ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಹೊಂದಬೇಕು ಎಂದಲ್ಲಿ ಈ ಕೆಲಸ ಮಾಡಿ..

ಇಂದಿನ ಕಾಲದ ಆಹಾರ ಕ್ರಮದಿಂದ ಹಲವು ರೋಗಗಳು ಬರುತ್ತಿದೆ. ಮಸಾಲೆ ಪದಾರ್ಥಗಳು, ಕೂಲ್ ಡ್ರಿಂಕ್ಸ್‌ನಂಥ ಪದಾರ್ಥಗಳ ಸೇವನೆಯಿಂದಲೂ, ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಾವಿಂದು ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಹೊಂದಬೇಕು ಎಂದಲ್ಲಿ ಏನು ಮಾಡಬೇಕು ಎಂದು ಹೇಳಲಿದ್ದೇವೆ.

ಸೋಂಪಿನ ಕಾಳಿನ ನೀರು ಮಲಬದ್ಧತೆ ಸಮಸ್ಯೆಗೆ ಅತ್ಯುತ್ತಮ ಪರಿಹಾರ. ಒಂದು ಸ್ಪೂನ್ ಸೋಂಪಿನ ಕಾಳನ್ನು ಒಂದು ಗ್ಲಾಸ್ ನೀರಿನೊಂದಿಗೆ ಚೆನ್ನಾಗಿ ಕುದಿಸಿ. ಒಂದು ಲೋಟ ಇದ್ದ ನೀರು, ಕುದಿ ಬರುವ ಮೂಲಕ ಅರ್ಧ ಲೋಟಕ್ಕೆ ಬರಬೇಕು. ಆ ರೀತಿ ಕಶಾಯ ತಯಾರಿಸಿ, ಇದು ಬೆಚ್ಚಗಾದ ಬಳಿಕ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹೀಗೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಪ್ರತಿದಿನ ಮಧ್ಯಾಹ್ನ ಊಟವಾದ ಬಳಿಕ ಬಾಳೆಹಣ್ಣಿನ ಸೇವನೆ ಮಾಡಿ. ಇದು ಜೀರ್ಣಕ್ರಿಯೆಯನ್ನು ಸರಿಯಾಗಿ ಮಾಡಿ, ಮಲವಿಸರ್ಜನೆಗೆ ಸಹಾಯ ಮಾಡುತ್ತದೆ. ಬೇಲದ ಹಣ್ಣಿನ ಜ್ಯೂಸ್ ಸೇವನೆ ಕೂಡ, ಮಲಬದ್ಧತೆ ಸಮಸ್ಯಗೆ ಪರಿಹಾರ ಸಿಗುತ್ತದೆ. ಆಯುರ್ವೆದದಲ್ಲಿ ಸಿಗುವ ಕೆಲ ಚೂರ್ಣಗಳು ಕೂಡ ಮಲಬದ್ಧತೆ ಸಮಸ್ಯೆಗಳಿಂದ ಮುಕ್ತಿ ಕೊಡುತ್ತದೆ. ರಾತ್ರಿ ಮಲಗುವಾಗ ಓಮದ ಪುಡಿಯೊಂದಿಗೆ ಉಗುರು ಬೆಚ್ಚಗಿನ ನೀರನ್ನು ಸೇವಿಸುವುದರಿಂದಲೂ, ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಎಲ್ಲಕ್ಕಿಂತ ಮುಖ್ಯವಾಗಿ, ಮಲಬದ್ಧತೆ ಸಮಸ್ಯೆಯಾದಾಗ ಚೆನ್ನಾಗಿ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಕಲ್ಲಂಗಡಿ ಹಣ್ಣು, ಬಾಳೆಹಣ್ಣು, ಕಿತ್ತಳೆ ಹಣ್ಣು, ಪಪ್ಪಾಯಿ ಹಣ್ಣಿನ ಸೇವನೆ ಮಾಡಿ. ಬೇಯಿಸಿದ, ಹೆಚ್ಚು ಉಪ್ಪು- ಖಾರ ಹಾಕದ ಸ್ವೀಟ್‌ ಕಾರ್ನ್ ಸೇವಿಸಿ. ಹಲಸಿನ ಹಣ್ಣಿನ ಸೀಸನ್ ಇದ್ದಲ್ಲಿ, ಮಿತವಾಗಿ ಹಲಸಿನ ಹಣ್ಣು, ಮಾವಿನ ಹಣ್ಣನ್ನು ಸೇವಿಸಿ. ಮಸಾಲೆ ಪದಾರ್ಥ, ಕೂಲ್ ಡ್ರಿಂಕ್ಸ್, ಬೇಕರಿ ತಿಂಡಿ ಸೇವನೆ ನಿಲ್ಲಿಸಿಬಿಡಿ. ಹೀಗೆ ಮಾಡಿದ್ದಲ್ಲಿ, ಮಲಬದ್ಧತೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ನಾವಿಲ್ಲಿ ಹೇಳಿದ ಟಿಪ್ಸ್‌ಗಳಲ್ಲಿ ಯಾವುದಾದರೂ ಒಂದು ಟಿಪ್ಸನ್ನ ಒಂದು ಬಾರಿ ಬಳಸಿ. ಇವೆಲ್ಲ ಮಾಡಿಯೂ ಮಲಬದ್ಧತೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ, ತಡಮಾಡದೇ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ.

ಹಸುವಿನ ಶುದ್ಧ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

ಬಾಳೆಹಣ್ಣಿನ ಸಿಪ್ಪೆ ಬಳಸಿ ಕಣ್ಣಿನ ಸುತ್ತಲಾಗುವ ಕಪ್ಪು ಕಲೆ ಓಡಿಸಿ..

ಶೂಸ್ ಬಳಕೆಯಿಂದ ಪಾದದಲ್ಲಿ ಬರುವ ದುರ್ನಾತವನ್ನು ಹೀಗೆ ತಡೆಯಿರಿ..

About The Author