Political News : ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಟ್ವೀಟ್ ಸಮರ ಕಳೆದ ಎರಡು ದಿನದಿಂದ ಶುರುವಾಗಿದ್ದೂ ಕಾಂಗ್ರೆಸ್ ಸರ್ಕಾರದ ಮೇಲೆ ಜೆಡಿಎಸ್ ನಾಯಕರು ಲಂಚದ ಆರೋಪವನ್ನು ಹೊರಸಿದ್ದಾರೆ.
ಲಂಚ ತೆಗೆದುಕೊಂಡಿರುವುದರ ಕುರಿತು ನಿಮ್ಮಲ್ಲಿ ದಾಖಲೆಗಳಿದ್ದರೆ ತೋರಿಸಿ ಎಂದು ಕೇಳಿದ ಕಾಂಗ್ರೆಸ್ಗೆ ಇಂದು ಬೆಳಿಗ್ಗೆ ಜೆಡಿಎಸ್ ಬಿಗ್ ಶಾಕ್ ನೀಡಿದೆ.ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಜೆಡಿಎಸ್ ಪಕ್ಷದ ನಾಯಕರು ನಿನ್ನೆಯ ಆರೋಪಗಳಿಗೆ ತಿರುಗೇಟು ನೀಡಿತ್ತು. ಈಗ ನಾಲ್ಕು ಅಧಿಕಾರಿಗಳ ವರ್ಗಾವಣೆ ಆದೇಶದ ಪ್ರತಿಯನ್ನು ಬಿಡುಗಡೆಗೊಳಿಸಿರುವ ಜೆಡಿಎಸ್, ಇದು ಪಾರದರ್ಶಕ ಮಾತ್ರ ಅಲ್ಲ, ಅಪಾರದರ್ಶಕ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು. ಏಕೆಂದರೆ, ಈ ವರ್ಗಾವಣೆಗಳು ರಾಜ್ಯದ ಮುಖ್ಯಮಂತ್ರಿಗಳಿಂದ ನಡೆಯುವ ವರ್ಗಾವಣೆ.
ಅದೇನೆಂದರೆ cmo ಅಂದರೆ ಕರಫ್ಷನ್ ಮ್ಯಾನೆಜ್ಮೆಂಟ್ ಆಫೀಸ್ ಎಂದು ಹೇಳಿದರು. ವೈಎಸ್ ಟಿ ಟ್ಯಾಕ್ಸ್ ಕಟ್ಟದಿದ್ದರೆ ವರ್ಗಾವಣೆ ಆದೇಶ ಪತ್ರ ಕಸದ ಬುಟ್ಟಿಯ ಪಾಲಾಗುತ್ತೆ ,ಪತ್ರ ನೀಡಿದವರಿಗೆ ಅನ್ಯಾಯವಾಗುತ್ತಿದೆ ಎಂದರು
ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ..!? ವಿಪಕ್ಷನಾಯಕನ ಸುಳಿವು ನೀಡಿದ ಬಿಎಸ್ ವೈ..!




