ಸೋಂಪನ್ನ ನೀವು ಆಲೂಪಲ್ಯ, ಆಲೂ ಬೋಂಡ, ಕೆಲವು ಗ್ರೇವಿ, ಪಲ್ಯ, ಪಲಾವ್, ರೈಸ್ ಭಾತ್‌ಗೆಲ್ಲ ಬಳಸಿರುತ್ತೀರಿ. ಯಾಕಂದ್ರೆ ಈ ಸೋಂಪನ್ನ ಸ್ವಲ್ಪವೇ ಸ್ವಲ್ಪ ಯಾವುದಾದರೂ ತಿಂಡಿಗೆ ಸೇರಿಸಿದ್ರೆ ಸಾಕು. ಅದರ ಘಮವೇ ಇರುತ್ತದೆ. ಮತ್ತು ಆ ತಿಂಡಿಯೂ ರುಚಿಕರವಾಗಿರುತ್ತದೆ. ಇದರ ಜೊತೆಗೆ, ಸೋಂಪನ್ನ ಹಾಗೆ ಸೇವಿಸುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ಹಾಗಾದ್ರೆ ಸೋಂಪು ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಸೋಂಪಿನಲ್ಲಿ ಕ್ಯಾಲ್ಶಿಯಂ, ಮೆಗ್ನಿಶಿಯಂ, ವಿಟಾಮಿನ್ ಸಿ, ಪೊಟ್ಯಾಶಿಯಂನಂಥ ಪೋಷಕಾಂಶಗಳು ಇರುತ್ತದೆ. ಹಾಗಾಗಿ ಊಟವಾದ ಬಳಿಕ ಕೊಂಚ ಸೋಂಪು ತಿನ್ನಬೇಕು ಅಂತಾ ಹೇಳೋದು. ಪ್ರತಿದಿನ ಸ್ವಲ್ಪ ಸ್ವಲ್ಪ ಸೋಂಪನ್ನ ಸೇವನೆ ಮಾಡಿದ್ರೂ, ನಮ್ಮ ದೇಹದಲ್ಲಿ ಆರೋಗ್ಯಕರ ಬದಲಾವಣೆಯಾಗತ್ತೆ. ಈ ಸಣ್ಣ ಅಭ್ಯಾಸ, ನಿಮ್ಮ ಜೀವನವನ್ನ ಉತ್ತಮವಾಗಿ ಬದಲಾಯಿಸುವಷ್ಟು ಶಕ್ತಿಯನ್ನ ಹೊಂದಿದೆ.
ಸೋಂಪು ತಂಪು ವಸ್ತುವಾಗಿರುವುದರಿಂದ, ನಿಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದಲ್ಲಿ, ನೀವು ಸೋಂಪು ಸೇವಿಸಿ. ಇಲ್ಲವಾದಲ್ಲಿ ಒಂದು ಕಪ್ ನೀರು ತೆಗೆದುಕೊಂಡು, ಅದರೊಟ್ಟಿಗೆ ಒಂದು ಸ್ಪೂನ್ ಸೋಂಪು ಹಾಕಿ, ಚೆನ್ನಾಗಿ ಕುದಿಸಿ, ಅದನ್ನ ಅರ್ಧ ಕಪ್ ಮಾಡಿ,. ಇದನ್ನ ಕುಡಿಯಿರಿ. ನೀವು ಪ್ರತಿದಿನ ಈ ಕಶಾಯವನ್ನ ಕುಡಿದರೂ ನಿಮಗೇನೂ ತೊಂದರೆಯಾಗುವುದಿಲ್ಲ. ಮುಟ್ಟಿನ ಹೊಟ್ಟೆ ನೋವು ಅತೀಯಾಗಿದ್ರೆ ಈ ಕಶಾಯ ಕುಡಿಯಿರಿ. ಬೇಗ ಹೊಟ್ಟೆ ನೋವು ಶಮನವಾಗುತ್ತದೆ.
ಅಲ್ಲದೇ ಊಟವಾದ ಬಳಿಕ, ನೀವು ಸೋಂಪು ಸೇವಿಸಿದರೆ, ಅದರಿಂದ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗತ್ತೆ. ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ನೋವಿನ ಸಮಸ್ಯೆ ಇದೆಲ್ಲದಕ್ಕೂ ಪರಿಹಾರ ಸಿಗುತ್ತದೆ. ಅಲ್ಲದೇ, ನಿಮಗೆ ಉರಿಯೂತವಿದ್ದರೆ ಅದು ಕೂಡ ಉಪಶಮನವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುವಂತೆ ಮಾಡುತ್ತದೆ.