ್ ಹಚ್ಚಿ, ಅದನ್ನ ಕಣ್ಣಿಗೆ ಹಚ್ಚಿಕೊಳ್ಳುವುದರಿಂದ ಕಣ್ಣು ಉರಿ ಕಡಿಮೆಯಾಗತ್ತೆ. ರಾತ್ರಿ ಮಲಗುವಾಗ ಆ್ಯಲೋವೆರಾವನ್ನ ಮುಖಕ್ಕೆ ಮಸಾಜ್ ಮಾಡಿ ಮಲಗಿದ್ರೆ, ನಿಮ್ಮ ಮುಖದಲ್ಲಿರುವ ಮೊಡವೆ ಕಲೆ ಒಂದು ವಾರದಲ್ಲಿ ಮಾಯವಾಗತ್ತೆ. ಅಲ್ಲದೇ ನೀವು ಯಂಗ್ ಆಗಿ ಕಾಣುವಂತೆ ಮಾಡುವಲ್ಲಿಯೂ ಆ್ಯಲೋವೆರಾ ಜೆಲ್ ಸಹಾಯಕವಾಗಿದೆ.
Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 2