ನಾವು ನೀವು ಯೂಟ್ಯೂಬ್ನಲ್ಲಿ, ಫೇಸ್ಬುಕ್ನಲ್ಲಿ ತರಹೇವಾರಿ ಐಸ್ಕ್ರೀಮ್ ಮಾಡುವ ವಿಧಾನವನ್ನ ನೋಡಿರ್ತೀವಿ. ಸಕ್ಕರೆ, ಮಿಲ್ಕ್ ಪೌಡರ್, ಕ್ರೀಮ್, ಕಂಡೆನ್ಸ್ ಮಿಲ್ಕ್ ಎಲ್ಲವನ್ನೂ ಹಾಕಿ ಐಸ್ಕ್ರೀಮ್ ಮಾಡ್ತಾರೆ. ಮತ್ತು ಅದು ಸೆಟಪ್ ಆಗಕ್ಕೆ ಫ್ರಿಜ್ನಲ್ಲಿ ಇಡ್ತಾರೆ. ಆದ್ರೆ ಇಲ್ಲೋರ್ವ ಮಹಿಳೆ ಫ್ಯಾನ್ ಸಹಾಯದಿಂದ ಐಸ್ಕ್ರೀಮ್ ತಯಾರಿಸಿದ್ದಾಳೆ.ಈ ವೀಡಿಯೋವನ್ನ ಆನಂದ್ ಮಹಿಂದ್ರಾ, ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಈ ವೀಡಿಯೋದಲ್ಲಿ ಮಹಿಳೆ ಕುಲ್ಫಿ ತಯಾರಿಸುತ್ತಿದ್ದಾರೆ. ಒಂದು ಒಂದು ಹಾಲಿನ ಕ್ಯಾನ್ನಲ್ಲಿ ಕುಲ್ಫಿ ತಯಾರಿಸಲು ಬೇಕಾದ, ಹಾಲು, ಬಾದಾಮ್ ಪೌಡರ್, ಸಕ್ಕರೆ ಎಲ್ಲವನ್ನೂ ಹಾಕಿದ್ದಾರೆ. ಮತ್ತು ಇನ್ನೊಂದು ಡಬ್ಬದಲ್ಲಿ ಆ ಕ್ಯಾನ್ ಇಟ್ಟು ಅದರ ಸುತ್ತಲೂ ದೊಡ್ಡ ದೊಡ್ಡ ಐಸ್ಕ್ಯೂಬ್ಸ್ ತುಂಬಿಸಿದ್ದಾರೆ. ಜೊತೆಗೆ ಕಲ್ಲು ಉಪ್ಪನ್ನೂ ಹಾಕಿದ್ದಾರೆ. ನಂತರ ಕ್ಯಾನ್ಗೆ ಹಗ್ಗ ಸುತ್ತಿ, ಅದನ್ನ ಫ್ಯಾನ್ಗೆ ಜೋಡಿಸಿದ್ದಾರೆ. ಮತ್ತು ಫ್ಯಾನ್ ಆನ್ ಮಾಡಿದ್ದಾರೆ. ಈ ರೀತಿ ಕ್ಯಾನ್ ಮೂವ್ ಆಗಿ, ಐಸ್ಕ್ರೀಮ್ ತಯಾರಾಗಿದೆ. ಇದನ್ನು ಕಂಡ ಉದ್ಯಮಿ ಮಹಿಂದ್ರಾ, ಹ್ಯಾಂಡ್ ಮೇಡ್ ಐಸ್ಕ್ರೀಮ್, ಫ್ಯಾನ್ ಮೇಡ್ ಐಸ್ಕ್ರೀಮ್, ಇದು ಬರೀ ಇಂಡಿಯಾದಲ್ಲಿ ಎಂದಿದ್ದಾರೆ.
ಇದನ್ನ ಕೆಲವರು ಕೈಯಿಂದಲೇ ತಯಾರಿಸುತ್ತಾರೆ. ಆದ್ರೆ ಅದಕ್ಕೆ ತುಂಬ ಹೊತ್ತು ಬೇಕಾಗುತ್ತದೆ. ಆದ್ರೆ ಈ ರೀತಿ ಫ್ಯಾನ್ ಮೂಲಕ ತಯಾರಿಸಿದ್ರೆ, ಬೇಗ ಐಸ್ಕ್ರೀಮ್ ತಯಾರಾಗುತ್ತದೆ ಎಂದು ಈ ರೀತಿ ಐಡಿಯಾ ಮಾಡಿದ್ದಾರೆ. ಕೆಲವರು ಮಹಿಂದ್ರಾ ಪೋಸ್ಟ್ ನೋಡಿ, ಸಪೋರ್ಟ್ ಮಾಡಿ ಕಾಮೆಂಟ್ ಮಾಡಿದ್ರೆ, ಇನ್ನು ಕೆಲವರು ನೆಗೆಟಿವ್ ಕಾಮೆಂಟ್ಸ್ ಮಾಡಿದ್ದಾರೆ.
ನೀವು ಇಂಥದ್ದಕ್ಕೆಲ್ಲ ಸಪೋರ್ಟ್ ಮಾಡಬಾರದು. ಇದರಿಂದ ಏನಾದರೂ ತೊಂದರೆಯಾಗಬಹುದು. ಅಕ್ಕ ಪಕ್ಕದಲ್ಲಿದ್ದವರಿಗೆ ಇದರಿಂದ ಪೆಟ್ಟಾಗಬಹುದು. ಇದನ್ನು ಮಾಡುವ ಮೊದಲು, ಇದರಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸೇಫ್ಟಿ ಇರಬೇಕು. ಆಮೇಲೆ ಇಂಥ ಪ್ರಯೋಗ ಮಾಡಬೇಕು ಎಂದಿದ್ದಾರೆ.
Where there’s a will, there’s a way.
Hand-made & Fan-made ice cream. Only in India… pic.twitter.com/NhZd3Fu2NX— anand mahindra (@anandmahindra) March 29, 2023