Spiritual: ಮದುವೆಯಾಗಲು ಹೊರಟ ಪುರುಷರು, ಬರೀ ಹೆಣ್ಣಿನ ಸೌಂದರ್ಯವನ್ನಷ್ಟೇ ಅಲ್ಲ. ಆಕೆಯ ಗುಣವನ್ನ ಕೂಡ ಗಮನಿಸಬೇಕು. ಏಕೆಂದರೆ, ಸೌಂದರ್ಯವಂತರು ಸುಂದರ ಸಂಸಾರ ಕಟ್ಟಿಕೊಡುವುದಿಲ್ಲ. ಅವರಲ್ಲಿ ಸೌಂದರ್ಯದ ಜೊತೆ ಉತ್ತಮ ಗುಣವೂ ಇರಬೇಕು. ಅದರಲ್ಲೂ ಈ 4 ರಾಶಿಯ ಮಹಿಳೆಯರರು ಸುಂದರ ಸ್ವಭಾದವರಂತೆ. ಹಾಗಾಗಿ ನಾವಿಂದು ಯಾರು ಆ 4 ರಾಶಿಯವರು ಎಂದು ತಿಳಿಯೋಣ.
ವೃಷಭ ರಾಶಿ. ಈ ರಾಶಿಯ ಮಹಿಳೆಯರು ಮೃದು ಸ್ವಭಾವದವರು ಮತ್ತು ತಾಳ್ಮೆ ಹೊಂದಿದವರು ಆಗಿರುತ್ತಾರೆ. ತಮ್ಮವರಿಗಾಗಿ ಎಲ್ಲ ಖುಷಿಗಳನ್ನು ತೊರೆದು, ಜೀವನವನ್ನು ಮುಡಿಪಾಗಿಡುತ್ತಾರೆ. ಕರುಣೆಯ ಗುಣ ಇವರಲ್ಲಿದ್ದು, ಸದಾ ತಮ್ಮವರ ಕಾಳಜಿ ಮಾಡುತ್ತಾರೆ. ಹಾಗಾಗಿ ಇಂಥವರನ್ನು ವಿವಾಹವಾದರೆ, ಅವರ ಜೀವನ ಅತ್ಯುತ್ತಮವಾಗಿರುತ್ತದೆ.
ಕರ್ಕಾಟಕ ರಾಶಿ. ಸೌಮ್ಯ ಸ್ವಭಾವದ ಕರ್ಕಾಟಕ ರಾಶಿಯವರು ತಮ್ಮ ಜೀವನ ಸಂಗಾತಿ ಹೇಗಿದ್ದರೂ, ಅವರೊಂದಿಗೆ ಅಡ್ಜಸ್ಟ್ ಮಾಡಿಕೊಂಡು ಹೋಗುತ್ತಾರೆ. ಅಲ್ಲದೇ, ಪತಿಯ ಜೊತೆ, ಪತಿಯ ಮನೆಯವರ ಕಾಳಜಿಯನ್ನು ಮಾಡುವ ಗುಣ ಇವರದ್ದಾಗಿರುತ್ತದೆ. ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಏನೇ ಆದರೂ, ಅದನ್ನು ನಿಭಾಯಿಸಿಕೊಂಡು ಹೋಗುವ ಗುಣ ಇವರಿಗಿರುತ್ತದೆ. ಕಷ್ಟಕಾಲದಲ್ಲಿ ಸದಾ ಪತಿಯ ಪರವಾಗಿ ನಿಲ್ಲುವ ಇವರು, ಪತಿಯನ್ನು ಪ್ರೀತಿ, ಕಾಳಜಿಯಿಂದ ಕಾಣುತ್ತಾರೆ.
ತುಲಾ ರಾಶಿ. ಇವರು ಸದಾ ಖುಷಿ ಖುಷಿಯಾಗಿ ಇರಲು ಬಯಸುತ್ತಾರೆ. ಜೀವನ ಪ್ರತೀ ಕ್ಷಣವನ್ನು ತಮ್ಮದೇ ರೀತಿಯಲ್ಲಿ ಎಂಜಾಯ್ ಮಾಡುತ್ತಾರೆ. ನ್ಯಾಯದ ದಾರಿಯಲ್ಲಿ ನಡೆಯುವ ಇವರು, ಯಾರಿಗೂ ಕೇಡು ಬಯಸುವುದಿಲ್ಲ. ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಕೊಂಚ ದುಡುಕುವ ಇವರು, ಕುಟುಂಬಸ್ಥರನ್ನು ಸದಾ ಪ್ರೀತಿ-ಕಾಳಜಿಯಿಂದ ಕಾಣುತ್ತಾರೆ. ಜೀವನ ಸಂಗಾತಿಯನ್ನು ಕೂಡ ಸದಾ ಪ್ರೀತಿಸುವ ಗುಣ ಇವರದ್ದಾಗಿದೆ.
ಮೀನ ರಾಶಿ. ಇತರರ ಕಷ್ಟವನ್ನು ಅರ್ಥ ಮಾಡಿಕೊಂಡು ಬದುಕುವವರಲ್ಲಿ ಮೀನ ರಾಶಿಯವರೂ ಒಬ್ಬರು. ನಿಸ್ವಾರ್ಥ ಜೀವನ ನಡೆಸುವ ಇವರು, ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಹಾಗಾಗಿ ಈ ರಾಶಿಯವರು ಪತಿಯೊಂದಿಗೆ ಉತ್ತಮವಾಗಿ ಸಂಸಾರ ಮಾಡುತ್ತಾರೆ.