Health Tips: ಕೆಲವರು ಉಳಿದಿದ್ದನ್ನ ಹಾಳು ಮಾಡೋದು ಬೇಡ. ನಾಳೆ ಬಿಸಿ ಮಾಡಿಕೊಂಡು ತಿಂದರಾಯಿತು ಎಂದು ಆಹಾರವನ್ನು ಇರಿಸುತ್ತಾರೆ. ಇನ್ನು ಕೆಲವರು ನಾಳೆ ಮತ್ತೆ ಅಡುಗೆ ಯಾರ್ ಮಾಡ್ತಾರೆ ಅನ್ನೋ ಉದಾಸೀನತೆಯಿಂದ ಹೀಗೆ ಮಾಡುತ್ತಾರೆ. ಇನ್ನು ಕೆಲವರು ಇಂದಿನ ಸಾಂಬಾರ್ ನಾಳೆ ಇನ್ನೂ ಹೆಚ್ಚು ರುಚಿಸುತ್ತೆ ಅನ್ನೋ ಕಾರಣಕ್ಕೆ, ಸಾರು, ಸಾಂಬಾರ್ ಇಟ್ಟು, ಮರುದಿನ ಅದನ್ನೇ ಬಿಸಿ ಮಾಡಿ ತಿಂತಾರೆ. ಆದರೆ ಹೀಗೆ ಇಂದಿನ ಊಟವನ್ನು ನಾಳೆ ಬಿಸಿ ಮಾಡಿ ತಿನ್ನುವುದು ಒಳ್ಳೇದಾ..? ಕೆಟ್ಟದ್ದಾ..? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಭಗವದ್ಗೀತೆಯ ಪ್ರಕಾರ, ಅಂದು ಮಾಡಿದ ಅಡುಗೆಯನ್ನ ಅಂದೇ ತಿನ್ನಬೇಕು. ಅಥವಾ ಕೆಲವೇ ಗಂಟೆಯಲ್ಲಿ ಆ ಅಡುಗೆಯನ್ನ ತಿಂದು ಮುಗಿಸಬೇಕು ಅಂತಾ ಹೇಳಲಾಗಿದೆ. ಯಾಕಂದ್ರೆ ಇಂದು ಮಾಡಿದ ಆಹಾರ, ನಾಳೆಗಿಟ್ಟರೆ, ಅದು ತಾಮಸಿಕ ಆಹಾರವಾಗಿ ಮಾರ್ಪಾಡಾಗುತ್ತದೆ. ಮತ್ತು ತಾಮಸಿಕ ಆಹಾರದ ಸೇವೆನೆಯಿಂದ ನಮ್ಮ ಆರೋಗ್ಯವೂ ಹಾಳಾಗುತ್ತದೆ.
ಹಾಗಾದ್ರೆ ತಾಮಸಿಕ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೇನು ಸಮಸ್ಯೆ ಅಂತಾ ಹೇಳುವುದಾದರೆ, ಇಂದು ಮಾಡಿದ ಅಡುಗೆಯಲ್ಲಿ ಮರುದಿನ ಯಾವುದೇ ಪೌಷ್ಠಿಕಾಂಶ ಇರುವುದಿಲ್ಲ. ಅವುಗಳು ರುಚಿಯಾಗಿದ್ದರೂ, ಆ ಆಹಾರ ತಿನ್ನುವುದರಿಂದ, ನಮ್ಮ ಆರೋಗ್ಯಕ್ಕೇನೂ ಪ್ರಯೋಜನವಾಗುವುದಿಲ್ಲ. ಮತ್ತು ನೀವು ಪ್ರತಿದಿನ ಇಂಥ ತಾಮಸಿಕ ಆಹಾರವನ್ನೇ ತಿಂದರೆ, ನಿಮ್ಮ ಆರೋಗ್ಯ ಬೇಗ ಹಾಳಾಗುತ್ತದೆ. ಬೊಜ್ಜು ಬೆಳೆಯುತ್ತದೆ. ನಿಮ್ಮ ಆಲಸ್ಯ ಹೆಚ್ಚುತ್ತದೆ.
ನಮ್ಮ ಪೂರ್ವಜರೆಲ್ಲ, ಅಂದಿನ ದಿನಕ್ಕೆಷ್ಟು ಅಡುಗೆ ಬೇಕೋ, ಅಷ್ಟೇ ಮಾಡಿ. ಅಂದಿನ ಊಟವನ್ನು ಅಂದೇ ತಿನ್ನುತ್ತಿದ್ದರು. ಹಾಗಾಗಿ ಅವರು ಆರೋಗ್ಯವಂತರಾಗಿದ್ದರು. ಇಂದಿನ ಆಹಾರವನ್ನು ಫ್ರಿಜ್‌ನಲ್ಲಿರಿಸಿ, ಮರುದಿನ ಬಿಸಿ ಮಾಡಿಕೊಂಡು ತಿನ್ನುವ ಸಂಪ್ರದಾಯ ಬಂದಿದ್ದೇ ಬ್ರಿಟೀಶರಿಂದ. ಅದು ನಮ್ಮ ಭಾರತೀಯ ಪದ್ಧತಿ ಅಲ್ಲವೇ ಅಲ್ಲ. ಹಾಗಾಗಿ ನೀವು ಇಂದು ತಯಾರಿಸಿದ ಅಡುಗೆಯನ್ನು ಇಂದೇ ತಿನ್ನಿ. ಉಳಿದರೆ, ನಾಯಿ, ಹಸು ಅಥವಾ ಆಹಾರಕ್ಕಾಗಿ ಪರದಾಡುವವರಿಗೆ ಆಹಾರವನ್ನು ದಾನ ಮಾಡಿ.