ಮುಂಬೈ: ಟಿಪ್ಪು ಸುಲ್ತಾನ್ ಜೀವನದ ಬಗ್ಗೆ ಸಿನಿಮಾ ರಿಲೀಸ್ ಆಗಲಿದ್ದು, ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್ನಲ್ಲಿ ಟಿಪ್ಪು ಮುಖಕ್ಕೆ ಮಸಿ ಬಳಿಯಲಾಗಿದ್ದು, ಇದು ಮತಾಂಧನ ಇತಿಹಾಸ ಎಂದು ಚಿತ್ರತಂಡ ಹೇಳಿದೆ.
ಪವನ್ ಶರ್ಮಾ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಸಿನಿಮಾಗೆ ಟಿಪ್ಪು ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಟಿಪ್ಪು ಹೇಗೆ ಹಿಂದೂಗಳನ್ನು ಮತಾಂತರ ಮಾಡಿದ, ದೇವಸ್ಥಾನವನ್ನು ಕೆಡವಿದ ಎನ್ನುವ ಬಗ್ಗೆ ತೋರಿಸಲಾಗಿದೆಯಂತೆ. 8 ಸಾವಿರ ದೇವಸ್ಥಾನ, 27 ಚರ್ಚ್ಗಳನ್ನು ಧ್ವಂಸ ಮಾಡಲಾಗಿದ್ದು, 4 ಮಿಲಿಯನ್ ಹಿಂದೂಗಳನ್ನು ಮತಾಂತರ ಮಾಡಲಾಗಿದೆ. ಮತ್ತು ಗೋ ಮಾಂಸವನ್ನು ತಿನ್ನುವಂತೆ ಒತ್ತಾಯಿಸಲಾಗಿತ್ತು ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆಯಂತೆ.
ಅಲ್ಲದೇ 1 ಲಕ್ಷ ಹಿಂದೂಗಳನ್ನು ಜೈಲಿಗೆ ಹಾಕಿದ್ದು, 2 ಸಾವಿರ ಬ್ರಾಹ್ಮಣರನ್ನು ಹಿಂಸಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಭಾಷೆಯಲ್ಲಿ ರಿಲೀಸ್ ಆಗಲಿದೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ.
EROS – SANDEEP SINGH – RASHMI SHARMA JOIN HANDS… ANNOUNCE ‘TIPU’… #SandeepSingh [currently producing #SwatantryaVeerSavarkar, #Atal and #BalShivaji] and #RashmiSharma [#Pink] announce a film based on the life of #TipuSultan… Titled #Tipu.
An #ErosInternational and Rashmi… pic.twitter.com/YmIIpyb5wr
— taran adarsh (@taran_adarsh) May 4, 2023