ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಏನೆಲ್ಲ ರೆಮಿಡಿಗಳನ್ನ ಬಳಸುತ್ತೇನೆ. ಎಷ್ಟೆಲ್ಲ ಮನೆಮದ್ದು ಬಳಸುತ್ತೇವೆ. ಅದರಲ್ಲೂ ಕೊರೊನಾ ಬಂದ ಬಳಿಕ ಅಂತೂ ಹಲವರಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಗುಣ ಕೊಂಚ ಹೆಚ್ಚಾಗಿದೆ. ಅಂಥವರಿಗಾಗಿ ನಾವು ಹಲವು ಹೆಲ್ತ್ ಟಿಪ್ಸ್ ಹೇಳಿಕೊಟ್ಟಿದ್ದೇವೆ. ಇಂದು ಕೂಡ ನಾವು ದೇಹದಲ್ಲಿ ಕ್ಯಾಲ್ಶಿಯಂ ಹೆಚ್ಚಾಗಿ, ನಿಮ್ಮ ಮೂಳೆ ಮತ್ತು ಹಲ್ಲಿನ ಆರೋಗ್ಯ ಉತ್ತಮವಾಗಿರುವುದಕ್ಕೆ, ನಿಮಗೊಂದು ಪೇಯದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಈ ಪೇಯ ಮಾಡುವುದಕ್ಕೆ ನಿಮಗೆ ಒಂದು ಗ್ಲಾಸ್ ಬಾದಾಮ್ ಹಾಲು, ಎರಡು ಆ್ಯಪ್ರಿಕಾಟ್ಸ್, ಎರಡು ಅಂಜೂರ, ಎರಡು ಖರ್ಜೂರ, 1 ಸ್ಪೂನ್ ಆಳ್ವಿ. ಈ ಆಳ್ವಿಯಿಂದ ಬಾಣಂತಿಯರಿಗೆ ಪಾಯಸ ಮಾಡಿಕೊಡಲಾಗುತ್ತದೆ. ಇದರ ಸೇವನೆಯಿಂದ ಮೂಳೆ ಗಟ್ಟಿಯಾಗತ್ತೆ. 2 ರಿಂದ 3 ಗಂಟೆಗಳ ಕಾಲ ಈ ಆಳ್ವಿಯನ್ನು ನೀರಿನಲ್ಲಿ ನೆನೆಸಿಡಿ. ಇಂದು ನೆನೆದ ಬಳಿಕ, ಬಾದಾಮ್ ಹಾಲಿನೊಂದಿಗೆ ಅಂಜೂರ ಮತ್ತು ಹಸಿ ಖರ್ಜೂರ, ಆ್ಯಪ್ರಿಕಾಟನ್ನು ಸೇರಿಸಿ, ಗ್ರೈಂಡ್ ಮಾಡಿ.
ಈಗ ಈ ಹಾಲಿನೊಂದಿಗೆ ನೆನೆಸಿಟ್ಟ ಆಳ್ವಿಯನ್ನು ಸೇರಿಸಿ, ಪ್ರತಿದಿನ ಬೆಳಿಗ್ಗೆ ತಿಂಡಿ ತಿನ್ನುವಾಗ ಕುಡಿಯಿರಿ. ಇದರಿಂದ ನಿಮ್ಮ ಮೂಳೆ ಸ್ಟ್ರಾಂಗ್ ಆಗುತ್ತದೆ. ನಿಮಗೆ ಶಕ್ತಿ ಬರುತ್ತದೆ. ನಿಮ್ಮ ದೇಹದಲ್ಲಿ ಕ್ಯಾಲ್ಶಿಯಂ ಅಂಶ ಹೆಚ್ಚುತ್ತದೆ. ನೀವು ಈ ಪೇಯವನ್ನು ಬೆಳಿಗ್ಗೆ 10 ಗಂಟೆಗೆ ಅಥವಾ ಸಂಜೆ ನಾಲ್ಕು ಗಂಟೆಗೂ ಕುಡಿಯಬಹುದು. ಆದ್ರೆ ಬೆಳಿಗ್ಗೆ ತಿಂಡಿಯೊಟ್ಟಿಗೆ ಸೇವಿಸಿದರೆ, ಒಳ್ಳೆಯದು.
ನೀವು ಗರ್ಭಿಣಿಯಾಗುವುದಕ್ಕೂ ಮುನ್ನ ಈ ಪೇಯವನ್ನು ಕುಡಿಯಿರಿ. ಗರ್ಭಿಣಿಯಾದ ಬಳಿಕ ಕುಡಿಯಬೇಡಿ. ಮತ್ತೆ ಬಾಣಂತನವಾದಾಗ ಇದನ್ನ ಸೇವಿಸಿ. ಇದರಿಂದ ನಿಮ್ಮ ಮೂಳೆ ಗಟ್ಟಿಯಾಗತ್ತೆ. ಸಿಸರಿನ್ ಆದವರಿಗೆ ಈ ಪೇಯ ತುಂಬಾ ಉತ್ತಮವಾಗಿದೆ.
ನಿಮ್ಮ ಬಾಯಿಯಿಂದ ಬರುವವ ವಾಸನೆಯನ್ನು ಹೇಗೆ ತಡೆಯಬೇಕು..? ಏನು ಮಾಡಬೇಕು..?

