- Advertisement -
ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿರಲಿ. ಕುಟುಂಬಕ್ಕೆ ಕೊಡಬೇಕಾದ ಸಮಯವನ್ನ ಮಾತ್ರ ಮಿಸ್ ಮಾಡಲ್ಲ ರಾಕಿ ಬಾಯ್. ಹೌದು.. ಸದ್ಯ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ, ರಾಕಿಂಗ್ ಸ್ಟಾರ್ ಯಶ್, ಬಿಡುವಿನ ವೇಳೆಯಲ್ಲಿ ಮಗಳು ಐರಾ ಜೊತೆ ಕಾಲ ಕಳೆದಿದ್ದಾರೆ. ಸೆಲ್ಫಿ ವಿಡಿಯೋ ದಲ್ಲಿ ಮುದ್ದಾದ ಮಗಳು ಐರಾಳಿಂದ ಅಭಿಮಾನಿಗಳಿಗೆ ಹಾಯ್ ಹೇಳಿಸಿದ್ದಾರೆ. ಒಂದು ಕಡೆ ಪತ್ನಿ ರಾಧಿಕಾ ಪಂಡಿತ್, ಮಗಳಿಗೆ ಪೌಡರ್ ಹಾಕಿ ಅಲಂಕರಿಸುವುದರಲ್ಲಿ ಬ್ಯುಸಿ ಆಗಿದ್ರೆ, ರಾಕಿ ಬಾಯ್ ಸೆಲ್ಫಿ ವಿಡಿಯೋ ಮಾಡುತ್ತ ಮಗಳನ್ನು ಆಟವಾಡಿಸುತ್ತಿದ್ದಾರೆ. ಸದ್ಯ ವಿಡಿಯೋವನ್ನು ಇನ್ ಸ್ಟಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಪೋಸ್ಟ್ ಆದ ಕೆಲವೆ ಹೊತ್ತಿನಲ್ಲಿ ಸರಿಸುಮಾರು ಲಕ್ಷದಷ್ಟು ವೀಕ್ಷಣೆ ಕಂಡಿದೆ.
- Advertisement -