Monday, December 23, 2024

Latest Posts

ಐಪಿಎಲ್‌ಗೆ ಅದ್ಧೂರಿ ಚಾಲನೆ ನೀಡಲು ರೆಡಿಯಾದ ರಶ್ಮಿಕಾ, ತಮನ್ನಾ..

- Advertisement -

ಇನ್ನು ಕೆಲವೇ ಗಂಟೆಗಳಲ್ಲಿ ಐಪಿಎಲ್ ಮ್ಯಾಚ್‌ ಶುರುವಾಗಲಿದೆ. ಈ ಕಾರ್ಯಕ್ರಮಕ್ಕೆ ಮೆರಗು ನೀಡಲು, ಈ ಬಾರಿ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ರೆಡಿಯಾಗಿದ್ದು, ಇಬ್ಬರೂ ಡಾನ್ಸ್ ಪ್ರಾಕ್ಟೀಸ್ ಮಾಡಿದ್ದಾರೆ. ಈ ಬಗ್ಗೆ ಐಪಿಎಲ್ ಟ್ವೀಟ್ ಮಾಡಿದ್ದು, ಪ್ರಾಕ್ಟೀಸ್ ವೀಡಿಯೋ ಮತ್ತು ನಟಿಯರು ಮಾತನಾಡಿರುವ ವೀಡಿಯೋ ಶೇರ್ ಮಾಡಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಐಪಿಎಲ್ ಓಪೆನಿಂಗ್ ಸೆರೆಮನಿ ನಡೆಯಲಿದ್ದು, ಹಾಡುಗಾರ ಅರ್ಜಿತ್ ಸಿಂಗ್ ಹಾಡುವ ಹಾಡಿಗೆ ನಟಿ ರಶ್ಮಿಕಾ ಮತ್ತು ತಮನ್ನಾ ಸ್ಟೆಪ್ ಹಾಕಲಿದ್ದಾರೆ. ಇಂದು ಚೆನ್ನೈ ಸುಪರ್ ಕಿಂಗ್ಸ್ ಮತ್ತು ಗುಜರಾತ್ ಕಿಂಗ್ಸ್ ಮಧ್ಯೆ ಪೈಪೋಟಿ ನಡೆಯಲಿದೆ.

ಈ ವೇಳೆ ಮಾತನಾಡಿದ ನಟಿ ತಮನ್ನಾ, ಅರ್ಜಿತ್‌ ಮತ್ತು ರಶ್ಮಿಕಾ ಜೊತೆ ಪರ್ಫಾಮ್ ಮಾಡಲು ನಾನು ಕಾಯುತ್ತಿದ್ದೇನೆ. ಪ್ರತೀ ಬಾರಿಯೂ ನನಗೆ ಸ್ಟೇಜ್ ಪರ್ಫಾಮೆನ್ಸ್ ಮಾಡಲು ಏನೋ ಖುಷಿಯಾಗುತ್ತದೆ ಎಂದಿದ್ದಾರೆ. ಇನ್ನು ರಶ್ಮಿಕಾ ಮಾತನಾಡಿದ್ದು, ನಾನು ಐಪಿಎಲ್‌ನ್ನು ಲೈವ್ ಆಗಿ ನೋಡಬೇಕು ಎಂದುಕೊಂಡಿದ್ದೆ. ಆದ್ರೆ ಅದು ಸಾಧ್ಯವಾಗಿರಲಿಲ್ಲ. ಆದ್ರೆ ಇಂದು ಐಪಿಎಲ್ ಓಪೆನಿಂಗ್ ಸೆರೆಮನಿಯಲ್ಲಿ ಪರ್ಫಾಮ್ ಮಾಡುವ ಅವಕಾಶ ಸಿಕ್ಕಿದೆ. ನನಗೆ ಖುಷಿಯಾಗಿದೆ ಎಂದಿದ್ದಾರೆ.

- Advertisement -

Latest Posts

Don't Miss