ಈ ಮೊದಲು ನಾವು ಇದಕ್ಕೆ ಸಂಬಂಧಿಸಿದಂತೆ, ಎರಡು ಲೇಖನದ ಮೂಲಕ ನಿಮಗೆ ಮಾಹಿತಿ ನೀಡಿದ್ದೆವು. ಇದೀಗ ವಿದೇಶದಲ್ಲಿ ವ್ಯಾಸಂಗ ಮಾಡುವ ಬಗ್ಗೆ, ಮತ್ತು ಉದ್ಯೋಗ ಪಡೆಯುವ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಶಿವಕೃಷ್ಣ ತಿಳಿಸಿದ್ದಾರೆ.
ಕೇರಿಯರ್ ಗ್ಯಾನ್ ನೇತೃತ್ವದ್ಲಲಿ, ಶಿವಕೃಷ್ಣ ಅವರ ಸಾರಥ್ಯದಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವವರಿಗೆ, ಅನುಕೂಲ ಮಾಡಲಾಗುತ್ತದೆ. ಸ್ಕೋರ್ ಉತ್ತಮವಾಗಿದ್ದಲ್ಲಿ, ಸ್ಕಾಲರ್‌ಶಿಪ್, ವಿದ್ಯಾಭ್ಯಾಸದ ಲೋನ್ ಕೂಡ ಸಿಗುತ್ತದೆ. ವಿದೇಶದಲ್ಲಿ ಓದುತ್ತ, ಪಾರ್ಟ್ ಟೈಮ್ ಕೆಲಸ ಕೂಡ ಮಾಡುವ ಅವಕಾಶವಿದೆ. ಇಂದು ಶಿವಕೃಷ್ಣ, ಪಿಯುಸಿ ಆಗಿ 2 ವರ್ಷ ವೇಸ್ಟ್ ಆದರೂ ಕೂಡ, ಅಂಥ ವಿದ್ಯಾರ್ಥಿಗಳು ಯಾವ ರೀತಿ, ವಿದೇಶದಲ್ಲಿ ವಿದ್ಯಾಭ್ಯಾಸ ಪಡಿಯಬಹುದು ಎಂದು ತಿಳಿಸಿದ್ದಾರೆ.
ಜಪಾನಿ ಭಾಷೆ ಕಲಿತಲ್ಲಿ, ನೀವು ಜಪಾನ್‌ನಲ್ಲಿ ಒಂದು ರೂಪಾಯಿ ಖರ್ಚು ಮಾಡದೇ, ಮಾಸ್ಟರ್ಸ್ ಓದಬಹುದು. ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್ ಇಂಜಿನಿಯರ್ ಸೇರಿ ಹಲವು ವಿದ್ಯಾಭ್ಯಾಸದ ಬಗ್ಗೆ, ಶಿವಕೃಷ್ಣ ಮಾಹಿತಿ ನೀಡಿದ್ದಾರೆ. ಅಲ್ಲದೇ, ಇಂಗ್ಲೀಷ್ ಜೊತೆಗೆ, ನೀವು ವಿದ್ಯಾಭ್ಯಾಸಕ್ಕೆ ಹೋದ, ದೇಶದ ಭಾಷೆ ಕಲಿಯುವುದು ಮುಖ್ಯವಾಗಿದೆ. ಫ್ರೆಂಚ್, ಇಟಾಲಿಯನ್, ಜರ್ಮನ್, ಸ್ಪ್ಯಾನಿಶ್ ಸೇರಿ, ಹಲವು ಭಾಷೆ ಕಲಿಯುವುದರಿಂದ, ಆಫ್ರಿಕಾ, ಜರ್ಮನಿ, ಇಟಲಿ ಸೇರಿ ದೊಡ್ಡ ದೊಡ್ಡ ದೇಶಗಳಲ್ಲಿ ನೀವು ಉದ್ಯೋಗ ಕೂಡ ಹುಡುಕಿಕೊಳ್ಳಬಹುದು.
ಇನ್ನು ವೀಸಾ ಬೇಕಾದಲ್ಲಿ, ಫೈನಾನ್ಶಿಯಲ್ ಡಾಕ್ಯೂಮೆಂಟ್ಸ್ ತುಂಬಾ ಇಂಪಾರ್ಟೆಂಟ್ ಇರುತ್ತದೆ. ಫೈನಾನ್ಶಿಯಲ್ ಡಾಕ್ಯೂಮೆಂಟ್ಸ್ ಸರಿಯಾಗಿ ಇಲ್ಲದ ಕಾರಣ, ಹಲವರ ವೀಸಾ ರಿಜೆಕ್ಟ್ ಆದ ಉಹಾರಣೆಗಳಿದೆ. ಹಾಗಾಗಿ ಇದು ತುಂಬಾ ಮುಖ್ಯವಾದ ಅಂಶವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬೇಕಿದ್ದಲ್ಲಿ, ಈ ವೀಡಿಯೋ ನೋಡಿ.