ಇದರ ಮೊದಲ ಭಾಗದಲ್ಲಿ ನಾವು ಬಿಪಿ, ಶುಗರ್ ಕಂಟ್ರೋಲ್ ಮಾಡಲು ಯಾವ ಟಿಪ್ಸ್ ಅನುಸರಿಸಬೇಕು. ಏನು ತಿನ್ನಬೇಕು..? ಏನು ತಿನ್ನಬಾರದು ಅಂತಾ ಹೇಳಿದ್ದೆವು. ಅದರ ಮುಂದುವರಿದ ಭಾಗವಾಗಿ, ಈಗ ಇನ್ನಷ್ಟು ಬಿಪಿ, ಶುಗರ್ ಕಂಟ್ರೋಲ್ ಮಾಡುವ ಟಿಪ್ಸ್ ಬಗ್ಗೆ ತಿಳಿಯೋಣ ಬನ್ನಿ..
ಕೆಂಪಕ್ಕಿ, ರಾಜಮುಡಿ ಅಕ್ಕಿ, ಬೇಳೆ- ಕಾಳುಗಳು ಇವಿಷ್ಟನ್ನ ತಿನ್ನಬಹುದು ಅಂತಾ ಹೇಳಿದ್ದೆವು. ಈಗ ನೀವು ಯಾವ ತರಕಾರಿ ತಿನ್ನಬೇಕು ಅಂದ್ರೆ, ಆಲೂಗಡ್ಡೆಯೊಂದನ್ನ ಬಿಟ್ಟು ಬೇರೆ ಯಾವ ತರಕಾರಿ ಬೇಕಾದ್ರೂ ತಿನ್ನಬಹುದು. ನಿಮ್ಮ ಬಿಪಿ, ಶುಗರ್ ಕಂಟ್ರೋಲ್ ಆಗಬೇಕು ಅಂದ್ರೆ, ನೀವು ಆಲೂಗಡ್ಡೆಯನ್ನ ತ್ಯಜಿಸಬೇಕು. ಹಸಿರು ಸೊಪ್ಪುಗಳ ಸೇವನೆ ಅಂತೂ ತುಂಬಾ ಉತ್ತಮ.
ಇನ್ನು ನೀವು ತಿನ್ನಬೇಕಾದ ಅತ್ಯುತ್ತಮ ತರಕಾರಿ ಅಂದ್ರೆ ಹಾಗಲಕಾಯಿ. ವಾರಕ್ಕೆರಡು ಬಾರಿ ಹಾಗಲಕಾಯಿ ಜ್ಯೂಸ್ ಕುಡಿಯಿರಿ. ಅಥವಾ ಸಲಾಡ್ ತಿನ್ನಿರಿ. ಅಥವಾ ಹಾಗಲಕಾಯಿಯ ಪಲ್ಯ ಮಾಡಿ ಸೇವಿಸಿ. ಆದ್ರೆ ಆ ಪಲ್ಯಕ್ಕೆ ಹೆಚ್ಚು ಮಸಾಲೆ ಸೇರಿಸಬೇಡಿ. ಮೆಂತ್ಯೆ, ಪಾಲಕ್ ಸೊಪ್ಪಿನ ಸೇವನೆಯನ್ನ ವಾರದಲ್ಲಿ ಎರಡು ಬಾರಿ ಮಾಡಿದ್ರೆ ಉತ್ತಮ.
ಇನ್ನು ಯಾವ ಹಣ್ಣುಗಳನ್ನ ತಿನ್ನಬೇಕು ಅಂದ್ರೆ, ಮೊಸಂಬಿ, ದ್ರಾಕ್ಷಿ, ಪೇರಳೆ, ಕಿತ್ತಳೆ ಹಣ್ಣಿನ ಸೇವನೆ ಮಾಡಬೇಕು. ಸೇಬು, ಬಾಳೆಹಣ್ಣು, ಚಿಕ್ಕು, ಪಪ್ಪಾಯಿ, ಕಲ್ಲಂಗಡಿ ಈ ಹಣ್ಣುಗಳ ಸೇವನೆ ಮಿತವಾಗಿರಲಿ. ಇನ್ನು ಶುಗರ್ ಕಂಟ್ರೋಲ್ ಮಾಡಲು ಮನೆಯಲ್ಲಿ ಮಾಡಬೇಕಾದ ಮದ್ದು ಏನು ಅಂದ್ರೆ, ಒಂದು ಸ್ಪೂನ್ ಮೆಂತ್ಯೆಯನ್ನು ಒಂದು ಗ್ಲಾಸ್ ನೀರಿಗೆ ಹಾಕಿ, ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದು, ನೆನೆದ ಮೆಂತ್ಯೆಯನ್ನ ತಿನ್ನಬೇಕು. 3 ತಿಂಗಳು ಈ ನಿಯಮವನ್ನ ಅನುಸರಿಸಿದರೆ, ನಿಮ್ಮ ಶುಗರ್ ಪೂರ್ತಿಯಾಗಿ ಗುಣವಾಗಬಹುದು.
ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..