Beauty Tips: ಕೆಲವು ಅಭ್ಯಾಸಗಳು ಕೆಟ್ಟದ್ದಾಗಿರುತ್ತದೆ. ಆದರೆ ಮೊದ ಮೊದಲು ಅದು ಕೆಟ್ಟದ್ದು ಅಂತಾ ಯಾರಿಗೂ ಅನ್ನಿಸುವುದಿಲ್ಲ. ಎಲ್ಲರಿಗೂ ಅದು ಸಾಮಾನ್ಯವಾಗಿ ಕಾಣುತ್ತದೆ. ಕೆಲವರಿಗೆ ಗಲೀಜಾಗಿಯೂ ಕಾಣುತ್ತದೆ. ಆದರೆ ಅದರಿಂದ ತೊಂದರೆಯಾದಾಗಲೇ ಅದು ಎಂಥ ದುರಭ್ಯಾಸ ಅನ್ನೋದು ಗೊತ್ತಾಗುತ್ತದೆ. ಅಂಥ ಅಭ್ಯಾಸಗಳಲ್ಲಿ ಉಗುರು ಕಚ್ಚುವ ಅಭ್ಯಾಸ ಕೂಡ ಒಂದು. ಹಾಗಾದ್ರೆ ಉಗುರು ಕಚ್ಚುವ ಅಭ್ಯಾಸವಿದದ್ದಲ್ಲಿ, ಅದರಿಂದ ಏನೇನು ತೊಂದರೆಯಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಕೆಲವರಿಗೆ ಅನನುವಂಶಿಕವಾಗಿ ಈ ಗುಣ ಬಂದರೆ, ಇನ್ನು ಕೆಲವರು ಟೆನ್ಶನ್‌ನಲ್ಲಿರುವಾಗ, ಹೀಗೆ ಉಗುರು ಕಡಿಯುತ್ತಾರೆ. ಮತ್ತೆ ಕೆಲವರು ಯಾವುದೋ ಯೋಚನೆಯಲ್ಲಿರುವಾಗ ಹೀಗೆ ಮಾಡುತ್ತಾರೆ. ಕೆಲವರಿಗೆ ಅವರು ಉಗುರು ಕಚ್ಚುತ್ತಿದ್ದಾರೆ ಅನ್ನುವ ವಿಷಯವೇ ಗೊತ್ತಿರುವುದಿಲ್ಲ. ಯಾಕಂದ್ರೆ ಅವರು ಯಾವುದೋ ವಿಚಾರದಲ್ಲಿ ಮಗ್ನರಾಗಿರುತ್ತಾರೆ.
ಆದರೆ ಈ ಚಟ ಎಷ್ಟು ಕೆಟ್ಟದ್ದೆಂದರೆ, ಹೀಗೆ ಉಗುರು ಕಡಿಯುವುದರಿಂದ, ಹೊಟ್ಟೆ ನೋವಿನ ಸಮಸ್ಯೆ, ಕರುಳಿನ ಸಮಸ್ಯೆ ಬರುತ್ತದೆ. ಉಗುರಿಗೂ ಸಮಸ್ಯೆಯಾಗುತ್ತದೆ. ಕೈ ತೊಳೆಯದೇ ಊಟ ಮಾಡಿದಾಗ, ಎಂಥೆಂಥ ಆರೋಗ್ಯ ಸಮಸ್ಯೆ ಬರಬಹದೋ, ಆ ಸಮಸ್ಯೆಗಳೆಲ್ಲ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಉಗುರು ಕಚ್ಚುವ ಅಭ್ಯಾಸವಿದ್ದರೆ, ನಿಲ್ಲಿಸಿಬಿಡಿ.
ಇದನ್ನ ತಪ್ಪಿಸುವುದಕ್ಕೆ ನೀವು, ಪ್ರತೀ ವಾರ ಅಥವಾ ಎರಡು ವಾರಕ್ಕೊಮ್ಮೆಯಾದರೂ ಉಗುರು ಕಟ್ ಮಾಡಿ. ಅಂದರೆ ಉಗುರನ್ನು ಹೆಚ್ಚು ಬೆಳೆಯಲು ಬಿಡಬೇಡಿ. ಉಗುರು ಉದ್ದ ಬೆಳೆದಾಗಲೇ ನಿಮಗೆ ಈ ಚಟ ಶುರುವಾಗೋದು. ಹಾಗಾಗಿ ಉಗುರನ್ನು ಬೆಳೆಸಬೇಡಿ.