Saturday, November 23, 2024

Latest Posts

ಕಾಳು ಮೆಣಸಿನಿಂದ ಎಷ್ಟೆಲ್ಲಾ ಆರೋಗ್ಯ ಸಮಸ್ಯೆ ಬಗೆಹರಿಸಬಹುದು ಗೊತ್ತಾ..?

- Advertisement -

Health Tips: ಕಾಳು ಮೆಣಸು ಆರೋಗ್ಯಕರ ಮಸಾಲೆ ಪದಾರ್ಥಗಳಲ್ಲಿ ಒಂದು. ನಿಮಗೆ ಖಾರವೂ ಹೆಚ್ಚಿರಬೇಕು ಮತ್ತು ಆರೋಗ್ಯವೂ ಸರಿಯಾಗಿರಬೇಕು ಅಂದ್ರೆ ನೀವು ಕಾಳುಮೆಣಸನ್ನು ನಿಮ್ಮ ಅಡುಗೆಯಲ್ಲಿ ಪ್ರತಿದಿನ, ಕೊಂಚವಾದ್ರೂ ಬಳಸಬೇಕು. ಇಂದು ನಾವು ಕಾಳು ಮೆಣಸನ್ನ ಬಳಸುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..

ನೀವು ಸಾಂಬಾರ್ ಮಾಡುವಾಗ ನಾಲ್ಕು ಕಾಳು ಕಾಳುಮೆಣಸನ್ನು ಕುಟ್ಟಿ ಪುಡಿ ಮಾಡಿ ಸೇರಿಸಿ. ಪ್ರತಿದಿನ ಹೀಗೆ ಮಾಡಿ ಸಾಂಬಾರ್ ರೆಡಿ ಮಾಡಿ, ಸೇವಿಸಿದರೆ, ನಿಮಗೆ ಕ್ಯಾನ್ಸರ್‌ನ ಭಯವಿರುವುದಿಲ್ಲ. ಆದ್ದರಿಂದಲೇ ಕಾಳು ಮೆಣಸಿನ ರಸಂ ಮಾಡಿ ಸೇವಿಸುತ್ತಾರೆ. ಕಾಳು ಮೆಣಸಿನಲ್ಲಿ ಕ್ಯಾನ್ಸರ್ ತಡೆಗಟ್ಟುವ ಶಕ್ತಿ ಇದೆ. ಈ ಕಾರಣಕ್ಕೆ ಹಲವು ಕ್ಯಾನ್ಸರ್ ಪೇಶಂಟ್‌ಗಳಿಗೆ ಕಾಳು ಮೆಣಸಿನ ರಸಂ ಮಾಡಿಕೊಡಲಾಗುತ್ತದೆ.

ಇನ್ನು ಕೆಮ್ಮಿನ ಸಮಸ್ಯೆ ಇರುವವರಿಗೆ ಕಾಳು ಮೆಣಸಿನ ಪುಡಿಯ ಜೊತೆ, ಜೇನುತುಪ್ಪ ಸೇರಿಸಿ, ಸೇವಿಸಲು ಕೊಡಲಾಗುತ್ತದೆ. ಇದರಿಂದ ಕೆಮ್ಮು ಕಡಿಮೆಯಾಗುವುದಲ್ಲದೇ, ಗಂಟಲ ಬೇನೆ ನಿವಾರಣೆಯಾಗುತ್ತದೆ. ಕಾಳುಮೆಣಸಿನ ಎಣ್ಣೆ ಮಾಡಿಟ್ಟುಕೊಂಡು, ನಿದ್ರಾಹೀನತೆ ಇರುವವರ ಪಾದಕ್ಕೆ ಹಚ್ಚಿದರೆ, ಅವರಿಗೆ ಉತ್ತಮ ನಿದ್ದೆ ಬರುತ್ತದೆ.

ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲವೆಂದಲ್ಲಿ, ಅವರಿಗೆ ಕಾಳು ಮೆಣಸಿನ ರಸಂ ಮಾಡಿ ಊಟ ಮಾಡಿಸಿ. ಇದರಿಂದ ಹಸಿವು ಹೆಚ್ಚಾಗುತ್ತದೆ. ಆಗ ನೀವು ಅವರಿಗೆ ಆರೋಗ್ಯಕರ ತಿಂಡಿ ತಿನ್ನಲು ನೀಡಬಹುದು. ಆದರೆ ನೀವು ಮಾಡುವ ರಸಂ ರುಚಿಯಾಗಿರಲಿ. ಮಕ್ಕಳಿಗೆ ರುಚಿ ಎನ್ನಿಸದಿದ್ದರೆ, ಅವರು ಇನ್ನೆಂದು ಅದನ್ನು ಮುಟ್ಟುವುದೂ ಇಲ್ಲ. ಹಾಗಾಗಿ ರಸಂ ರುಚಿ ರುಚಿಯಾಗಿರಲಿ. ಜೊತೆಗೆ ಹಸುವಿನ ಶುದ್ಧ ತುಪ್ಪವೂ ಸೇರಿಸಿ ಕೊಡಿ.

ಕಾಳುಮೆಣಸರು ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದರೂ ಕೂಡ, ಕೆಲವರಿಗೆ ಇದು ಅಷ್ಟು ಒಳ್ಳೆಯದಲ್ಲ. ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದವರು, ಮಸಾಲೆ ಪದಾರ್ಥ ತಿಂದರೆ, ಅಲರ್ಜಿಯಾಗುತ್ತದೆ ಎನ್ನುವವರು, ಮೈಮೇಲೆ ಪದೇ ಪದೇ ಗುಳ್ಳೆಗಳಾಗುತ್ತಿದ್ದರೆ, ಮೂಲವ್ಯಾಧಿ ಸಮಸ್ಯೆ ಎದುರಿಸುತ್ತಿದ್ದರೆ, ಅಂಥವರು ಕಾಳುಮೆಣಸಿನ ಸೇವನೆ ಮಾಡಬಾರದು.

ನಿಮ್ಮ ಬಾಯಲ್ಲಿರುವ ಲಾಲಾರಸ ಹಲವು ರೋಗಗಳಿಗೆ ಮದ್ದು..

ಸಕ್ಕರೆಗಿಂತ, ಕಲ್ಲುಸಕ್ಕರೆಯ ಬಳಕೆ ಅತ್ಯುತ್ತಮ.. ಹೇಗೆ..?

ಪೆಪ್ಪರ್ ಪನೀರ್ ರೆಸಿಪಿ..

- Advertisement -

Latest Posts

Don't Miss