ಲಖನೌ: ಸದ್ಯಕ್ಕೆ ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವ ವಿಷಯ ಅಂದ್ರೆ ವಿಧಾನಸಭೆ ಚುನಾವಣೆ ಮತ್ತು ಅದರ ರಿಸಲ್ಟ್ ಹೇಗೆ ಬರತ್ತೆ ಅನ್ನುವ ವಿಷಯ. ಆದ್ರೆ ಇಡೀ ದೇಶದಲ್ಲಿ ಸುದ್ದಿಯಾಗಿರುವ ವಿಷಯ ಅಂದ್ರೆ ದಿ ಕೇರಳ ಸ್ಟೋರಿ ಸಿನಿಮಾ. ಇದು ಲವ್ ಜಿಹಾದ್ ಕಥೆಯನ್ನು ಹೊಂದಿದ್ದು, ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ, ಇನ್ನು ಕೆಲವರು ಸಿನಿಮಾ ಸೂಪರ್, ಇಂಥ ಸಿನಿಮಾ ಇನ್ನಷ್ಟು ಬೇಕು ಎಂದಿದ್ದಾರೆ.
ಉತ್ತರಪ್ರದೇಶದಲ್ಲಂತೂ ಯೋಗಿ ಆದಿತ್ಯನಾಥ್ ದಿ ಕೇರಳ ಸ್ಚೋರಿ ಸಿನಿಮಾಗೆ ತೆರಿಗೆ ಇಲ್ಲವೆಂದು ಹೇಳಿದ್ದಾರೆ. ಈ ಮೂಲಕ ಸಿನಿಮಾ ತಂಡಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿದ್ದು, ಇದಕ್ಕೂ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಹೊಸ ವಿಷಯ ಏನಪ್ಪಾ ಅಂದ್ರೆ, ಉತ್ತರಪ್ರದೇಶದಲ್ಲಿ ಈ ಸಿನಿಮಾಕ್ಕೆ ತೆರಿಗೆ ತೆಗೆದಿದ್ದಕ್ಕೆ, ಧನ್ಯವಾದ ಹೇಳಲು, ಈ ಸಿನಿಮಾ ತಂಡ, ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್‌ರನ್ನ ಭೇಟಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಇಂದು ಲಕ್ನೋದ ಅಧಿಕೃತ ನಿವಾಸದಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರದ ತಂಡವನ್ನು ಸೌಜನ್ಯಯುತವಾಗಿ ಭೇಟಿ ಮಾಡಲಾಯಿತು ಎಂದು ಬರೆದುಕೊಂಡಿದ್ದಾರೆ.
ಉತ್ತರಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ನೋಡಲು ಕೊಡಬೇಕಾಗಿಲ್ಲ ತೆರಿಗೆ: ಯೋಗಿ ಆದೇಶ
ಯಾವ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು, ಎಲ್ಲೆಲ್ಲಿ ಮತದಾನ ಮಾಡುತ್ತಾರೆ..?