ಡ್ರೈಫ್ರೂಟ್ಸ್ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಅದರೊಂದಿಗೆ ಖರ್ಜೂರ ಕೂಡ ಅತ್ಯುತ್ತಮವಾದ, ಪೌಷ್ಠಿಕಾಂಶವುಳ್ಳ ಆಹಾರವಾಗಿದೆ. ಹಾಗಾಗಿ ನಾವಿಂದು ಈ ಖರ್ಜೂರ ಸೇವನೆಯಿಂದ ನಮಗಾಗುವ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು ಬಳಿಕ ಒಂದು ಗ್ಲಾಸ್ ಬಿಸಿ ಹಾಲಿನೊಂದಿಗೆ 2 ಖರ್ಜೂರ ತಿಂದಲ್ಲಿ, ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ರಕ್ತ ಹೆಚ್ಚಿಸಲು ಇವು ಸಹಾಯ ಮಾಡುತ್ತದೆ. ಖರ್ಜೂರದಲ್ಲಿ ಪ್ರೋಟಿನ್, ಮೆಗ್ನಿಶಿಯಂ, ಫೈಬರ್, ಕಬ್ಬಿಣ ಸತ್ವ, ಕ್ಯಾಲ್ಶಿಯಂ ಎಲ್ಲವೂ ಇರುವುದರಿಂದ ಇದರ ಸೇವನೆಯಿಂದ ಮೂಳೆ ಗಟ್ಟಿಯಾಗುತ್ತದೆ. ಕೈ ಕಾಲು ನೋವಿದ್ದರೂ ಅದು ಕೂಡ ಕಡಿಮೆಯಾಗುತ್ತದೆ.
ನೀವು ಪ್ರತಿದಿನ 4 ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ, ನಿಮಗೆ ಹಲವು ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗತ್ತೆ. ಅನೇಮಿಯಾ, ಮಲಬದ್ಧತೆ, ಕೂದಲು ಉದುರುವ ಸಮಸ್ಯೆ, ಸಂಧಿವಾತ, ತಲೆನೋವು, ಮೊಡವೆ ಸಮಸ್ಯೆ, ಮುಟ್ಟು ಸರಿಯಾಗದಿದ್ದಾಗ, ಹೆಚ್ಚು ರಕ್ತಸ್ರಾವ ಆದಾಗ, ಪಿತ್ತ ಹೆಚ್ಚಾದಾಗ, ಇಂಥ ಸಮಸ್ಯೆಗಳಿಂದ ನೀವು ಮುಕ್ತಿ ಹೊಂದಬೇಕು ಎಂದಲ್ಲಿ ಪ್ರತಿದಿನ 4 ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.
ಇನ್ನು ನಿಮಗೆ ನೆನೆಸಿದ ಖರ್ಜೂರ ತಿನ್ನಲು ಸಾಧ್ಯವಾಗದಿದ್ದಲ್ಲಿ, ತುಪ್ಪವನ್ನು ಕಾಯಿಸಿ, ಅದಕ್ಕೆ ಖರ್ಜೂರ ಹಾಕಿಡಿ. ಪ್ರತಿದಿನ ಬೆಳಿಗ್ಗೆ 2ರಿಂದ 3 ಖರ್ಜೂರ ತಿಂದು ಬಿಸಿ ಹಾಲು ಕುಡಿಯಿರಿ. ಇದರಿಂದಲೂ ನಿಮ್ಮ ಆರೋಗ್ಯ ವೃದ್ಧಿಯಾಗತ್ತೆ. ನಿಮ್ಮ ಕೂದಲಿನ ಆರೋಗ್ಯ ಚೆನ್ನಾಗಿರತ್ತೆ. ನಿಮ್ಮ ತ್ವಚೆಯೂ ಸುಂದರವಾಗಿರತ್ತೆ. ನಿಮ್ಮ ಮೂಳೆ ಗಟ್ಟಿಯಾಗತ್ತೆ. ಜೀರ್ಣಕ್ರಿಯೆ ಉತ್ತಮವಾಗಿರತ್ತೆ. ಒಟ್ಟಾರೆಯಾಗಿ ಪ್ರತಿದಿನ 2 ಖರ್ಜೂರ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಹಲವಾರು ರೀತಿಯ ಆರೋಗ್ಯ ಲಾಭಗಳಿದೆ. ಇನ್ನು ನಿಮಗೆ ಖರ್ಜೂರ ತಿಂದಲ್ಲಿ ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.