Spiritual: ಮಳೆಗಾಲ ಶುರುವಾದಾಗಲೇ ಅಮರನಾಥ ಯಾತ್ರೆಯೂ ಶುರುವಾಗುತ್ತದೆ. ಹಾಗಾಗಿಯೇ ನಾವು ಪ್ರತಿವರ್ಷ ಅಮರನಾಥ ಯಾತ್ರೆ ವೇಳೆ ನಡೆಯುವ, ಸಾವು ನೋವುಗಳ ಬಗ್ಗೆ ಕೇಳುತ್ತೇವೆ. ಇಂದು ನಾವು ಅಮರನಾಥ ಯಾತ್ರೆಗೆ ಹೋಗುವ ಮುನ್ನ ಯಾವ ವಿಷಯಗಳನ್ನು ನಾವು ನೆನಪಿನಲ್ಲಿಡಬೇಕು ಎಂದು ತಿಳಿಯೋಣ ಬನ್ನಿ..
ಅಮರನಾಥ ಯಾತ್ರೆಗೆ ಹೋಗುವಾಗ, ನೀವು ಹೆಚ್ಚು ನಡೆಯಬೇಕಾಗುತ್ತದೆ. ಇದೊಂಥರಾ ಟ್ರೆಕಿಂಗ್ ಮಾಡಿ, ಅಮರನಾಥನ ದರ್ಶನ ಮಾಡುವುದಾಗಿದೆ. ಹಾಗಾಗಿ ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು. ಹಾಗಾಗಿ ಮಕ್ಕಳು ಮತ್ತು ವಯಸ್ಸಾದವರನ್ನು ಕರೆದೊಯ್ಯುವ ಸಾಹಸಕ್ಕೆ ಹೋಗಬೇಡಿ.
ಇನ್ನು ಆ ಸ್ಥಳದಲ್ಲಿ ಹೆಚ್ಚು ಚಳಿ, ಮಳೆ ಇರುವ ಕಾರಣಕ್ಕೆ, ಉಣ್ಣೆಯ ಸ್ವೆಟರ್, ರೇನ್ ಕೋಟ್, ಲೈಟ್, ಕಂಬಳಿಗಳು ಬೇಕಾಗುತ್ತದೆ. ಇಲ್ಲಿ ಗುಹೆಗೆ ಹೋಗುವ ವೇಳೆ ಚಪ್ಪಲಿ ಧರಿಸಬಾರದು ಎಂಬ ನಿಯಮವಿದೆ.
ಗೈಡ್, ಅಥವಾ ಸ್ಥಳೀಯವಾಗಿ ಸಿಗುವ ಕೆಲಸಗಾರರು, ಅಲ್ಲಿನ ಯಾತ್ರೆಯ ಬಗ್ಗೆ ತಿಳಿದಿರುವವರು ಒಬ್ಬರು, ನಿಮ್ಮೊಂದಿಗೆ ಇರಲಿ. ಅವರಿಗೆ ಸ್ವಲ್ಪ ಹಣ ಕೊಡಬೇಕಾಗುತ್ತದೆ. ಏಕೆಂದರೆ, ಅವರು ಯಾತ್ರೆಯ ಹೋಗಿ, ಬರುವವರೆಗೂ ನಿಮಗೆ ಗೈಡ್ ಮಾಡುತ್ತಾರೆ.
ಇನ್ನು ಆಹಾರದ ವಿಷಯಕ್ಕೆ ಬಂದರೆ, ಹೆಚ್ಚು ದಿನ ಉಳಿಯುವ ಆಹಾರ, ಡ್ರೈಫ್ರೂಟ್ಸ್, ಬಿಸ್ಕೇಟ್ಸ್, ನೀರಿನ ಬಾಟಲಿ, ಪ್ಲೇಟ್, ಸ್ಪೂನ್‌ಗಳನ್ನು ಕೊಂಡೊಯ್ಯಿರಿ. ಇನ್ನು ಬೆಚ್ಚಗಿರುವ, ಉಸಿರಾಡಲು ಸಹಾಯಕವಾಗುವ, ಮೈತುಂಬ ಇರುವ ಬಟ್ಟೆಗಳನ್ನೇ ಧರಿಸಿ. ಟೈಟ್ ಆಗಿರುವ ಬಟ್ಟೆ ಯಾವುದೇ ಕಾರಣಕ್ಕೂ ಧರಿಸಬೇಡಿ.
ಇಲ್ಲಿ ಉಳಿದುಕೊಳ್ಳಲು ರೂಮ್‌ಗಳನ್ನು ಮೊದಲೇ ಬುಕ್ ಮಾಡಿಕೊಳ್ಳಿ. ನೀವು ಅಲ್ಲಿ ಹೋಗಿ ನೋಡೋಣವೆಂದಲ್ಲಿ, ದುಪ್ಪಟ್ಟು ಹಣವನ್ನು ನೀಡಬೇಕಾಗುತ್ತದೆ. ಇನ್ನು ನೀವು ಅಮರನಾಥ ಯಾತ್ರೆ ಮಾಡುವಾಗ, ಅಲ್ಲಿ ಪೊಲೀಸರು, ಸೈನಿಕರು ಅಧಿಕಾರಿಗಳು ಆವಾಗಾವಾಗ ಕೆಲ ಸೂಚನೆಗಳನ್ನು ನೀಡುತ್ತಿರುತ್ತಾರೆ. ಅದನ್ನು ನೀವು ಪಾಲಿಸಲೇಬೇಕು. ಇಲ್ಲದಿದ್ದಲ್ಲಿ, ಅಪಾಯ ಕಟ್ಟಿಟ್ಟಬುತ್ತಿ.
ಈ ಗಿಡಗಳೇನಾದ್ರೂ ನಿಮ್ಮ ಮನೆಯಲ್ಲಿ ಇದ್ರೆ, ನಿಮ್ಮ ಮನೆಯ ನೆಮ್ಮದಿ ಹಾಳಾಗೋದು ಗ್ಯಾರಂಟಿ..