Recipe: ಆಲೂ, ಬೀಟ್ರೂಟ್, ಪಾಲಕ್, ತರಕಾರಿ ಎಲ್ಲವನ್ನೂ ಬಳಸಿ ಕಬಾಬ್ ಮಾಡಿ, ನೀವು ಸವಿದಿರುತ್ತೀರಿ. ಆದ್ರೆ ನಾವಿಂದು ಕಡಲೆಯನ್ನ ಉಪಯೋಗಿಸಿ, ಹೇಗೆ ಕಬಾಬ್ ತಯಾರಿಸುವುದು ಅಂತಾ ತಿಳಿಯೋಣ ಬನ್ನಿ..
1 ಕಪ್ ಕಪ್ಪು ಕಡಲೆಯನ್ನು ಚೆನ್ನಾಗಿ ತೊಳೆದು ನೆನೆಸಿಡಿ. 7ರಿಂದ 8 ಗಂಟೆಯಾದರೂ ಕಡಲೆ ನೆನೆಯಬೇಕು. ಈಗ ನೆನೆದ ಕಡಲೆ, ಎರಡು ಕತ್ತರಿಸಿದ ಈರುಳ್ಳಿ, 4 ಹಸಿಮೆಣಸು ಮತ್ತು ಅಗತ್ಯವಿದ್ದಷ್ಟು ಉಪ್ಪು, ನೀರು ಸೇರಿಸಿ, ಕುಕ್ಕರ್‌ನಲ್ಲಿ ಬೇಯಿಸಿ. ಈ ಮಿಶ್ರಣ ಬೆಂದ ಬಳಿಕ, ನೀರು ಮತ್ತು ಮಿಶ್ರಣ ಬೇರೆ ಬೇರೆಗೊಳಿಸಿ. ಈಗ ಕಡಲೆ ಮಿಶ್ರಣ ತಣ್ಣಗಾದ ಬಳಿಕ, ಮಿಕ್ಸಿ ಜಾರ್‌ಗೆ ಹಾಕಿ, ಥಿಕ್ ಪೇಸ್ಟ್ ತಯಾರಿಸಿ. ಇದು ತರಿತರಿಯಾಗಿರಲಿ.
ಈಗ ಪ್ಯಾನ್ ಬಿಸಿ ಮಾಡಿ, ಇದಕ್ಕೆ 4 ಟೇಬಲ್ ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ಖಾರದ ಪುಡಿ, ಚಾಟ್ ಮಸಾಲೆ ಪುಡಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಇವಿಷ್ಟನ್ನ ಹಾಕಿ, ಕೊಂಚ ಹುರಿಯಿರಿ. ಈಗ ಇದನ್ನು ಕಡಲೆ ಪೇಸ್ಟ್‌ಗೆ ಸೇರಿಸಿ. ಜೊತೆಗೆ ಒಂದು ಬೇಯಿಸಿ ಮ್ಯಾಶ್ ಮಾಡಿದ ಬಟಾಟೆ, ಹುರಿದು ಪುಡಿ ಮಾಡಿದ ಪುಟಾಣಿ, ಉಪ್ಪು, ಕಪ್ಪುಪ್ಪು ಕೂಡ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಕಬಾಬ್ ರೀತಿ ಶೇಪ್ ಕೊಟ್ಟು, ಎಣ್ಣೆಯಲ್ಲಿ ಕರಿಯಿರಿ. ಅಥವಾ ತವ್ವಾದ ಮೇಲೆ ಕೊಂಚ ಎಣ್ಣೆ ಹಾಕಿ, ತವಾ ಫ್ರೈ ಮಾಡಿದ್ರೆ, ಕಡಲೆ ಕಬಾಬ್ ರೆಡಿ.