Health tips: ನಿಮಗೆ ಸಾಕಷ್ಟು ತರಕಾರಿ, ಹಣ್ಣು, ಸೊಪ್ಪು, ಮೊಳಕೆ ಕಾಳು ಇತ್ಯಾದಿಗಳ ಬಗ್ಗೆ ಗೊತ್ತಿರಬಹುದು. ಆದರೆ ಕಣಲೆ ಅಥವಾ ಕಳಿಲೆ ಬಗ್ಗೆ ಗೊತ್ತಿರುವುದು ಅಪರೂಪ. ಇದನ್ನ ಬಾಂಬೂ ಅಂತಲೂ ಕರೆಯುತ್ತಾರೆ. ಇದರ ಪಲ್ಯ ಆರೋಗ್ಯಕ್ಕೆ ತುಂಬಾ ಉತ್ತಮ. ಮಳೆಗಾಲದ ಸಮಯದಲ್ಲಿ ಕಣಿಲೆ ಸಿಗುತ್ತದೆ. ಹಾಗಾದರೆ ಕಣಲೆ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಕಣಲೆ ಜೀರ್ಣಕ್ರಿಯೆ ಸಮಸ್ಯೆಗೆ ಉತ್ತಮವಾದ ಆಹಾರ. ಮಳೆಗಾಲದಲ್ಲಿ ಸೂರ್ಯನ ಕಿರಣ ಹೆಚ್ಚಾಗಿ ಸಿಗದ ಕಾರಣ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಹಾಗಾಗಿ ಮಳೆಗಾಲದಲ್ಲಿಕಣಲೆ ತಿನ್ನುವುದರಿಂದ ಅದು ನಮ್ಮ ಜೀರ್ಣಕ್ರಿಯೆ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಇದರಿಂದ ಹೊಟ್ಟೆ ಕ್ಲೀನ್ ಆಗಿ, ಆರೋಗ್ಯವಾಗಿರುತ್ತದೆ. ಆದರೆ ಕಣಿಲೆಯನ್ನು ಅಗತ್ಯಕ್ಕಿಂತ ಹೆಚ್ಚು ತಿಂದರೆ, ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ.
ಕಣಲೆ ತಿನ್ನುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ, ಒಳ್ಳೆಯ ಕೊಲೆಸ್ಟ್ರಾಲ್ ಸಮಪ್ರಮಾಣದಲ್ಲಿರುತ್ತದೆ. ಇದರಿಂದ ಬೊಜ್ಜಿನ ಸಮಸ್ಯೆ ಬರುವುದಿಲ್ಲ. ಅಲ್ಲದೇ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ. ಬಿಪಿ-ಶುಗರ್ ಇರುವವರಿಗೆ ಕಣಿಲೆ ಉತ್ತಮ ಆಹಾರವಾಗಿದೆ.
ಕಣಿಲೆ ತಿನ್ನುವುದರಿಂದ ಎಷ್ಟೆಲ್ಲ ಆರೋಗ್ಯ ಲಾಭವಿದೆಯೋ, ಅದೇ ರೀತಿ ಅದನ್ನು ಬಳಸುವ ರೀತಿ ಗೊತ್ತಿಲ್ಲದೇ, ನಿಮಗೆ ಬೇಕಾದ ಹಾಗೆ ಮಾಡಿ ತಿಂದಲ್ಲಿ, ಅದರಿಂದ ನಿಮ್ಮ ಆರೋಗ್ಯವೂ ಹಾಳಾಗಬಹುದು. ವಾಂತಿ, ಬೇಧಿಯಂಥ ಆರೋಗ್ಯ ಸಮಸ್ಯೆ ಬರುತ್ತದೆ. ಹಾಗಾಗಿ ಹಿರಿಯರ ಬಳಿ ಕಣಿಲೆ ಬಳಸುವ ವಿಧಾನ ಕೇಳಿ ಬಳಿಕ ಬಳಸಿ. ಕಣಿಲೆಯನ್ನು ಮೂರು ದಿನ ನೀರಿನಲ್ಲಿ ನೆನೆಸಿಟ್ಟು, ಅದನ್ನ ಪ್ರತಿದಿನ ನೀರು ಬದಲಾಯಿಸಿ. ಕ್ಲೀನ್ ಮಾಡಿ, ಬಳಿಕ ಬಳಸಬೇಕು. ಏಕೆಂದರೆ ಕಣಲೆ ಉಷ್ಣ ಪದಾರ್ಥವಾಗಿದ್ದು, ನೀವು ನೀರಿನಲ್ಲಿ ನೆನೆಸಿಟ್ಟಾಗ, ಇದರ ಉಷ್ಣತೆ ಕಡಿಮೆಯಾಗುತ್ತದೆ.