Friday, December 5, 2025

Latest Posts

‘ಬಿಜೆಪಿ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಅಂದರೆ ಬಿಜೆಪಿ’

- Advertisement -

ಮಂಡ್ಯ: ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ರೋಡ್ ಶೋ ನಡೆಸಿದ್ದಾರೆ. ಮಂಡ್ಯ ನಗರದ ಕಾಳಿಕಾಂಬ ದೇವಸ್ಥಾನದಿಂದ ಬೃಹತ್ ರೋಡ್‌ಶೋ ಆರಂಭಿಸಿದ್ದು, ಬೈಕ್ ರ್ಯಾಲಿ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಗಿದೆ.

ಈ ವೇಳೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಬೃಹತ್ ಹಾರ ಹಾಗೂ ಪುಷ್ಪವೃಷ್ಟಿ ಸಲ್ಲಿಸಿ ಅಶೋಕ್ ಜಯರಾಂರನ್ನು ಕಾರ್ಯಕರ್ತರು ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅಶೋಕ್, ಕಾರ್ಯಕರ್ತರಲ್ಲಿ ಉತ್ಸಹ, ಜನರಲ್ಲಿ ಸ್ಪಂದನೆ ಸಿಕ್ತಿದೆ. ಬಿಜೆಪಿ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಅಂದರೆ ಬಿಜೆಪಿ. ಮಂಡ್ಯ ಸ್ಮಾರ್ಟ್ ಸಿಟಿ ಆಗಬೇಕು. ಬದಲಾವಣೆಯ ಗಾಳಿ ಬಿಸುತ್ತಿದೆ. ನರೇಂದ್ರ ಮೋದಿ ಬರುತ್ತಿರುವ ಹಿನ್ನಲೆ ಅಶ್ವಥ್ ನಾರಾಯಣ ಬರುವುದಕ್ಕೆ ಹಾಗಿಲ್ಲ. ಅಭಿಷೇಕ್ ಅಂಬರೀಶ್ ಗೆ ಆರೋಗ್ಯ ಸರಿಲ್ಲದ ಕಾರಣ ಬರಲ್ಲಿಲ್ಲ. ಜನರು ಬಿಜೆಪಿಗೆ ಮತ ಕೊಟ್ಟು ಆಶೀರ್ವಾದ ಮಾಡಿ. ಮಂಡ್ಯ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

‘ನೀವು ದೇವೇಗೌಡ ಬದುಕಿದ್ದಾಗ ಈ ಶರೀರಕ್ಕೆ ನೋವನ್ನು ಕೊಡಬೇಡಿ’

ಗಮನಸೆಳೆದ ಬಿ.ವೈ. ವಿಜಯೇಂದ್ರ-ಪ್ರೀತಂಗೌಡ್ರ ಬುಲೆಟ್ ಸವಾರಿ: ಕಾರ್ಯಕರ್ತರ ಜೊತೆ ಶಾಸಕರ ನೃತ್ಯ

ನಾಗಮಂಗಲದಲ್ಲಿ ಸ್ಮೃತಿ ಇರಾನಿ ಕ್ಯಾಂಪೇನ್: ಸುಧಾ ಶಿವರಾಮೇಗೌಡರನ್ನ ಅನ್ನಪೂರ್ಣೇಶ್ವರಿ ಎಂದ ಸಚಿವೆ

- Advertisement -

Latest Posts

Don't Miss