Spiritula Story: ಆರೋಗ್ಯವೇ ಭಾಗ್ಯ ಅನ್ನೋ ಮಾತಿದೆ. ಯಾಕಂದ್ರೆ ಆರೋಗ್ಯ ಚೆನ್ನಾಗಿದ್ದರೆ, ನಾವು ನಮಗೆನು ಬೇಕೋ ಅದನ್ನ ಮಾಡಬಹುದು. ಆದರೆ ನಿಮ್ಮ ಬಳಿ ಎಲ್ಲ ಇದ್ದು, ಆರೋಗ್ಯವೇ ಇಲ್ಲದಿದ್ದರೆ, ಆ ಪರಿಸ್ಥತಿ ಯಾರಿಗೂ ಬೇಡ ಎನ್ನಿಸುವಂತಿರುತ್ತದೆ. ಹಾಗಾಗಿ ಆರೋಗ್ಯವನ್ನ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಆರೋಗ್ಯವೂ ಸರಿಯಾಗಿ ಇರಬೇಕು ಅಂದ್ರೆ ಕೆಲ ಗುಣಗಳು ನಿಮ್ಮಲ್ಲಿ ಇರಬಾರದು. ಹಾಗಾದ್ರೆ ಯಾವ ಗುಣವಿದ್ದಲ್ಲಿ, ಆರೋಗ್ಯ ಹಾಳಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಗುಣ, ಹೊಟ್ಟೆಕಿಚ್ಚಿನ ಗುಣ. ಯಾರರಲ್ಲಿ ಹೊಟ್ಟೆಕಿಚ್ಚಿನ ಗುಣವಿರುತ್ತದೆಯೋ, ಅವನ ಆರೋಗ್ಯ ಬಹುಬೇಗ ಹಾಳಾಗುತ್ತದೆ. ಏಕೆಂದರೆ ಅವರು ತಮ್ಮ ಉದ್ಧಾರ ತಾವು ಮಾಡಿಕೊಳ್ಳುವುದನ್ನ ಬಿಟ್ಟು, ಇತರರು ಉದ್ಧಾರವಾಗುವುದನ್ನ ನೋಡಿ ಉರಿದುಕೊಳ್ಳುತ್ತಾರೆ. ಇತರರ ಯಶಸ್ಸು ಕಂಡು ಹೊಟ್ಟೆ ಕಿಚ್ಚು ಪಡುವುದರಲ್ಲಿಯೇ ಜೀವನ ಕಳೆಯುತ್ತಾರೆ. ಇದೇ ಹೊಟ್ಟೆ ಕಿಚ್ಚಿನಿಂದಲೇ ಆರೋಗ್ಯ ಹಾಳಾಗುತ್ತದೆ.
ಎರಡನೇಯ ಗುಣ, ತಡವಾಗಿ ಮಲಗಿ, ತಡವಾಗಿ ಏಳುವ ಗುಣ. ಯಾರು ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಏಳುತ್ತಾರೋ, ಅವರ ಆರೋಗ್ಯ ಉತ್ತಮವಾಗಿರುತ್ತದೆ. ಅವರು ದಿನಪೂರ್ತಿ ಚೈತನ್ಯದಾಯಕವಾಗಿರುತ್ತಾರೆ. ಆದರೆ ಯಾರು ರಾತ್ರಿ ಲೇಟಾಗಿ ಮಲಗಿ, ಲೇಟಾಗಿ ಏಳುತ್ತಾರೋ, ಅವರು ಸೋಂಬೇರಿಗಳಾಗಿರುತ್ತಾರೆ. ಅಂಥವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತ ಹೋಗುತ್ತದೆ. ಇದರಿಂದ ಅವರು ಅನಾರೋಗ್ಯಕ್ಕೀಡಾಗುತ್ತಾರೆ.
ಮೂರನೇಯ ಗುಣ, ಶುಚಿತ್ವ ಇಲ್ಲದಿರುವುದು. ಮನೆಯಲ್ಲಿ, ಮನೆಯ ಸುತ್ತಮುತ್ತ, ಸ್ವಚ್ಛತೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಅದರಲ್ಲೂ ಅಡುಗೆಕೋಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದರಿಂದಲೇ ನಮ್ಮ ಆರೋಗ್ಯ ಸರಿಯಾಗಿ ಇರುತ್ತದೆ. ಯಾರ ಮನೆಯಲ್ಲಿ ಅಡುಗೆ ಕೋಣೆ ಗಬ್ಬು ನಾರುತ್ತದೆಯೋ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ. ಮತ್ತು ಆ ಮನೆಯ ಜನ ಸದಾ ರೋಗಗ್ರಸ್ತರಾಗಿರುತ್ತಾರೆ.
ನಾಲ್ಕನೇಯ ಗುಣ, ಸ್ವಚ್ಛ ಬಟ್ಟೆ ಧರಿಸದಿರುವುದು. ಮನೆಯಲ್ಲಿ, ಮನೆಯ ಅಕ್ಕಪಕ್ಕ ಶುಚಿತ್ವ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ನಾವು ಸ್ವಚ್ಛವಾಗಿರುವುದು ಅಷ್ಟೇ ಮುಖ್ಯ. ಸ್ವಚ್ಛವಾದ ಬಟ್ಟೆ ಹಾಕಿಕೊಳ್ಳುವುದು ಕೂಡಾ ತುಂಬಾ ಮುಖ್ಯ. ಸ್ವಚ್ಛವಾದ ಬಟ್ಟೆ ಧರಿಸುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಗಬ್ಬು ಗಬ್ಬಾದ ಬಟ್ಟೆ ಧರಿಸುವುದರಿಂದ ನಮ್ಮ ಆರೋಗ್ಯ ಹಾಳಾಗುವುದರೊಂದಿಗೆ, ಜನ ನಮ್ಮಿಂದ ದೂರವಾಗುತ್ತಾರೆ. ಲಕ್ಷ್ಮೀ ದೇವಿಯ ಕೃಪೆ ಕೂಡ ಸಿಗುವುದಿಲ್ಲ.
ಐದನೇಯ ಗುಣ, ಆಸೆ ಬುರುಕತನ. ಯಾರು ಹೆಚ್ಚು ಆಸೆ ಮಾಡುತ್ತಾರೋ, ಅವರಿಗೂ ಅನಾರೋಗ್ಯ ಬರುತ್ತದೆ. ಉದಾಹರಣೆಗೆ ತಿನ್ನಲು ಆಸೆ ಮಾಡುವವರು. ಹೊಟ್ಟೆ ತುಂಬಿದ್ದರೂ ಕೂಡ, ಮತ್ತೊಂದಿಷ್ಟು ತಿನ್ನೋಣವೆಂದು ಆಸೆಪಟ್ಟು ತಿಂದರೆ, ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಊಟದ ಆಸೆಯೂ ಕೂಡ ನಿಮ್ಮ ಆರೋಗ್ಯ ಹಾಳು ಮಾಡುತ್ತದೆ.
ಹಿಂದೂಗಳಲ್ಲಿ ಹಸುವಿನ ಜೊತೆ ಶ್ವಾನಕ್ಕೂ ಪ್ರಾಶಸ್ತ್ಯ ನೀಡಲಾಗಿದೆ.. ಯಾಕೆ ಗೊತ್ತಾ..?
ಕುಲದೇವರನ್ನು ಮರೆತರೆ ಏನಾಗುತ್ತದೆ..? ಯಾಕೆ ಪ್ರತೀ ವರ್ಷ ಕುಲದೇವರ ದರ್ಶನ ಮಾಡಬೇಕು..?