Monday, December 23, 2024

Latest Posts

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಇತಿಹಾಸವೇನು..?

- Advertisement -

Spiritual: ಕರ್ನಾಟಕದಲ್ಲಿ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಹೊರನಾಡು ಅನ್ನಪೂರ್ಣೇಶ್ವರಿಯ ದೇವಸ್ಥಾನ ಕೂಡ ಒಂದು. ಇಲ್ಲಿ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಲಾಗುತ್ತದೆ. ವರ್ಷ ತುಂಬಿದ ಮಕ್ಕಳು ತಾವೇ ತಿನ್ನಲು ಕಲಿತಾಗ, ಇಲ್ಲಿ ಬಂದು ಆ ಮಕ್ಕಳು ತಾವಾಗಿಯೇ ಊಟ ಮಾಡಿದ್ದಲ್ಲಿ, ಅವರ ಮೇಲೆ ಸದಾ ಅನ್ನಪೂರ್ಣೇಶ್ವರಿಯ ಕೃಪೆ ಇರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದರೆ ಹೊರನಾಡು ಅನ್ನಪೂರ್ಣೇಶ್ವರಿಯ ದೇವಸ್ಥಾನದ ಇತಿಹಾಸವೇನು ಅಂತಾ ತಿಳಿಯೋಣ ಬನ್ನಿ..

ಒಮ್ಮೆ ಶಿವ ಮತ್ತು ಪಾರ್ವತಿ ವಾದ ಮಾಡುತ್ತಾರೆ. ಶಿವ, ಈ ಲೋಕದಲ್ಲಿರುವುದೆಲ್ಲ ಭ್ರಮೆ ಎಂದು ವಾದಿಸುತ್ತಾನೆ. ಆಗ ಪಾರ್ವತಿ ಮಾಯವಾಗುತ್ತಾಳೆ. ಪ್ರಕೃತಿಯನ್ನು ನಿಶ್ಚಲಗೊಳಿಸುತ್ತಾಳೆ. ಪ್ರಾಣಿ, ಪಕ್ಷಿ ಸೇರಿ ಎಲ್ಲ ಜೀವಿಗಳೂ ಆಹಾರಕ್ಕಾಗಿ, ನೀರಿಗಾಗಿ ಪರದಾಡುತ್ತದೆ. ಋಷಿಮುನಿಗಳೆಲ್ಲರೂ ದೇವರ ಮೊರೆ ಹೋಗುತ್ತಾರೆ. ಆಗ ಶಿವನಿಗೆ ತನ್ನ ತಪ್ಪಿನ ಅರಿವಾಗಿ, ದೇವಿಯಲ್ಲಿ ಕ್ಷಮೆಯಾಚಿಸಿ, ಭಿಕ್ಷಾಂದೇಹಿ ಎಂದು ಕೇಳಿಕೊಳ್ಳುತ್ತಾನೆ. ಆಗ ಪಾರ್ವತಿ ದೇವಿ ಅನ್ನಪೂರ್ಣೇಶ್ವರಿಯ ರೂಪದಲ್ಲಿ ಎಲ್ಲರಿಗೂ ಆಹಾರ ನೀಡುತ್ತಾಳೆ. ಈ ಅನ್ನಪೂರ್ಣೇಶ್ವರಿ ದೇವಿ ನೆಲೆನಿಂತ ಸ್ಥಳವೇ, ಹೊರನಾಡು.

ಹೊರನಾಡಿನಲ್ಲಿರುವ ವಿಗ್ರಹವನ್ನು 8ನೇ ಶತಮಾನದಲ್ಲಿ ಅಗಸ್ತ್ಯ ಋಷಿಗಳು ಸ್ಥಾಪಿಸಿದರು ಎಂದು ಹೇಳಲಾಗಿದೆ. ಇಲ್ಲಿ ದೇವಿಯನ್ನು ಪೂಜಿಸುವ ಅರ್ಚಕರ ಪೂರ್ವಜರೂ ಕೂಡ ಇದೇ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. 400 ವರ್ಷಗಳಿಂದ ಇವರ ಕುಟುಂಬಸ್ಥರೇ ಇಲ್ಲಿ ಅರ್ಚಕರಾಗಿ, ದೇವಿಯ ಸೇವೆ, ದೇವಾಲಯದ ಅಭಿವೃದ್ಧಿ ಮಾಡಿಕೊಂಡು ಬರುತ್ತಿದ್ದಾರೆ. ಭದ್ರಾ ನದಿ ತೀರದಲ್ಲಿರುವ ದೇವಿಯ ದರ್ಶನ ಮಾಡಿದವರಿಗೆ, ಎಂದಿಗೂ ಅನ್ನದ ಅಭಾವ ಬರುವುದಿಲ್ಲವೆಂಬ ನಂಬಿಕೆ ಇದೆ.

ಚಿಕ್ಕ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಲು ಹಲವು ಪೋಷಕರು, ಹೊರನಾಡು ಅನ್ನಪೂರ್ಣೇಶ್ವರಿಯ ಸನ್ನಿಧಿಗೆ ಬರುತ್ತಾರೆ. ಇಲ್ಲಿ ನವರಾತ್ರಿ ಪೂಜೆ, ರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ಬೆಳಿಗ್ಗೆ 9 ಗಂಟೆಗೆ, ಮಧ್ಯಾಹ್ನ 1.30ಕ್ಕೆ ಮತ್ತು ರಾತ್ರಿ 9 ಗಂಟೆಗೆ ಮಹಾಮಂಗಳಾರತಿ ನಡೆಯುತ್ತದೆ. ನೀವು ಕುಂಕುಮಾರ್ಚನೆ ಸೇರಿ, ಇತರೆ ಸೇವೆ ಮಾಡಿದ್ದಲ್ಲಿ, ದೇವಿಯ ವಿಶೇಷ ದರ್ಶನ ಮಾಡಬಹುದು.

ವಿವಾಹದ ಬಳಿಕ ಪತಿ ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸಲು ಕಾರಣವೇನು..?

ಈ ದಿನ ತಲೆಸ್ನಾನ ಮಾಡಬೇಡಿ.. ತಲೆ ಕೂದಲೂ ಕತ್ತರಿಸಬೇಡಿ..

ಈ ಗಿಡಗಳೇನಾದ್ರೂ ನಿಮ್ಮ ಮನೆಯಲ್ಲಿ ಇದ್ರೆ, ನಿಮ್ಮ ಮನೆಯ ನೆಮ್ಮದಿ ಹಾಳಾಗೋದು ಗ್ಯಾರಂಟಿ..

- Advertisement -

Latest Posts

Don't Miss