ಈರುಳ್ಳಿ ಬಳಸಿ ಶೀತವನ್ನು ದೂರ ಮಾಡಿ..

Health Tips: ಯಾವುದೇ ಚಾಟ್ಸ್ ತಯಾರಿಸಲು ಮುಖ್ಯವಾಗಿ ಬೇಕಾಗಿರುವುದು ಈರುಳ್ಳಿ. ಈರುಳ್ಳಿ ಹಾಕದೇ, ಚಾಟ್ಸ್ ರೆಡಿ ಮಾಡಿದ್ರೂ, ಅದರ ಮೇಲೆ ಈರುಳ್ಳಿ ಹಾಕಿ ಗಾರ್ನಿಶ್ ಮಾಡಿ ಕೊಡುತ್ತಾರೆ. ಯಾಕಂದ್ರೆ ಈರುಳ್ಳಿ ಚಾಟ್ಸ್ ಟೇಸ್ಟ್ ಹೆಚ್ಚಿಸುತ್ತೆ. ಇದೇ ರೀತಿ ಈರುಳ್ಳಿ ಆರೋಗ್ಯಕ್ಕೂ ತುಂಬಾ ಉತ್ತಮ. ನಾವಿಂದು ಶೀತಕ ಕಡಿಮೆ ಮಾಡಲು ಯಾವ ರೀತಿ ಈರುಳ್ಳಿ ಸೇವನೆ ಮಾಡಬೇಕು ಅಂತಾ ಹೇಳಲಿದ್ದೇವೆ.

ಊಟ ಮಾಡುವಾಗ ಹಸಿ ಈರುಳ್ಳಿ ಸೇವಿಸಿ. ಅಥವಾ ಚಪಾತಿ, ರೊಟ್ಟಿ ತಿನ್ನುವಾಗ, ಹಸಿ ಈರುಳ್ಳಿ ಜೊತೆ ಕೊಂಚ ಬೆಲ್ಲ ಸೇವಿಸಿದರೆ, ಶೀತ ಕಡಿಮೆಯಾಗುತ್ತದೆ. ನೀವು ಈರುಳ್ಳಿ ರಸ ತೆಗೆದು ಕುಡಿಯಬಹುದು. ಆದರೆ ಅದು ಸೇವಿಸುವುದು ಅಷ್ಟು ಸುಲಭವಲ್ಲ. ಹಾಗಾಗಿ ಈರುಳ್ಳಿಯನ್ನೇ ನೀವು ಊಟದೊಂದಿಗೆ ಸೇವಿಸಿದರೆ, ರುಚಿಯಾಗಿಯೂ ಇರುತ್ತದೆ. ಆರೋಗ್ಯಕ್ಕೂ ಉತ್ತಮ.

ಈರುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. ಹಾಗಾಗಿ ಶೀತವಾದಾಗ ಈರುಳ್ಳಿ ತಿನ್ನಬೇಕು ಅಂತಾ ಹೇಳುತ್ತಾರೆ. ಇಷ್ಟೇ ಅಲ್ಲದೇ, ನೀವು ಪ್ರತಿದಿನ ಈರುಳ್ಳಿ ಸೇವನೆ ಮಾಡಿದರೆ, ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಉತ್ತರಕರ್ನಾಟಕದ ಜನ ಪ್ರತಿದಿನ ರೊಟ್ಟಿಯೊಂದಿಗೆ, ಈರುಳ್ಳಿ ಸೇರಿ, ಹಸಿ ತರಕಾರಿ ಸೊಪ್ಪಿನ ಸೇವನೆ ಮಾಡುತ್ತಾರೆ. ಹಾಗಾಗಿಯೇ ಅವರು ವಯಸ್ಸಾದರೂ ಗಟ್ಟಿಮುಟ್ಟಾಗಿರುತ್ತಾರೆ.

ಈರುಳ್ಳಿ ಸೇವನೆಯಿಂದ ನಿಮ್ಮ ದೃಷ್ಟಿ ಆರೋಗ್ಯವಾಗಿರುತ್ತದೆ. ವಯಸ್ಸಾದರೂ ನಿಮಗೆ ಸರಿಯಾಗಿ ಕಣ್ಣು ಕಾಣಿಸಬೇಕು ಎಂದರೆ, ನೀವು ಈರುಳ್ಳಿ ಮತ್ತು ಕ್ಯಾರೆಟ್ ಸೇವನೆ ಮಾಡಬೇಕು. ಅಲ್ಲದೇ, ಬಿಪಿ- ಶುಗರ್ ಇದ್ದವರು ಈರುಳ್ಳಿ ಸೇವನೆ ಮಾಡಿದರೆ, ರೋಗ ಕಂಟ್ರೋಲಿನಲ್ಲಿರುತ್ತದೆ. ಹೃದಯದದ ಆರೋಗ್ಯ, ಜೀರ್ಣಕ್ರಿಯೆ ಎಲ್ಲವನ್ನೂ ಉತ್ತಮಗೊಳಿಸಲು ಈರುಳ್ಳಿ ಸೇವನೆ ಮಾಡಬೇಕು.

ಇನ್ನು ಪುರುಷರು ಈರುಳ್ಳಿ ಸೇವನೆ ಮಾಡುವುದರಿಂದ, ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ. ಈರುಳ್ಳಿ ರಸವನ್ನು ನೀವು ತಲೆಗೂದಲಿಗೆ ಹಚ್ಚುವುದರಿಂದ ಒಂದು ತಿಂಗಳಲ್ಲೇ, ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇನ್ನು ನಿಮಗೆ ಈರುಳ್ಳಿ ಸೇವಿಸಿದರೆ, ಅಲರ್ಜಿಯಾಗುತ್ತದೆ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ಬಳಿಕ ಈರುಳ್ಳಿ ಸೇವನೆ ಮಾಡಿ.

ನಿಮ್ಮ ಬಾಯಲ್ಲಿರುವ ಲಾಲಾರಸ ಹಲವು ರೋಗಗಳಿಗೆ ಮದ್ದು..

ಸಕ್ಕರೆಗಿಂತ, ಕಲ್ಲುಸಕ್ಕರೆಯ ಬಳಕೆ ಅತ್ಯುತ್ತಮ.. ಹೇಗೆ..?

ಪೆಪ್ಪರ್ ಪನೀರ್ ರೆಸಿಪಿ..

About The Author