Kolar News: ಕೋಲಾರ : ಇಂದು ರಾಜ್ಯಾದ್ಯಂತ ಲೋಕಾಯುಕ್ತರು ಹಲವು ಅಧಿಕಾರಿಗಳ ಮನೆ ಮೇಲೆ ರೇಡ್ ಮಾಡಿದ್ದು, ರಾಶಿ ರಾಶಿ ಹಣವನ್ನ ವಶಪಡಿಸಿಕೊಂಡಿದ್ದಾರೆ.
ಕೋಲಾರದಲ್ಲೂ ಕೂಡ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ ಮಾಡಿದ್ದು, ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ. ಕುವೆಂಪು ನಗರದ ಪೂಜ ನಿಲಯ ಮನೆ ಸೇರಿ 5 ಕಡೆ ಲೋಕಾ ದಾಳಿ ಮಾಡಿದ್ದು, ಅಧಿಕಾರಿ ಕೋದಂಡರಾಮಯ್ಯ ಮನೆ ಮೇಲೂ ರೇಡ್ ನಡೆದಿದೆ.
ಕೋದಂಡರಾಮಯ್ಯ, ತುಮಕೂರಿನಲ್ಲಿ ಲ್ಯಾಂಡ್ ಆರ್ಮಿಯಲ್ಲಿ AE ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮನೆ ಮೇಲೆ ಲೋಕಾಯುಕ್ತ SP ಉಮೇಶ್ ನೇತೃತ್ವದಲ್ಲಿ ರೇಡ್ ನಡೆದಿದ್ದು, ಈ ತಂಡದಲ್ಲಿ 10 ಜನ ಅಧಿಕಾರಿಗಳಿದ್ದರು.
ಬೆಳಿಗ್ಗೆ 6 ಗಂಟೆಯಿಂದ ಮನೆ, ಕಾಂಪ್ಲೆಕ್ಸ್, ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಸಾಗರ ಮನೆ, ತುಮಕೂರಿನ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಇವರ ಮೇಲಿತ್ತು.
ಶತಮಾನದಷ್ಟು ಹಳೆಯದಾದ ಹುಣಸೂರು ಸೇತುವೆ ಶಿಥಿಲ, ನಿಷೇಧವಿದ್ದರೂ ಸಂಚರಿಸುವ ಭಾರಿ ವಾಹನಗಳು
ಅಕ್ಕಿ ಬರುವವರೆಗೂ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ರಾಜ್ಯ ಸರ್ಕಾರ ನಿರ್ಧಾರ