Monday, December 23, 2024

Latest Posts

ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನದ ಹಿನ್ನೆಲೆ ಏನು..?

- Advertisement -

Spiritual: ಭಾರತದ ಪ್ರಸಿದ್ಧ ಲಕ್ಷ್ಮೀ ದೇವಸ್ಥಾನವೆಂದರೆ, ಅದು ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನ. ಈ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರೆ, ನಮ್ಮ ಆರ್ಥಿಕ ಸಮಸ್ಯೆಗಳೆಲ್ಲವೂ ಕಳೆದು ಹೋಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಈ ದೇವಸ್ಥಾನದ ಇತಿಹಾಸವೇನು ಅಂತಾ ತಿಳಿಯೋಣ ಬನ್ನಿ..

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಈ ಲಕ್ಷ್ಮೀ ದೇವಸ್ಥಾನವಿದೆ. 51 ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕೆಲವು ಕಂಬಗಳಿದೆ. ಈ ಕಂಬಗಳನ್ನು ಎಣಿಸಲು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಇಲ್ಲಿ ಸ್ವತಃ ಲಕ್ಷ್ಮೀ ದೇವಿ ನೆಲೆಸಿದ್ದಾಳೆಂಬ ನಂಬಿಕೆ ಇದ್ದು, ಇಲ್ಲಿ ವಾಸಿಸುವ ಜನರಿಗೆ ಆರ್ಥಿಕ ಸಂಕಷ್ಟ ಹೆಚ್ಚಾಗಿ ಬರುವುದಿಲ್ಲವೆಂದು ಹೇಳಲಾಗಿದೆ.

ಒಮ್ಮೆ ಭೃಗು ಮಹರ್ಷಿ, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ವಿಷ್ಣುವಿನ ಎದೆಯ ಮೇಲೆ ಕಾಲಿಟ್ಟರು. ಆದರೂ ವಿಷ್ಣುವಿಗೆ ಕೋಪ ಬರಲಿಲ್ಲ. ಶ್ರೀವಿಷ್ಣು ಶಾಂತವಾಗಿಯೇ, ಭೃಗು ಮಹರ್ಷಿಗಳಲ್ಲಿ ನಿಮ್ಮ ಪಾದಗಳಿಗೆ ನೋವಾಗಲಿಲ್ಲ ತಾನೇ ಎಂಬ ಕಾಳಜಿಯ ಮಾತನ್ನೇ ಆಡಿದ. ಇದರಿಂದ ಕೋಪಗೊಂಡ ಮಹಾಲಕ್ಷ್ಮೀ, ವಿಷ್ಣುವನ್ನು ತೊರೆದು, ವೈಕುಂಠವನ್ನು ಬಿಟ್ಟು, ಭೂಲೋಕಕ್ಕೆ ಬರುತ್ತಾಳೆ. ಇಲ್ಲಿ ಬಂದು ಕೊಲ್ಹಾಪುರದಲ್ಲಿ ನೆಲೆಸಿದಳು ಎಂದು ಇತಿಹಾಸ ಹೇಳುತ್ತದೆ.

ಕೊಲ್ಹಾಪುರದಲ್ಲಿ ಕೊಲ್ಹಾ ಎಂಬ ರಾಕ್ಷಸ ವಾಸವಿದ್ದ. ಅವನನ್ನು ಕೊಲ್ಹಾಸುರ ಎಂದು ಕರೆಯಲಾಗುತ್ತಿತ್ತು. ಅವನು ಜನರಿಗೆ ಉಪಟಳ ನೀಡುತ್ತಿದ್ದ. ಸಾಮಾನ್ಯರ ಮೇಲೆ ದಾಳಿ ಮಾಡುತ್ತಿದ್ದ. ಆಗ ಅಲ್ಲಿದ್ದ ಜನರೆಲ್ಲ, ಪಾರ್ವತಿಯನ್ನು ಪ್ರಾರ್ಥಿಸಿ, ಕಾಪಾಡುವಂತೆ ಕೇಳಿಕೊಳ್ಳುತ್ತಾರೆ. ಆಗ ಲಕ್ಷ್ಮೀ ದೇವಿ ಕೊಲ್ಹಾಸುರನನ್ನು ವಧಿಸಲು ಮುಂದಾಗುತ್ತಾಳೆ. ತನ್ನ ತಪ್ಪಿನ ಅರಿವಾದ ಕೊಲ್ಹಾಸುರ, ಕ್ಷಮೆ ಕೇಳಿ, ಈ ಊರಿಗೆ ತನ್ನ ಹೆಸರಿಡುವಂತೆ ಕೇಳಿಕೊಳ್ಳುತ್ತಾನೆ.

ಲಕ್ಷ್ಮೀ ದೇವಿಯ ಕೈಯಲ್ಲಿ ವಧೆಯಾದ ಕೊಲ್ಹಾಸುರನ ಹೆಸರನ್ನೇ ಈ ಸ್ಥಳಕ್ಕೆ ಇಡುತ್ತಾರೆ. ಹಾಗಾಗಿ ಇದನ್ನು ಕೊಲ್ಹಾಪುರ ಎಂದು ಕರೆಯಲಾಯಿತು. ಇಲ್ಲಿರುವ ಉದ್ಭವ ಮೂರ್ತಿ, 5ರಿಂದ 6 ಸಾವಿರ ವರ್ಷದಷ್ಟು ಹಳೆಯದಾಗಿದೆ. ಕಪ್ಪು ಕಲ್ಲಿನಲ್ಲಿ ಲಕ್ಷ್ಮೀ ದೇವಿಯ ವಿಗ್ರಹ ಮಾಡಲಾಗಿದ್ದು, ಈ ವಿಗ್ರಹ ಪಶ್ಚಿಮಕ್ಕೆ ಮುಖ ಮಾಡಿದೆ.

ವಿವಾಹದ ಬಳಿಕ ಪತಿ ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸಲು ಕಾರಣವೇನು..?

ಈ ದಿನ ತಲೆಸ್ನಾನ ಮಾಡಬೇಡಿ.. ತಲೆ ಕೂದಲೂ ಕತ್ತರಿಸಬೇಡಿ..

ಈ ಗಿಡಗಳೇನಾದ್ರೂ ನಿಮ್ಮ ಮನೆಯಲ್ಲಿ ಇದ್ರೆ, ನಿಮ್ಮ ಮನೆಯ ನೆಮ್ಮದಿ ಹಾಳಾಗೋದು ಗ್ಯಾರಂಟಿ..

- Advertisement -

Latest Posts

Don't Miss