Sunday, April 20, 2025

Latest Posts

ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಅತ್ಯುತ್ತಮ ಪ್ರಯೋಜನಗಳಿವು.

- Advertisement -

Beauty Tips: ಸಕ್ಕರೆ ಬಳಸದೇ ಯಾವ ಜ್ಯೂಸ್ ಕುಡಿದರೂ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಜ್ಯೂಸ್‌ಗಳ ಸೇವನೆ ಮಾಡುವುದು ಅತ್ಯುತ್ತಮ. ಅದರಲ್ಲೂ ನೆಲ್ಲಿಕಾಯಿಯಲ್ಲಿರುವ ಭರಪೂರ ಪೋಷಕಾಂಶಗಳು ನಿಮ್ಮ ಆರೋಗ್ಯವನ್ನ ಉತ್ತಮವಾಗಿರಿಸುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ ಇಂದು ನಾವು ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..

ನೆಲ್ಲಿಕಾಯಿಯಲ್ಲಿ ವಿಟಾಮಿನ್ ಎ, ಸಿ, ಇ, ಕ್ಯಾಲ್ಸಿಯಂ ಅಂಶವಿದೆ. ಇದು ನಮ್ಮ ದೇಹ ಗಟ್ಟಿಮುಟ್ಟಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿಯೇ ಗರ್ಭಿಣಿಯರು ಪ್ರತಿದಿನ ಒಂದು ನೆಲ್ಲಿಕಾಯಿ ತಿಂದರೆ, ಹುಟ್ಟುವ ಮಗು ಗಟ್ಟಿಮುಟ್ಟಾಗಿ, ಆರೋಗ್ಯವಾಗಿರುತ್ತದೆ ಅಂತಾ ಹೇಳಲಾಗತ್ತೆ. ಅಷ್ಟೇ ಅಲ್ಲದೇ, ಬಿದ್ದು ಮೂಳೆ ಮುರಿದರೆ, ಅಪಘಾತವಾಗಿದ್ದರೆ, ಪ್ರತಿದಿನ ನೆಲ್ಲಿಕಾಯಿ ತಿನ್ನಲು ಕೊಡುತ್ತಾರೆ. ಇದರಿಂದ ಡ್ಯಾಮೇಜ್ ಆಗಿರುವ ಅವರ ಕೈ ಕಾಲು ಸರಿಯಾಗುತ್ತದೆ.

ಅಷ್ಟೇ ಅಲ್ಲದೇ, ಶುಗರ್ ಇದ್ದವರು ಕೂಡ ಇದರ ಸೇವನೆ ಮಾಡಿದರೆ, ಶುಗರ್ ಕಂಟ್ರೋಲಿಗೆ ಬರುತ್ತದೆ. ನಿಮಗೆ ಯಾವ ಖಾಯಿಲೆ ಇಲ್ಲದಿದ್ದರೂ, ನೀವು ನೆಲ್ಲಿಕಾಯಿ ಜ್ಯೂಸ್ ಕುಡಿದರೆ, ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಮತ್ತು ಜೀರ್ಣಕ್ರಿಯೆ ಉತ್ತಮವಾಗಿದ್ದರೆ, ನೀವು ಹಲವು ಖಾಯಿಲೆಗಳಿಂದ ಪಾರಾಗುತ್ತೀರಿ. ನಿಮ್ಮ ದೇಹದ ತೂಕ ಸರಿಯಾಗಿ ಇರುತ್ತದೆ.

ದಪ್ಪಗಿರುವವರು ನೆಲ್ಲಿಕಾಯಿ ಜ್ಯೂಸ್ ಕುಡಿದು, ತಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ಇದು ದೇಹದಲ್ಲಿರುವ ಕೆಟ್ಟ ಕಾಲೆಸ್ಟ್ರಾಲ್ ಕಡಿಮೆ ಮಾಡಿ, ದೇಹದ ತೂಕ ಕಡಿಮೆ ಮಾಡುತ್ತದೆ. ನಿಮ್ಮ ತ್ವಚೆ ಮತ್ತು ಕೂದಲಿನ ಆರೋಗ್ಯ ಕಾಪಾಡುವಲ್ಲಿಯೂ ಇದು ಸಹಕಾರಿಯಾಗಿದೆ. ಪ್ರತಿದಿನ  ಒಂದು ಕಪ್‌ ನೆಲ್ಲಿಕಾಯಿ ರಸ ಸೇವಿಸಿದ್ದಲ್ಲಿ, ನೀವು ಆರೋಗ್ಯವಾಗಿರುತ್ತೀರಿ.

ಈರುಳ್ಳಿ- ಪುದೀನಾ ಸಲಾಡ್ ರೆಸಿಪಿ..

ಡ್ರೈಫ್ರೂಟ್ಸ್ ಚಿಕ್ಕಿ ರೆಸಿಪಿ..

ಡಿಪ್ರೆಶನ್ ಬರುವಾಗ ಸಿಗುವ ಸೂಚನೆಗಳೇನು..?

- Advertisement -

Latest Posts

Don't Miss