Tuesday, December 24, 2024

Latest Posts

ವಿವಾಹದ ಬಳಿಕ ಪತಿ ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸಲು ಕಾರಣವೇನು..?

- Advertisement -

Spiritual: ಹಿಂದೂಗಳಲ್ಲಿ ವಿವಾಹವಾದ ಬಳಿಕ, ಪತಿ-ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸುತ್ತಾನೆ. ಪತ್ನಿಗೆ ಆ ನಕ್ಷತ್ರ ಕಾಣದಿದ್ದರೂ ಕೂಡ, ಆ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇತ್ತೀಚೆಗೆ ಅದು ಫ್ಯಾಶನ್ ಬೇರೆ ಆಗಿದೆ. ಪತಿ- ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸುವುದು ಮತ್ತು ಆಕೆ ಕೂಲಿಂಗ್‌ ಗ್ಲಾಸ್ ಹಾಕಿ, ನಕ್ಷತ್ರ ನೋಡುವಂತೆ ಪೋಸ್ ಕೊಟ್ಟು ಫೋಟೋ ತೆಗೆಸಿಕೊಳ್ಳುತ್ತಾಳೆ. ಆದರೆ ಈ ಪದ್ಧತಿಯ ಹಿಂದೆ ಒಂದು ಉದ್ದೇಶವಿದೆ. ಹಾಗಾದ್ರೆ ಪತಿ-ಪತ್ನಿಗೆ ವಿವಾಹದ ಬಳಿಕ ಏಕೆ ಅರುಂಧತಿ ನಕ್ಷತ್ರ ತೋರಿಸುತ್ತಾನೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ವಸಿಷ್ಠರ ಪತ್ನಿಯೇ ಅರುಂಧತಿ. ಅರುಂಧತಿ ಎಂಥ ಪತಿವೃತಾ ಶಿರೋಮಣಿ ಎಂದರೆ, ಕನಸಲ್ಲೂ ಪರಪುರುಷನ ಜೊತೆ ಇದ್ದವಳಲ್ಲ. ಅಂಥ ಪತಿವೃತೆ. ಆದರೆ ಅಗ್ನಿದೇವರಿಗೆ ಸಪ್ತರ್ಷಿಗಳ ಪತ್ನಿಯರೊಡನೆ, ಕಾಮಕ್ರೀಡೆಯಲ್ಲಿ ತೊಡಗುವ ಮನಸ್ಸಾಗುತ್ತದೆ. ಆಗ ಅಗ್ನಿಯ ಪತ್ನಿ ಸ್ವಾಹಾ, ಎಲ್ಲ ಸಪ್ತರ್ಷಿಗಳ ಪತ್ನಿಯರ ದೇಹ ಸೇರಿ, ಅಗ್ನಿ ದೇವನಿಗೆ ಸಮರ್ಪಿಸಬೇಕು ಎಂದುಕೊಳ್ಳುತ್ತಾಳೆ.

ಆದರೆ ಆಕೆಗೆ ಅರುಂಧತಿಯ ದೇಹ ಸೇರಲು ಸಾಧ್ಯವಾಗುವುದೇ ಇಲ್ಲ. ಈ ಮೂಲಕ ಅರುಂಧತಿ ಎಂಥ ಪತಿವೃತೆ ಎನ್ನುವುದು ಗೊತ್ತಾಗುತ್ತದೆ. ಆಕೆ ನಕ್ಷತ್ರವಾಗಿ ನಭೋಮಂಡಲದಲ್ಲಿ ಮಿನುಗುತ್ತಾಳೆ. ಹಾಗಾಗಿ ಅರುಂಧತಿ ಹೇಗೆ ಪ್ರೀತಿ, ಕಾಳಜಿ, ಗೌರವದಿಂದ ಪತಿಯನ್ನ ಆರಾಧಿಸುತ್ತಿದ್ದಳೋ, ಅದೇ ರೀತಿ ಪ್ರತೀ ವಿವಾಹಿತೆಯೂ ತನ್ನ ಪತಿಯ ಮೇಲೆ ಪ್ರೀತಿ, ಗೌರವದಿಂದಿರಲಿ. ಪತಿವೃತೆಯಾಗಿರಲಿ ಎಂಬ ಕಾರಣಕ್ಕೆ, ಪತಿ ಪತ್ನಿಗೆ ಅರುಂಧತಿ ನಕ್ಷತ್ರವನ್ನು ತೋರಿಸಬೇಕು ಅನ್ನೋ ಪದ್ಧತಿ ಇದೆ.

ವಿಶೇಷ ಎಂದರೆ, ನಭೋಮಂಡಲದಲ್ಲಿ ವಸಿಷ್ಠ ನಕ್ಷತ್ರದ ಪಕ್ಕದಲ್ಲೇ, ಅರುಂಧತಿ ನಕ್ಷತ್ರವಿದೆ. ಆ ಅರುಂಧತಿ-ವಸಿಷ್ಠರಂತೆ ಎಲ್ಲ ವಿವಾಹಿತರು ಕೊನೆಯವರೆಗೂ ನೆಮ್ಮದಿ, ಪ್ರೀತಿ, ಕಾಳಜಿಯಿಂದ ಬಾಳ್ವೆ ಮಾಡಲಿ ಎಂಬುದು ಈ ಪದ್ಧತಿಯ ಉದ್ದೇಶವಾಗಿದೆ.

ಭಾರತದ 10 ಶ್ರೀಮಂತ ದೇವಸ್ಥಾನಗಳು – ಭಾಗ 2

ಭಾರತದ 10 ಪ್ರಸಿದ್ಧ ದೇವಿ ದೇವಸ್ಥಾನಗಳು- ಭಾಗ 2

ಭಾರತದ 10 ಪ್ರಸಿದ್ಧ ದೇವಿ ದೇವಸ್ಥಾನಗಳು- ಭಾಗ1

- Advertisement -

Latest Posts

Don't Miss