Friday, September 20, 2024

Latest Posts

ಮುಖದ ಮೇಲಿರುವ ಕೂದಲನ್ನು ಯಾವ ರೀತಿ ತೆಗೆದುಹಾಕಬೇಕು..?

- Advertisement -

ನಿಮ್ಮ ಪರ್ಸನಾಲಿಟಿ ಎಷ್ಟೇ ಚೆಂದವಿರಲಿ, ನಿಮ್ಮ ಮುಖ ಚೆನ್ನಾಗಿಲ್ಲವೆಂದಲ್ಲಿ, ನೀವು ಆಕರ್ಷಿತರಾಗಿ ಕಾಣಲು ಸಾಧ್ಯವಿಲ್ಲ. ಇದ್ದುದರಲ್ಲೇ ಮುಖವನ್ನ ಚೆಂದಗಾಣಿಸಿಕೊಂಡರಷ್ಟೇ, ನೀವು ಆಕರ್ಷಿತರಾಗಿ ಕಾಣುತ್ತೀರಿ. ಕೆಲವರು ನೋಡಲು ಚೆಂದವಾಗಿದ್ರು, ಅವರ ಮುಖದ ಮೇಲಿರುವ ಕೂದಲಿನಿಂದಲೇ, ಅವರ ಸೌಂದರ್ಯ ಕುಗ್ಗಿ ಹೋಗುತ್ತದೆ. ಹಾಗಾಗಿ ನಾವಿಂದು ಮುಖದ ಮೇಲಿರುವ ಕೂದಲನ್ನು ಯಾವ ರೀತಿ ತೆಗೆದು ಹಾಕಬೇಕು ಎಂದು ಹೇಳಲಿದ್ದೇವೆ..

ಮೊದಲನೇಯ ಟಿಪ್ಸ್ ಅರಶಿನ, ಕಡಲೆ ಹಿಟ್ಟು, ಶ್ರೀಗಂಧ ಮತ್ತು ನಿಂಬೆರಸದ ಫೇಸ್‌ಪ್ಯಾಕ್‌. ಒಂದು ಬೌಲ್‌ಗೆ 3 ಸ್ಪೂನ್ ಕಡಲೆ ಹಿಟ್ಟು ಹಾಕಿ. ಇದಕ್ಕೆ 2 ಸ್ಪೂನ್ ಅರಿಶಿನ ಮತ್ತು ಎರಡು ಸ್ಪೂನ್ ನಿಂಬೆರಸ, ಎರಡು ಚಿಟಿಕೆ ಶ್ರೀಗಂಧದ ಪುಡಿ. ಇವಿಷ್ಟನ್ನ ಸೇರಿಸಿ ಕೊಂಚ ನೀರು ಹಾಕಿ ಪೇಸ್ಟ್ ತಯಾರಿಸಿ. ಇದರ ಫೇಸ್‌ಪ್ಯಾಕ್ ಹಾಕಿ. ವಾರಕ್ಕೆ 3 ಬಾರಿ ಈ ಫೇಸ್‌ಪ್ಯಾಕ್ ಹಾಕಿ, 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದರೆ, ನಿಮ್ಮ ಮುಖದ ಮೇಲಿನ ಕೂದಲು ನಿವಾರಣೆ ಆಗುತ್ತದೆ. ಆದರೆ ನಿಮ್ಮ ಮುಖಕ್ಕೆ ತೆಂಗಿನ ಎಣ್ಣೆಯ ಮಸಾಜ್ ಮಾಡಬೇಡಿ.

ಎರಡನೇಯ ಟಿಪ್ಸ್ ಸಕ್ಕರೆ ಮತ್ತು ನಿಂಬೆರಸದ ಸ್ಕ್ರಬಿಂಗ್. ಒಂದು ಟೇಬಲ್ ಸ್ಪೂನ್ ನಿಂಬೆರಸಕ್ಕೆ ಒಂದು ಸ್ಪೂನ್ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಕೊಂಚ ನೀರು ಹಾಕಿ, ಇದನ್ನ ನಿಮ್ಮ ಮುಖಕ್ಕೆ ಅಪ್ಲೈ ಮಾಡಿ. ನಂತರ ಸ್ಕ್ರಬಿಂಗ್ ಮಾಡಿ. 10 ನಿಮಿಷ ಸ್ಕ್ರಬ್ ಮಾಡಿದ್ರೆ ಸಾಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಮೂರನೇಯ ಟಿಪ್ಸ್ ಜೇನುತುಪ್ಪ ಮತ್ತು ನಿಂಬೆರಸದ ಫೇಸ್‌ಪ್ಯಾಕ್. ಒಂದು ಸ್ಪೂನ್ ಜೇನುತುಪ್ಪ ಮತ್ತು ನಿಂಬೆರಸವನ್ನ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ. 15 ನಿಮಿಷದ ಬಳಿಕ, ಟರ್ಕಿಶ್ ಟವಲ್ ಬಳಸಿ, ಈ ಪ್ಯಾಕನ್ನ ರಿಮೂವ್ ಮಾಡಿ. ನಂತರ ತಣ್ಣೀರಿನಿಂದ ಮುಖವನ್ನ ತೊಳೆಯಿರಿ.

ನಾಲ್ಕನೇಯ ಟಿಪ್ಸ್ ಮುಖದ ಮೇಲಿನ ಕೂದಲು ಹೋಗಲು ನೀವು ಒಳ್ಳೆಯ ಆಹಾರ ಸೇವಿಸುವುದು ತುಂಬಾ ಮುಖ್ಯ. ದೇಹದಲ್ಲಿ ಹಾರ್ಮೋನಲ್ ಬ್ಯಾಲೆನ್ಸ್‌ಗಾಗಿ ನೀವು ಉತ್ತಮವ ಆಹಾರ ಸೇವನೆ ಮಾಡಬೇಕು. ಸೋಯಾಬಿನ್ ಕಾಳು ತಿನ್ನಿ. ಇದನ್ನ ನೆನೆಸಿಟ್ಟು, ಪೇಸ್ಟ್ ಮಾಡಿ, ಇಡ್ಲಿ ಅಥವಾ ದೋಸೆ ಹಿಟ್ಟಿಗೆ ಸೇರಿಸಿ, ತಿಂಡಿ ಮಾಡಿ ತಿನ್ನಬಹುದು. ಡ್ರೈಫ್ರೂಟ್ಸ್, ಅಗಸೆ ಬೀಜ, ಎಳ್ಳು, ಪೀಚಸ್, ಓಟ್ಸ್, ಬೆಳ್ಳುಳ್ಳಿ, ಬಾರ್ಲಿ, ಹೆಸರು ಕಾಳು, ಇದನ್ನ ಸೇವಿಸಿ. ಜೊತೆಗೆ ಕ್ಯಾಬೇಜ್, ಫ್ಲವರ್, ಬ್ರೋಕೋಲಿ, ಸೇವಿಸಿ. ವಿಟಾಮಿನ್ ಡಿಗಾಗಿ ಬೆಳಿಗ್ಗೆ ಸೂರ್ಯನ ತಿಳಿ ಬಿಸಿಲಿಗೆ ನಿಲ್ಲಿ.

ಈ ಪೇಯವನ್ನ ನೀವು ಕುಡಿದರೆ, ನಿಮ್ಮ ಮೂಳೆ ಗಟ್ಟಿಯಾಗತ್ತೆ, ಕ್ಯಾಲ್ಶಿಯಂ ಪ್ರಮಾಣ ಹೆಚ್ಚುತ್ತೆ..

ಹಾರ್ಮೋನ್ ಬ್ಯಾಲೆನ್ಸ್ಗೆ ಸಹಕಾರಿಯಾಗಿರುವ ಒಣಹಣ್ಣಿನ ಬಗ್ಗೆ ಮಾಹಿತಿ..

ನಿಮ್ಮ ಬಾಯಿಯಿಂದ ಬರುವವ ವಾಸನೆಯನ್ನು ಹೇಗೆ ತಡೆಯಬೇಕು..? ಏನು ಮಾಡಬೇಕು..?

- Advertisement -

Latest Posts

Don't Miss