ನಾವು ಗಣಪನಿಗೆ ಲಾಡು, ಕಡುಬಿನ ನೈವೇದ್ಯ ಮಾಡುತ್ತೇನೆ. ವಿಷ್ಣುವಿಗೆ ತುಳಸಿ, ಶಿವನಿಗೆ ಜಲ, ಹೀಗೆ ಎಲ್ಲ ದೇವರಿಗೂ ಅವರಿಗಿಷ್ಟವಾಗುವ ನೈವೇದ್ಯ ಮಾಡುತ್ತೇವೆ. ಆದರೆ ಶ್ರೀಕೃಷ್ಣನಿಗೆ ಬೆಣ್ಣೆಯನ್ನ ಸೇರಿಸಿ 56 ರೀತಿಯ ಭಕ್ಷ್ಯ ಭೋಜನವನ್ನ ನೈವೇದ್ಯವನ್ನಾಗಿ ಇರಿಸಲಾಗತ್ತೆ. ಹಾಗಾದ್ರೆ ಇದರ ಹಿಂದಿರುವ ಕಾರಣವೇನು..? ಯಾಕೆ ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನ ನೈವೇದ್ಯ ಮಾಡಲಾಗತ್ತೆ ಅಂತಾ ತಿಳಿಯೋಣ ಬನ್ನಿ..
ಒಮ್ಮೆ ಗೋಕುಲದ ನಿವಾಸಿಗಳೆಲ್ಲ ಸೇರಿ ಇಂದ್ರನನ್ನು ಸಂತುಷ್ಟಗೊಳಿಸಲು, ಯಾಗ ಯಜ್ಞ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಬಂದ ಶ್ರೀಕೃಷ್ಣ ತಂದೆ ನಂದನಲ್ಲಿ ಕೇಳಿದ. ಇದು ಯಾರಿಗಾಗಿ ಮಾಡುತ್ತಿರುವ ಯಾಗ ಯಜ್ಞವಾಗಿದೆ..? ಎಂದು . ಅದಕ್ಕೆ ನಂದ ಹೇಳುತ್ತಾನೆ, ಇದು ಇಂದ್ರ ದೇವನಿಗಾಗಿ ಮಾಡುತ್ತಿರುವ ಪೂಜೆ. ಇಂದ್ರದೇವ ಸಂತುಷ್ಟನಾದರೆ, ನಮಗೆ ಮಳೆ ಬೆಳೆ ಸಿಗುತ್ತದೆ. ಗೋವುಗಳಿಗೆ ಮೇವು ಸಿಗುತ್ತದೆ ಎನ್ನುತ್ತಾನೆ.
ಅದಕ್ಕೆ ಶ್ರೀಕೃಷ್ಣ, ನಮಗೆ ಮೇವು, ಬೆಳೆ ಎಲ್ಲ ಸಿಗುವುದು ಗೋವರ್ಧನ ಪರ್ವತದಿಂದ. ಹಾಗಾಗಿ ನಾವು ಗೋವರ್ಧನ ಪರ್ವತವನ್ನ ಪೂಜಿಸಬೇಕು ಎಂದು ಹೇಳಿ ಯಾಗವನ್ನ ಮೊಟಕುಗೊಳಿಸಿ. ಎಲ್ಲರೂ ಗೋವರ್ಧನ ಪೂಜೆ ಮಾಡುವಂತೆ ಮಾಡುತ್ತಾನೆ. ಆಗ ಇಂದ್ರನಿಗೆ ಕೋಪ ಬರುತ್ತದೆ. ಇಂದ್ರ ಜೋರಾಗಿ ಮಳೆ ಸುರಿಸುತ್ತಾನೆ. ಮಳೆಯ ರಭಸವನ್ನು ತಡೆಯದೇ, ಗೋಕುಲವಾಸಿಗಳು ಶ್ರೀಕೃಷ್ಣನ ಮೊರೆ ಹೋಗುತ್ತಾರೆ.
ಶ್ರೀಕೃಷ್ಣ ಬಂದು ಗೋವರ್ಧನ ಪರ್ವತವನ್ನ ತನ್ನ ಕಿರುಬೆರಳಿನಲ್ಲಿ ಎತ್ತಿ ಹಿಡಿದು, ಗೋಕುಲವಾಸಿಗಳಿಗೆ ಅದರ ಕೆಳಗೆ ಬಂದು ನಿಲ್ಲುವಂತೆ ಸೂಚಿಸುತ್ತಾನೆ. ಸತತ 7 ದಿನಗಳ ಕಾಲ ಮಳೆಯಿಂದ ಗೋಕುಲ ವಾಸಿಗಳನ್ನ ಕೃಷ್ಣ ರಕ್ಷಿಸುತ್ತಾನೆ. ಆ 7 ದಿನಗಳ ಕಾಲ ಶ್ರೀಕೃಷ್ಣ ಅನ್ನಾಹಾರ ಸೇವಿಸಿರುವುದಿಲ್ಲ. ಶ್ರೀಕೃಷ್ಣನ ತಾಯಿ ಅವನಿಗೆ ಪ್ರತಿದಿನ 8 ಬಾರಿ ಊಟ ಮಾಡಿಸುತ್ತಿದ್ದಳು. ಆದರೆ ಅವನು 7 ದಿನಗಳ ಕಾಲ ಊಟ ಮಾಡದೇ, ಗೋಕುಲ ವಾಸಿಗಳನ್ನು ಕಾಪಾಡಿದ್ದ.
ಈ ಕಾರಣಕ್ಕೆ ಗೋಕುಲ ವಾಸಿಗಳು 8ನೇ ದಿನ ಶ್ರೀಕೃಷ್ಣನಿಗೆ ದಿನಕ್ಕೆ 8 ಬಾರಿಯಂತೆ, 7 ದಿನದ ಭೋಜನವಾಗಿ, 56 ರೀತಿಯ ಭಕ್ಷ್ಯ ಭೋಜನವನ್ನ ತಂದು ನೈವೇದ್ಯ ಮಾಡುತ್ತಾರೆ. ಈ ಕಾರಣಕ್ಕಾಗಿ ಶ್ರೀಕೃಷ್ಣನಿಗೆ ಕೃಷ್ಣಾಷ್ಟಮಿಗೆ 56 ರೀತಿಯ ವ್ಯಂಜ್ಯನವನ್ನ ನೈವೇದ್ಯ ಮಾಡಲಾಗತ್ತೆ.
ಚೈತ್ರ ನವರಾತ್ರಿಯಲ್ಲಿ ದುರ್ಗೆಯ ಮೂರ್ತಿಯನ್ನ ಯಾವ ಮಣ್ಣಿನಿಂದ ಮಾಡಲಾಗತ್ತೆ ಗೊತ್ತಾ..?




