Thursday, December 12, 2024

Latest Posts

ಹಲ್ಲಿನ ಆರೋಗ್ಯಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ..

- Advertisement -

ನಮ್ಮ ಮುಖ ಚೆನ್ನಾಗಿರಬೇಕು. ನಾವು ಚೆಂದಗಾಣಬೇಕು ಅಂದ್ರೆ, ಮೊದಲು ಚೆನ್ನಾಗಿರಬೇಕಾಗಿದ್ದು, ನಮ್ಮ ಕೂದಲು. ನಂತರ ನಮ್ಮ ಹಲ್ಲು. ಇವೆರಡು ಚೆಂದಗಾಣಿಸಿದರೆ, ನಾವು ಬ್ಯೂಟಿಫುಲ್ ಆಗಿ ಕಾಣುತ್ತೇವೆ. ಹಾಗಾಗಿ ನಾವಿಂದು ಹಲ್ಲಿನ ಸೌಂದರ್ಯ, ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಅಂತಾ ಹೇಳಲಿದ್ದೇವೆ.

ಮೊದಲನೇಯದಾಗಿ ನಿಮ್ಮ ಹಲ್ಲು ಹೊಳಪಿನಿಂದ ಕೂಡಿರಬೇಕು, ಆರೋಗ್ಯವಾಗಿರಬೇಕು ಅಂದ್ರೆ ನೀವು ದಿನಕ್ಕೆ ಎರಡು ಬಾರಿ ಬ್ರಶ್ ಮಾಡಬೇಕು. ಬೆಳಿಗ್ಗೆ ಪೇಸ್ಟ್ ಬಳಸಿದ್ರೆ, ರಾತ್ರಿ ಮಲಗುವಾಗ ಕೊಂಚ ನಿಂಬೆ ರಸ ಮತ್ತು ಉಪ್ಪು ಬಳಸಿ ಬ್ರಶ್ ಮಾಡಿ. ಇದರಿಂದ ನಿಮ್ಮ ಹಲ್ಲು ಬಿಳಿಯಾಗಿ, ಸ್ವಚ್ಛವಾಗಿ ಇರುತ್ತದೆ.

ಎರಡನೇಯದಾಗಿ ನೀವು ಪೇಸ್ಟ್ ಬದಲು ಬಬೂಲ್ ಕಡ್ಡಿ ಅಥವಾ ಬೇವಿನ ಕಡ್ಡಿ ಬಳಸಿ, ಹಲ್ಲುಜ್ಜಿ. ಇದರಿಂದ ಹಲ್ಲು ಹುಳುಕು ಹೋಗುತ್ತದೆ. ಕೆಲವರಿಗೆ ಬಾಲ್ಯದಿಂದ ಇದ್ದ ಹಲ್ಲು ಹುಳುಕು, ಬಬೂಲ್ ಮತ್ತು ಬೇವಿನ ಕಡ್ಡಿ ಬಳಸುವುದರಿಂದ ಮಾಯವಾಗಿದೆ. ಇದು ಉತ್ತಮವಾಗಿ ಕೆಲಸ ಮಾಡುತ್ತದೆ.

ಮೂರನೇಯದು ನೀವು ವಾರಕ್‌ಕೆ ಮೂರು ಬಾರಿಯಾದ್ರೂ ಆಯಿಲ್ ಪುಲ್ಲಿಂಗ್ ಮಾಡಿ. ಈ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೆವು. ಬಾಯಿಗೆ ಕೊಂಚ ತೆಂಗಿನ ಎಣ್ಣೆ ಹಾಕಿ, 15 ನಿಮಿಷ ಬಾಯಿ ಮುಕ್ಕಳಿಸಿ. ಸ್ವಚ್ಛಗೊಳಿಸಿ. ಇದರಿಂದ ನಿಮ್ಮ ಬಾಯಿಯಲ್ಲಿನ ಕೀಟಾಣು ನಾಶವಾಗುತ್ತದೆ. ಹಲ್ಲು ಸ್ವಚ್ಛವಾಗುತ್ತದೆ.

ನಾಲ್ಕನೇಯ ಕೆಲಸ ಬೆಳಿಗ್ಗೆ ಬ್ರಶ್ ಮಾಡುವಾಗ, ನಾಲಿಗೆಯನ್ನೂ ಸ್ವಚ್ಛಗೊಳಿಸಿ. ಇದರಿಂದಲೂ ನಿಮ್ಮ ಹಲ್ಲು ಸ್ವಚ್ಛವಾಗುತ್ತದೆ. ಮತ್ತು ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯ ವಿಷಯ ಅಂದ್ರೆ ನೀವು ಏನಾದರೂ ತಿಂದ ಬಳಿಕ ಮತ್ತು ಕುಡಿದ ಬಳಿಕ ಬಾಯಿ ವಾಶ್ ಮಾಡುವುದನ್ನ ಮಾತ್ರ ಮರಿಯಬೇಡಿ. ಮತ್ತು ರಾತ್ರಿ ಮಲಗುವಾಗ ಒಮ್ಮೆ ಬ್ರಶ್ ಮಾಡಿದ್ರೆ, ಮರೆತೂ ಕೂಡ ಏನನ್ನೂ ತಿನ್ನಬೇಡಿ.

ಮಾನಸಿಕವಾಗಿ ನೀವು ಆರೋಗ್ಯವಾಗಿರಬೇಕು ಅಂದ್ರೆ ಹೀಗೆ ಮಾಡಿ.. ಭಾಗ 2

ಟೊಮೆಟೋ ಚಟ್ನಿಯನ್ನ ಈ ರೀತಿ ಒಮ್ಮೆ ಮಾಡಿ ನೋಡಿ..

ರಿಬ್ಬನ್ ಪಕೋಡಾ ಮಾಡೋದು ಹೇಗೆ ಗೊತ್ತಾ..?

- Advertisement -

Latest Posts

Don't Miss