ಪಕೋಡಾ ಅಂದ್ರೆ ಬಜ್ಜಿ ಅಂತಾನೇ ಎಲ್ಲರಿಗೂ ಗೊತ್ತಿರೋದು. ಆದ್ರೆ ಪ್ರತಿದಿನ ತಿನ್ನಬಹುದಾದ ಕುರುಕಲು ತಿಂಡಿಯನ್ನ ಕೂಡ ರಿಬ್ಬನ್ ಪಕೋಡ ಅಂತಾ ಕರೀತಾರೆ. ಇದನ್ನ ಕೂಡ ಕಡಲೆ ಹಿಟ್ಟಿನಿಂದಲೇ ತಯಾರಿಸುತ್ತಾರೆ. ಹಾಗಾದ್ರೆ ರಿಬ್ಬನ್ ಪಕೋಡಾ ತಯಾರಿಸಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ಕಡಲೆಹಿಟ್ಟು, ಅರ್ಧ ಸ್ಪೂನ್ ಅರಿಶಿನ, ಒಂದು ಸ್ಪೂನ್ ಖಾರದ ಪುಡಿ, ಒಂದು ಸ್ಪೂನ್ ಎಳ್ಳು, ಕಾಲು ಸ್ಪೂನ್ ವೋಮ, ಹಿಟ್ಟಿಗೆ 4 ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಮಿಕ್ಸಿಂಗ್ ಬೌಲ್‌ಗೆ ಅಕ್ಕಿ ಹಿಟ್ಟು ಮತ್ತು ಕಡಲೆಹಿಟ್ಟನ್ನ ಜರಡಿ ಮಾಡಿ ಸೇರಿಸಿ. ನಂತರ ಇದಕ್ಕೆ ಖಾರದಪುಡಿ, ಎಳ್ಳು, ವೋಮ, ಅರಿಶಿನ, ಉಪ್ಪು, ಎಣ್ಣೆ ಮತ್ತು ನೀರು ಹಾಕಿ, ಹಿಟ್ಟು ರೆಡಿ ಮಾಡಿಕೊಳ್ಳಿ. 15 ನಿಮಿಷ ಅದನ್ನು ಮುಚ್ಚಿಟ್ಟು, ನಂತರ ರಿಬ್ಬನ್ ಪಕೋಡಾ ಅಚ್ಚಿನಿಂದ, ಕಾದ ಎಣ್ಣೆಯಲ್ಲಿ ಪಕೋಡಾ ಕರಿಯಿರಿ.