Tuesday, July 22, 2025

Latest Posts

ಮುಖದ ಮೇಲಿರುವ ಮೊಡವೆ ಕಲೆ ನಿವಾರಣೆಗೆ ಉಪಾಯ..

- Advertisement -

ಮುಖದ ಮೇಲಾಗುವ ಗುಳ್ಳೆ ಅಥವಾ ಮೊಡವೆಗಿಂತ, ಅದು ಹೋದ ಮೇಲೆ ಉಳಿಯುವ ಕಲೆಯೇ, ಉಪದ್ರ ಕೊಡುವುದು. ಹಾಗಾಗಿ ಹಲವರು ಮೊಡವೆ ಕಲೆ ನಿವಾರಣೆಗೆ ಮದ್ದು ಹುಡುಕುತ್ತಿರುತ್ತಾರೆ. ಹಾಗಾಗಿ ನಾವಿಂದು ಮೊಡವೆ ಕಲೆ ಹೋಗಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.

ನಿಮ್ಮ ಮುಖದ ಮೇಲಿನ ಕಲೆ ಹೋಗಿ, ನಿಮ್ಮ ಮುಖದಲ್ಲಿ ಕಾಂತಿ ಬರಲು, ನೀವು ಯೋಗ, ಧ್ಯಾನ ಮಾಡಬೇಕು. ಕಪಾಲ ಭಾತಿಯನ್ನು ಸರಿಯಾದ ಕ್ರಮದಲ್ಲಿ ಮಾಡಿದ್ರೆ, ನಿಮ್ಮ ಮುಖದಲ್ಲಿ ಮೊಡವೆಯಾಗುವುದಿಲ್ಲ. ಅದರ ಕಲೆಯೂ ಉಳಿಯುವುದಿಲ್ಲ. ಅಲ್ಲದೇ ಉಜ್ಜಯಿ ಪ್ರಾಣಾಯಾಮವನ್ನ ಮಾಡುವುದರಿಂದಲೂ, ನಿಮ್ಮ ಮುಖದಲ್ಲಿ ಹೊಳಪಿರುತ್ತದೆ. ಯಾಕಂದ್ರೆ ಇದನ್ನ ಮಾಡುವುದರಿಂದ ನಮ್ಮ ಲಿವರ್ ಚೆನ್ನಾಗಿರತ್ತೆ. ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ ಸಮಸ್ಯೆ ಎಲ್ಲ ಬರೋದಿಲ್ಲಾ.

ಇನ್ನು ಸಿಂಹಾಸನ ಎಂಬ ಆಸನ ಮಾಡಿ, ಸಿಂಹ ಘರ್ಜನೆಯಂತೆ ನೀವು ಸೌಂಡ್ ಮಾಡಬೇಕು. ಇದನ್ನು ಮಾಡುವುದರಿಂದಲೂ, ನಿಮ್ಮ ಶ್ವಾಸಕೋಶದ ಆರೋಗ್ಯ ಚೆನ್ನಾಗಿರತ್ತೆ. ನಿಮ್ಮ ತ್ವಚೆಯ ಆರೋಗ್ಯ ಉತ್ತಮವಾಗಿರತ್ತೆ.  ವರುಣ ಮುದ್ರೆ ಮಾಡಿದ್ರೆ, ನಿಮ್ಮ ದೇಹದಲ್ಲಿರುವ ನೀರಿನ ಅಂಶ ಬ್ಯಾಲೆನ್ಸ್‌ನಲ್ಲಿರತ್ತೆ. ಇಷ್ಟೇ ಅಲ್ಲದೇ, ಒಂದು ಸ್ಪೂನ್ ಮಜ್ಜಿಗೆ. ಒಂದು ಸ್ಪೂನ್ ನಿಂಬೆರಸವನ್ನ ಮಿಕ್ಸ್ ಮಾಡಿ, ನಿಮ್ಮ ಮುಖಕ್ಕೆ ಹಚ್ಚಿ , ಮೃದುವಾಗಿ ಮಸಾಜ್ ಮಾಡಿ. 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಒಂದು ಸ್ಪೂನ್ ಜೇನುತುಪ್ಪ ಮತ್ತು ಒಂದು ಸ್ಪೂನ್ ಟೊಮೆಟೋ ಅಥವಾ ಪಪ್ಪಾಯಿ ಪೇಸ್ಟ್ ಸೇರಿಸಿ, ಮುಖಕ್ಕೆ ಹಚ್ಚಿ ಮಸಾಜ್ ಮಾಡಿ, 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ನ್ಯಾಚುರಲ್ ಆ್ಯಲೋವೆರಾ ಜೆಲ್ ಹಚ್ಚಿದ್ರೆ ಉತ್ತಮ.

ಗಾಢವಾಗಿ ನಿದ್ದೆ ಮಾಡಲು ರಾತ್ರಿ ಮಲಗುವಾಗ ಇದನ್ನು ಕುಡಿಯಿರಿ..

ಮುಲ್ತಾನಿ ಮಿಟ್ಟಿಯನ್ನ ಹೇಗೆಲ್ಲಾ ಬಳಸಬಹುದು..? ಇದರಿಂದಾಗುವ ಲಾಭವೇನು..?

ಕೂದಲು ದಪ್ಪಗಾಗಲು ಹೀಗೆ ಮಾಡಿ..

- Advertisement -

Latest Posts

Don't Miss