Thursday, December 4, 2025

Latest Posts

ಮುಟ್ಟಿನ ಹೊಟ್ಟೆನೋವು ಗುಣವಾಗಲು ಇದನ್ನು ಸೇವಿಸಿ..

- Advertisement -

ಋತುಚಕ್ರವಾದಾಗ, ಹೆಣ್ಣು ಎಂಥ ನೋವು ಅನುಭವಿಸುತ್ತಾಳೆಂದು ಅವಳಿಗೆ ಮಾತ್ರ ಗೊತ್ತಿರುತ್ತದೆ. ಕೆಲವು ಹೆಣ್ಣು ಮಕ್ಕಳಿಗೆ ಕೆಲವು ರೀತಿಯ ನೋವುಗಳಿರುತ್ತದೆ. ಕೆಲವರಿಗೆ ಹೊಟ್ಟೆ ನೋವಾದರೂ, ಇನ್ನು ಕೆಲವರಿಗೆ ಕಾಲು ನೋವು. ಮತ್ತೆ ಕೆಲವರಿಗೆ ಬೆನ್ನು ನೋವು, ಸೊಂಟ ನೋವು. ಹೀಗೆ ಹಲವು ರೀತಿಯ ನೋವು ಅನುಭವಿಸಬೇಕಾಗುತ್ತದೆ. ನೋಡುವವರಿಗೆ ಅದು ಸಾಮಾನ್ಯ ನೋವು ಎನ್ನಿಸಿದರೂ, ಅದೆಂಥ ಜೀವ ಹಿಂಡುವ ನೋವು ಎಂದು ಅವರಿಗಷ್ಟೇ ಗೊತ್ತಿರುತ್ತದೆ. ಹಾಗಾಗಿ ನಾವಿಂದು ಮುಟ್ಟಿನ ಹೊಟ್ಟೆನೋವನ್ನು ಶಮನ ಮಾಡಲು ಏನು ಸೇವಿಸಬೇಕು ಅಂತಾ ತಿಳಿಸಲಿದ್ದೇವೆ.

ಮುಟ್ಟಿನ ಹೊಟ್ಟೆ ನೋವು ಶಮನವಾಗಲು, ಸಣ್ಣ ತುಂಡು ಬೆಲ್ಲ, ಅಥವಾ ಒಂದು ಸ್ಪೂನ್ ಸೋಂಪು ಸೇವಿಸಬೇಕು. ಪ್ರತಿದಿನ ಮಧ್ಯಾಹ್ನ ಊಟವಾದ ಬಳಿಕ ಸಣ್ಣ ತುಂಡು ಬೆಲ್ಲ ಸೇವಿಸಿ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಕಡಿಮೆಯಾಗುತ್ತದೆ. ಮುಟ್ಟಿನ ಹೊಟ್ಟೆನೋವು ಕ್ರಮೇಣವಾಗಿ ಕಡಿಮೆಯಾಗುತ್ತದೆ.  ಇನ್ನು ಸೋಂಪು ಕೂಡ ಮುಟ್ಟಿನ ಹೊಟ್ಟೆನೋವು ಕಡಿಮೆ ಮಾಡಲು ಸಹಾಯಕವಾಗಿದೆ. ನೀವು ಪ್ರತಿ ದಿನ ಕೊಂಚ ಕೊಂಚ ಸೋಂಪು ಅಥವಾ ಸೋಂಪಿನ ಕಶಾಯ ಮಾಡಿ ಪ್ರತಿದಿನ ಸೇವಿಸಿದ್ದಲ್ಲಿ, ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತೀರಿ. ಜೊತೆಗೆ ಮುಟ್ಟಿನ ಹೊಟ್ಟೆನೋವಿನ ಸಮಸ್ಯೆ ಕೂಡ ಕಂಟ್ರೋಲಿಗೆ ಬರುತ್ತದೆ.

ನಿಮಗೆ ಪ್ರತಿದಿನ ಸೋಂಪಿನ ಕಶಾಯ ಮಾಡಿ ಸೇವಿಸಲಾಗದಿದ್ದಲ್ಲಿ, ನೀವು ಮುಟ್ಟಾದ ದಿನ ಹೊಟ್ಟೆನೋವು ಶುರುವಾಗುವ ಮುನ್ನ, ಸೋಂಪಿನ ಕಶಾಯ ಮಾಡಿ, ಬಿಸಿ ಬಿಸಿ ಕಶಾಯವನ್ನ ಕುಡಿಯಿರಿ. ಮಧ್ಯೆ ಮಧ್ಯೆ ಮೂರ್ನಾಲ್ಕು ಬಾರಿ ಬಿಸಿ ಬಿಸಿ ಸೋಂಪಿನ ಕಶಾಯ ಸೇವಿಸುತ್ತೀರಿ. ಇದರಿಂದಲೂ ಮುಟ್ಟಿನ ಹೊಟ್ಟೆನೋವು ಕಂಟ್ರೋಲಿಗೆ ಬರುತ್ತದೆ. ಇದರೊಂದಿಗೆ ಒಂದು ಚಿಕ್ಕ ತುಂಡು ಬೆಲ್ಲವನ್ನು ಸೇವಿಸಿ.

ಇಷ್ಟೇ ಅಲ್ಲದೇ, ಮುಟ್ಟಿನ ಸಮಯ ಹತ್ತಿರ ಬಂದಾಗ, ಮಸಾಲೆ ಪದಾರ್ಥ, ಖಾರಾ ಪದಾರ್ಥ, ಕೋಲ್ಡ್ ಡ್ರಿಂಕ್ಸ್ ಸೇವಿಸುವುದನ್ನು ನಿಲ್ಲಿಸಿ. ಅದರ ಬದಲು, ಬಾಳೆಹಣ್ಣು, ನಿಂಬೆ ಪಾನಕ, ಹಾಲು, ಮೊಸರು, ತುಪ್ಪ, ಮಜ್ಜಿಗೆ, ಎಳನೀರು ಸೇವಿಸಿ. ಇದು ದೇಹಕ್ಕೆ ತಂಪು ನೀಡುವುದರ ಜೊತೆಗೆ, ಹೊಟ್ಟೆನೋವಿನ ಸಮಸ್ಯೆಯನ್ನ ಕೂಡ ದೂರ ಮಾಡುತ್ತದೆ.

ಹಸುವಿನ ಶುದ್ಧ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

ಬಾಳೆಹಣ್ಣಿನ ಸಿಪ್ಪೆ ಬಳಸಿ ಕಣ್ಣಿನ ಸುತ್ತಲಾಗುವ ಕಪ್ಪು ಕಲೆ ಓಡಿಸಿ..

ಶೂಸ್ ಬಳಕೆಯಿಂದ ಪಾದದಲ್ಲಿ ಬರುವ ದುರ್ನಾತವನ್ನು ಹೀಗೆ ತಡೆಯಿರಿ..

- Advertisement -

Latest Posts

Don't Miss