Friday, December 13, 2024

Latest Posts

ಮಗು ಹುಟ್ಟಿದ ಬಳಿಕ, ಬಾಣಂತಿಯರು ಎಂದಿಗೂ ಈ ತಪ್ಪು ಮಾಡಬೇಡಿ

- Advertisement -

ತಾಯಿಯಾಗುವುದು, ಮಗುವನ್ನ ಗರ್ಭದಲ್ಲಿ ಹಿಡಿದಿಟ್ಟುಕೊಳ್ಳುವುದು, ಬಾಣಂತನ ಇವೆಲ್ಲವೂ ಹೆಣ್ಣಿಗೊಂದು ಚಾಲೆಂಜ್ ಇದ್ದ ಹಾಗೆ. ಆಕೆಯ ಮಗು ಮತ್ತು ಆಕೆಯ ಆರೋಗ್ಯ ಉತ್ತಮವಾಗಿದ್ದು, ಬಾಣಂತನ ಚೆನ್ನಾಗಿ ಆದರೆ, ಆಕೆ ಗೆದ್ದ ಹಾಗೆ. ಆದರೆ ನೀವು ಬಾಣಂತನದ ಸಮಯದಲ್ಲಿ ಕೆಲ ತಪ್ಪುಗಳನ್ನ ಮಾಡಿದಿರೋ, ಜೀವನ ಪರ್ಯಂತ ಸಮಸ್ಯೆ ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಮಗು ಹುಟ್ಟಿದ ಬಳಿಕ, ಬಾಣಂತಿಯರು ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಸಡನ್ನಾಗಿ ನಮ್ಮ ದೇಹದ ತೂಕ ಕಡಿಮೆಯಾದಾಗ, ನಮ್ಮ ದೇಹದಲ್ಲಿರುವ ಶಕ್ತಿ ಕುಂದಿಹೋಗುತ್ತದೆ. ಈ ವೇಳೆ ಸ್ವಲ್ಪ ವಿಶ್ರಾಂತಿ, ಉತ್ತಮ ಊಟದ ಅವಶ್ಯಕತೆ ಇರುತ್ತದೆ. ಓರ್ವ ಗರ್ಭಿಣಿ, ತನ್ನ ಹೊಟ್ಟೆಯಲ್ಲಿ ಮಗುವನ್ನು ಹೊತ್ತಾಗಲೂ, ಅದು ಆಕೆಯ ದೇಹದ ಭಾಗವೇ ಆಗಿರುತ್ತದೆ. ಹಾಗಾಗಿ ಮಗು ಹುಟ್ಟಿದ ಬಳಿಕ, ಆಕೆಯ ದೇಹದ ತೂಕ ಕಡಿಮೆಯಾಗುತ್ತದೆ. ಈ ವೇಳೆ ಆಕೆಗೆ ಸರಿಯಾದ ವಿಶ್ರಾಂತಿ ಮತ್ತು ಉತ್ತಮ ಆಹಾರ ಸೇವನೆಯ ಅವಶ್ಯಕತೆ ಇರುತ್ತದೆ.

ಇದಕ್ಕಾಗಿ ಬಾಣಂತಿಯರು ಬೆಚ್ಚಗೆ ಇರಬೇಕು. ಹೆಚ್ಚು ಉಷ್ಣವೂ ಅಲ್ಲದ, ಹೆಚ್ಚು ತಂಪು ಅಲ್ಲದ, ಆಹಾರಗಳನ್ನು ತಿನ್ನಬೇಕು.  ಹೆಚ್ಚು ಕೆಲಸ ಮಾಡಬಾರದು. ಎಣ್ಣೆಯಿಂದ ಚೆನ್ನಾಗಿ ಬಾಡಿ ಮಸಾಜ್ ಮಾಡಿ, ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಬಿಸಿ ಬಿಸಿ ನೀರು ಕುಡಿಯಬೇಕು. ಖಾರಾ, ಮಸಾಲೆ ಪದಾರ್ಥ ತಿನ್ನದೇ, ಪಥ್ಯ ಮಾಡಬೇಕು ಎಂದು ಹೇಳಲಾಗುತ್ತದೆ.

ಈ ಸಮಯದಲ್ಲಿ ಹಣ್ಣು, ಹಾಲು, ಮೊಸರು, ಮಜ್ಜಿಗೆ, ತುಪ್ಪ, ನಾರಿನ ಅಂಶವಿರುವ ತರಕಾರಿ, ಸೊಪ್ಪು, ನೆನೆಸಿದ ಡ್ರೈಫ್ರೂಟ್ಸ್, ಕಾಳು ಹೀಗೆ ಹಲವು ಆರೋಗ್ಯಕರ ಆಹಾರವನ್ನು ಸೇವಿಸಬೇಕಾಗುತ್ತದೆ. ಇದು ತಾಯಿಯ ಆರೋಗ್ಯಕ್ಕೆ ಮಾತ್ರವಲ್ಲದೇ, ಮಗುವಿನ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಮಗು ಶಕ್ತಿವಂತವಾಗಬೇಕು. ಮಗುವಿನ ಮೂಳೆ, ಹಲ್ಲು ಗಟ್ಟಿಗೊಳ್ಳಬೇಕು ಎಂದಲ್ಲಿ, ಕ್ಯಾಲ್ಶಿಯಂ ಅಂಶ ಹೆಚ್ಚಿರುವ ಆಹಾರವನ್ನು ತಿನ್ನಬೇಕು.

ಇನ್ನು ಬಾಣಂತಿಯರು ಎಂದಿಗೂ ಮಾಡಬಾರದ ತಪ್ಪುಗಳೆಂದರೆ, ನಿಮ್ಮ ಬಾಣಂತನ ಪೂರ್ತಿಯಾಗುವವರೆಗೂ, ಕಾಫಿ, ಟೀ, ಮಸಾಲೆ ಪದಾರ್ಥ, ಖಾರ ಪದಾರ್ಥಗಳ ಸೇವನೆ ಮಾಡಬಾರದು. ಹೆಚ್ಚು ಕೆಲಸ ಮಾಡಬಾರದು. ವ್ಯಾಯಾಮ, ವಾಕಿಂಗ್ ಅಗತ್ಯಕ್ಕಿಂತ ಹೆಚ್ಚು ಮಾಡಲೇಬಾರದು. ಬಾಣಂತನ ಮುಗಿಯದೇ, ದೂರ ಪ್ರಯಾಣ ಮಾಡಬೇಡಿ. ತಣ್ಣೀರಿನ ಸೇವನೆ, ತಣ್ಣೀರಿನ ಸ್ನಾನ ಮಾಡಬೇಡಿ. ನಿಮ್ಮ ದೇಹ ಎಷ್ಟು ಬೆಚ್ಚಗಿರುತ್ತದೆಯೋ, ಅಷ್ಟು ಉತ್ತಮ. ಬಾಣಂತನದಲ್ಲಿ ನಿಮಗೆ ನೆಗಡಿ, ಜ್ವರ, ಬೆನ್ನು ನೋವು, ಸೊಂಟ ನೋವು ಬಂದರೆ, ನೀವು ಸಾಯುವವರೆಗೂ ಅದರ ನೋವನ್ನು ಅನುಭವಿಸಬೇಕಾಗುತ್ತದೆ.

ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ..? ಕೆಟ್ಟದ್ದಾ..?

ನಿಮ್ಮ ಮುಖ ಹೊಳಪಿನಿಂದ ಕೂಡಿರಬೇಕು ಅಂದ್ರೆ ಏನು ತಿನ್ನಬೇಕು..? ಏನು ತಿನ್ನಬಾರದು..?

ನೈಟ್ ಶಿಫ್ಟ್ ಮಾಡುವಾಗ ತಿನ್ನಬಹುದಾದ ಆಹಾರಗಳು ಯಾವುದು..?

- Advertisement -

Latest Posts

Don't Miss