Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಕತ್ತೆಯ ಕಥೆಯೊಂದನ್ನ ಹೇಳಿದ್ದೆವು. ಇದೀಗ ಕತ್ತೆಯಿಂದ ನಾವು ಕಲಿತುಕೊಳ್ಳಬೇಕಾದ 3 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯದ್ದು ನಾವು ಸೋಮಾರಿಯಾಗಬಾರದು. ಈ ಮೊದಲು ಹೇಳಿದ ಕಥೆಯ ಪ್ರಕಾರ, ಸರ್ಪ ಮತ್ತು ಆಮೆ ಆಲಸ್ಯದಿಂದ ಮೈಮರೆತು, ಮೂರ್ಖತನ ಮಾಡಿತು. ಆದರೆ ಕತ್ತೆ ಹಾಗೆ ಮಾಡಲಿಲ್ಲ. ಅದು ಸತತವಾಗಿ ಓಡಿ ಕಾಡಿನಿಂದ ತಪ್ಪಿಸಿಕೊಂಡಿತು. ಇಷ್ಟೇ ಅಲ್ಲದೇ, ಕತ್ತೆಯ ಮೇಲೆ ಜನ ಭಾರದ ವಸ್ತುವನ್ನಿಟ್ಟು ಸಾಗಿಸುತ್ತಾರೆ. ಅದೆಷ್ಟೇ ಭಾರವನ್ನು ಹೊತ್ತುಕೊಂಡರೂ, ಕತ್ತೆ ಆಲಸ್ಯ ಮಾಡದೇ, ನಡೆದುಕೊಂಡು ಹೋಗುತ್ತದೆ. ಅದೇ ರೀತಿ ಮನುಷ್ಯ ಆಲಸ್ಯವೆಂಬ ಶತ್ರುವನ್ನು ತೊಲಗಿಸಬೇಕು.
ಎರಡನೇಯದ್ದು ಎಲ್ಲ ವಾತಾವರಣಕ್ಕೂ ಒಗ್ಗೂಡುವುದು. ಕತ್ತೆಗೆ ಮಳೆಗಾಲ, ಚಳಿಗಾಲ, ಬೇಸಿಗೆಗಾಲ ಎಲ್ಲವೂ ಒಂದೇ. ಅದು ಯಾವ ಕಾಲವಿದ್ದರೂ, ಆ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುತ್ತದೆ. ಅದೇ ರೀತಿ ಮನುಷ್ಯ, ಎಲ್ಲ ಸಮಯದಲ್ಲೂ ಧೈರ್ಯ ತಂದುಕೊಂಡು ಬದುಕುವುದನ್ನು ಕಲಿಯಬೇಕು. ಅದಕ್ಕಾಗಿಯೇ ಹಿರಿಯರು ಬಡತನ ಬದುಕುವ ಪಾಠ ಕಲಿಸುತ್ತದೆ ಎಂದು ಹೇಳಿದ್ದಾರೆ. ನೀವು ನಿಮ್ಮ ಮಕ್ಕಳಿಗೆ ಬರೀ ಶ್ರೀಮಂತಿಕೆಯಲ್ಲೇ ಬೆಳೆಸಿದರೆ, ಮಕ್ಕಳಿಗೆ ಬಡತನದ ಬೆಲೆ ಗೊತ್ತಾಗುವುದಿಲ್ಲ. ಅಪ್ಪಿ ತಪ್ಪಿ ದುರಾದೃಷ್ಟವಶಾತ್ ಆ ಮಗುವಿಗೆ ಬಡತನ ಬಂದಾಗ, ಅವನು ಕಂಗಾಲಾಗುತ್ತದೆ ಹೊರತು. ಬಡತನದಲ್ಲೇ ಬದುಕುವುದನ್ನು ಕಲಿಯುವುದಿಲ್ಲ. ಹಾಗಾಗಿ ಬಡತನ ಹೇಗಿರುತ್ತದೆ ಅನ್ನುವುದನ್ನು ಕೂಡ ದುಡ್ಡಿನ ಬೆಲೆ ತಿಳಿಸುವ ಮೂಲಕ ಹೇಳಿಕೊಡಿ.
ಮೂರನೇಯದ್ದು ಕೊಟ್ಟಿದ್ದನ್ನು ತಿನ್ನುತ್ತದೆ ಕತ್ತೆ. ಕತ್ತೆಯ ಹಾಗೆ ದುಡಿಯಲು ಯಾರಿಂದಲೂ ಸಾಧ್ಯವಿಲ್ಲ. ಕತ್ತೆ ತನಗೆ ಒಳ್ಳೆಯ ಆಹಾರ, ಹೆಚ್ಚು ಆಹಾರ ಕೊಟ್ಟಿಲ್ಲವೆಂದು ಎಂದಿಗೂ ತನ್ನ ಮಾಲೀಕನ ಬಳಿ ಜಗಳವಾಡುವುದಿಲ್ಲ. ಬದಲಾಗಿ ಕೊಟ್ಟಿದ್ದನ್ನು, ಕೊಟ್ಟಷ್ಟು ತಿನ್ನುತ್ತದೆ. ಅದೇ ರೀತಿ ಮನುಷ್ಯ, ತನ್ನ ಬಳಿ ಇ್ದದುದರಲ್ಲೇ ಸಂತೋಷಪಡಬೇಕು. ಅತೀ ಆಸೆ ಮಾಡಬಾರದು. ಅಥವಾ ತನಗೆ ಇನ್ನೂ ಹೆಚ್ಚು ಬೇಕು ಎಂದು ಯಾರಲ್ಲಿಯೂ ಜಗಳ ಮಾಡಬಾರದು. ಆಗಲೇ ಅವನು ಉದ್ಧಾರವಾಗಲು ಸಾಧ್ಯ. ಇದನ್ನ ಹಿರಿಯರು ಚಾಪೆ ಇದ್ದಷ್ಟು ಕಾಲು ಚಾಚು ಎನ್ನು ಗಾದೆಯ ಮೂಲಕ ವಿವರಿಸಿದ್ದಾರೆ.
ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-2
ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-1