Friday, September 20, 2024

Latest Posts

ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 1

- Advertisement -

ಮೊದಲೆಲ್ಲ ಶ್ರೀಮಂತರಿಗಷ್ಟೇ ಸಕ್ಕರೆ ಖಾಯಿಲೆ ಬರ್ತಿತ್ತು ಅಂತಾ ಹೇಳ್ತಿದ್ರು. ಯಾಕಂದ್ರೆ ಅವರಿಗೆ ಟೆನ್ಶನ್‌ ಹೆಚ್ಚಿರ್ತಿತ್ತು. ಆದ್ರೆ ಇತ್ತೀಚೆಗೆ ಶುಗರ್ ಅಂದ್ರೆ ಕಾಮನ್ ಆಗಿಬಿಟ್ಟಿದೆ. ಹಲವರಿಗೆ ಶುಗರ್ ಬರುತ್ತಿದೆ. ಅಂಥವರಿಗೆ ಮಾತ್ರೆಯೇ ಊಟವಾಗಿ ಬಿಟ್ಟಿದೆ. ಸಿಹಿ ತಿನ್ನಬೇಕು ಅನ್ನಿಸಿದ್ರೂ, ತಿನ್ನುವ ಹಾಗಿಲ್ಲ. ಆದ್ರೆ ನಾವಿಂದು ಹೇಳು ಟಿಪ್ಸ್ ನೀವು ಫಾಲೋ ಮಾಡಿದ್ರೆ, ಸಕ್ಕರೆ ಖಾಯಿಲೆಯನ್ನು ನೀವು ಕಂಟ್ರೋಲ್ ಮಾಡಬಹುದು. ಈ ಔಷಧಿ ನಿಮ್ಮ ಮೇಲೆ ಉತ್ತಮ ಪರಿಣಾಮ ಬೀರಿದ್ರೆ, ಸಕ್ಕರೆ ಖಾಯಿಲೆ ಬುಡದಿಂದಲೇ ಕಡಿಮೆಯಾಗತ್ತೆ.

ನಾವು ಎಷ್ಟು ರಿಫೈಂಡ್ ಎಣ್ಣೆ, ಪಾಮ್ ಆಯ್ಲ್, ಡಾಲ್ಡಾ ಬಳಕೆ ಮಾಡ್ತೇವೋ, ಅಷ್ಟು ರೋಗ ರುಜಿನಗಳು ಹೆಚ್ಚಾಗತ್ತೆ. ಅದರಲ್ಲೂ ಇದರ ಸೇವನೆಯಿಂದ ಬಿಪಿ, ಶುಗರ್ ಹೆಚ್ಚಾಗತ್ತಾ ಹೋಗತ್ತೆ. ಹಾಗಾಗಿ ನಿಮಗೆ ಬಿಪಿ, ಶುಗರ್ ಬಂದ್ರೆ, ನೀವು ರಿಫೈಂಡ್ ಎಣ್ಣೆ, ಪಾಮ್ ಆಯ್ಲ್, ಡಾಲ್ಡಾ ಬಳಕೆ ಮಾಡೋದನ್ನ ನಿಲ್ಲಿಸಿಬಿಡಿ. ಅಲ್ಲದೇ, ಮಾಂಸಾಹಾರ ಸೇವನೆ ಮಾಡಬೇಡಿ. ಮೊಟ್ಟೆ ಸೇವನೆಯೂ ಮಾಡಬಾರದು.

ಎಂಥ ಆಹಾರ ಸೇವನೆ ಮಾಡಬೇಕು ಅಂದ್ರೆ, ಆ ಆಹಾರದಲ್ಲಿ ಫೈಬರ್ ಅಂಶ ಹೆಚ್ಚಾಗಿರಬೇಕು. ಅಂಥ ಆಹಾರ ಸೇವನೆ ಮಾಡಬೇಕು. ಹೆಸರು ಕಾಳು, ಮಸೂರಿ ಕಾಳು, ಕಡಲೆ ಕಾಳು, ತೊಗರಿ ಬೇಳೆ, ಇವಿಷ್ಟರಲ್ಲಿ ಫೈಬರ್ ಅಂಶ ಹೆಚ್ಚಾಗಿರತ್ತೆ. ಹಾಗಾಗಿ ಇದರ ಸೇವನೆ ಸರಿಯಾಗಿ ಮಾಡಿ. ಉದ್ದಿನ ಬೇಳೆ, ಸೋಯಾಬಿನ್‌ನಲ್ಲಿ ಫೈಬರ್ ಅಂಶ ಅತೀ ಕಡಿಮೆ ಇದ್ದು, ಇದರ ಸೇವನೆ ಮಾಡಬೇಡಿ. ಈ ರೀತಿಯಾಗಿ ಆಹಾರ ಸೇವನೆ ಮಾಡಿದ್ರೆ, ಬಿಪಿ, ಶುಗರ್ ಕಂಟ್ರೋಲ್ ಮಾಡಬಹುದು.

ಅಲ್ಲದೇ, ನೀವು ಜೋಳದ ರೊಟ್ಟಿ, ಹಸಿ ತರಕಾರಿ, ತುಪ್ಪ, ಮೊಸರು ತಿಂದ್ರೆ, ಅದಕ್ಕಿಂತ ಅತ್ಯುತ್ತಮ ಆಹಾರ ಮತ್ತೊಂದಿಲ್ಲ. ಜೋಳದ ರೊಟ್ಟಿಯಲ್ಲಿ ಫೈಬರ್ ಕಂಟೆಂಟ್ ಇದ್ದು, ಇದು ಶುಗರ್ ಕಂಟ್ರೋಲ್ ಮಾಡಲು ಸಹಾಯ ಮಾಡತ್ತೆ. ಇದರೊಂದಿಗೆ ಅಕ್ಕಿಯ ಮತ್ತು ಗೋಧಿಯ ಸೇವನೆ ಕಡಿಮೆ ಮಾಡಿ. ಅಂದ್ರೆ ಅನ್ನ ಮತ್ತು ಚಪಾತಿ ಸೇವನೆ ಕಡಿಮೆ ಮಾಡಿ.

ನಿಮಗೆ ಅನ್ನ ಸೇವಿಸಲೇಬೇಕು ಎಂದರೆ, ಕೆಂಪಕ್ಕಿ, ರಾಜಮುಡಿ ಅಕ್ಕಿಯ ಅನ್ನವನ್ನ ತಿನ್ನಿ. ಇದರಿಂದ ಬಿಪಿ, ಶುಗರ್ ಸಮಸ್ಯೆ ಕಡಿಮೆಯಾಗುವುದಲ್ಲದೇ, ಗ್ಯಾಸ್ಟಿಕ್ ಸಮಸ್ಯೆ ಕೂಡ ಕಡಿಮೆಯಾಗತ್ತೆ. ಆದ್ರೆ ನೀವು ಅನ್ನ ಮಾಡುವಾಗ, ಮಣ್ಣಿನ ಪಾತ್ರೆಯಲ್ಲಿ ಅನ್ನ ಮಾಡಿ. ಮತ್ತು ಅದರ ಗಂಜಿಯನ್ನ ಸಪರೇಟ್ ಮಾಡಿ. ಕುಕ್ಕರ್‌ನಲ್ಲಿ ಅನ್ನ ಬೇಯಿಸಿದ್ರೆ, ಆ ಗಂಜಿ ಅದರೊಟ್ಟಿಗೆ ಸೇರುತ್ತದೆ. ಮತ್ತು ಕುಕ್ಕರ್ ಆಹಾರ ತಿನ್ನೋದು ಆರೋಗ್ಯಕ್ಕೆ ಉತ್ತಮವಲ್ಲ. ಹಾಗಾಗಿ ಕುಕ್ಕರ್‌ನಲ್ಲಿ ಅನ್ನ ಬೇಯಿಸಿ ಸೇವಿಸಬೇಡಿ. ಬಿಪಿ ಮತ್ತು ಶುಗರ್ ಕಂಟ್ರೋಲ್ ಮಾಡುವ ಇನ್ನೂ ಕೆಲವು ಟಿಪ್ಸ್ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

ಮಂಡಿ, ಮೊಣಕೈ, ಕಂಕುಳ ಚರ್ಮದ ಬಣ್ಣವನ್ನ ಈ ರೀತಿ ತಿಳಿಯಾಗಿಸಿ..

ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..

ಆರೋಗ್ಯ, ಸೌಂದರ್ಯ ಮತ್ತು ಕೂದಲು ಚೆನ್ನಾಗಿರಲು ಇದೊಂದೇ ವಸ್ತು ಸಾಕು..

- Advertisement -

Latest Posts

Don't Miss