Spiritual: ಅಪ್ಪ ಮಗಳ ಬಾಂಧವ್ಯ ಅಂದರೆ, ಅತ್ಯುತ್ತಮ ಬಾಂಧವ್ಯಗಳಲ್ಲಿ ಒಂದು., ಮಗಳಿಗೆ ಅಮ್ಮನಿಗಿಂತ ಹೆಚ್ಚು ಅಪ್ಪನ ಮೇಲೆಯೇ ಪ್ರೀತಿ ಇರುತ್ತದೆ. ಅಪ್ಪ ತನ್ನ ಮಗಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧನಿರುತ್ತಾನೆ. ಆದರೆ ನಾವಿಂದು ಹೇಳಹೊರಟಿರುವ ಪೌರಾಣಿಕ ಕಥೆಯಲ್ಲಿ ತಂದೆಯೇ ಮಗಳನ್ನು ವೇಶ್ಯೆಯನ್ನಾಗಿ ಮಾಡಿದ್ದನಂತೆ. ಆ ಕಥೆಯನ್ನು ಪೂರ್ತಿ ತಿಳಿಯೋಣ ಬನ್ನಿ..
ಒಂದು ದೇಶದಲ್ಲಿ ಯಯಾತಿ ಎಂಬ ರಾಜನಿದ್ದ. ಅವನಿಗೊಬ್ಬಳು ಸುಂದರ ಮಗಳಿದ್ದಳು. ಅವಳು ಹೆಸರು ಮಾಧವಿ. ಅವಳಿಗೊಂದು ವರವಿತ್ತು. ಅವಳು ಎಷ್ಟು ಮಕ್ಕಳನ್ನು ಹೆತ್ತರೂ. ಮತ್ತೆ ಮೊದಲಿನಂತೆ ಕುವರಿಯಾಗುತ್ತಿದ್ದಳು. ಮತ್ತು ಆಕೆಯಿಂದ ಹುಟ್ಟಿದ ಮಕ್ಕಳು ರಾಜರಾಗುತ್ತಿದ್ದರು.
ಒಮ್ಮೆ ವಿಶ್ವಾಮಿತ್ರರ ಬಡ ಶಿಷ್ಯ ಗಾಲವನೆಂಬುವವನು ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಟಿದ್ದ. ಅವನು ಗುರುದಕ್ಷಿಣೆ ಏನು ಬೇಕೆಂದು ಕೇಳಿದಾಗ, ವಿಶ್ವಾಮಿತ್ರರು ನೀನು ಬಡವನಿದ್ದಿ. ಹಾಗಾಗಿ ನಿನ್ನಿಂದ ನಾನು ಏನನ್ನೂ ಸ್ವೀಕರಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ಆ ಶಿಷ್ಯ ನೀವು ಗುರುದಕ್ಷಿಣೆ ತೆಗೆದುಕೊಳ್ಳಲೇಬೇಕೆಂದು ಒತ್ತಾಯಿಸಿದ. ಅದಕ್ಕೆ ಕೋಪಗೊಂಡ ವಿಶ್ವಾಮಿತ್ರ, ನೀನು ನನಗಾಗಿ 800 ಶ್ಯಾಮಕರ್ಣ ಕುದುರೆಗಳನ್ನು ತೆಗೆದುಕೊಂಡು ಬಾ ಎಂದು ಕೇಳಿದರು.
ಗಾಲವ ತನ್ನ ಮಿತ್ರನಾದ ಗರುಡನ ಜೊತೆ ಸೇರಿ, ಶಾಮಕರ್ಣ ಕುದುರೆ ಹುಡುಕಲು ಶುರು ಮಾಡಿದ. ಮೊದಲು ಯಯಾತಿ ರಾಜನ ಬಳಿ ಹೋಗಿ ಇಬ್ಬರೂ ಶಾಮಕರ್ಣ ಕುದುರೆಯನ್ನು ಕೇಳಿದರು. ಆದರೆ ಯಾಗ, ಯಜ್ಞಗಳನ್ನು ಮಾಡಿದ ರಾಜ, ತನ್ನ ಸಂಪತ್ತನ್ನ ಕಳೆದುಕೊಂಡಿದ್ದ. ಆದರೆ ಆಗಲೇ ಹೇಳಿದಂತೆ ಅವನಿಗೊಬ್ಬಳು ಮಗಳಿದ್ದಳು. ಮಾಧವಿ. ಆಕೆಯನ್ನು ನಿಮಗೆ ಕೊಡುತ್ತೇನೆ ಎಂದು ಹೇಳಿ. ಆಕೆಯ ಸಂಗತಿಯನ್ನು ಹೇಳಿದ. ಬಳಿಕ, ನಿಮ್ಮ ಕೆಲಸ ಮುಗಿದ ಮೇಲೆ ಆಕೆಯನ್ನು ನನಗೆ ತಂದೊಪ್ಪಿಸಿ ಎಂದ.
ಗಾಲವ ಮತ್ತು ಗರುಡ ಮಾಧವಿಯನ್ನು ಕರೆದುಕೊಂಡು ಮೂರು ರಾಜರ ಬಳಿ ಹೋದರು. ಎಲ್ಲ ರಾಜರೂ 200 ಕುದುರೆಯನ್ನು ಕೊಟ್ಟ ಮಾಧವಿಯಿಂದ ಒಂದೊಂದು ಮಗನನ್ನು ಪಡೆದರು. ಆ ಮಕ್ಕಳೆಲ್ಲರೂ ರಾಜನ ಪಟ್ಟಕ್ಕೂ ಏರಿದರು. ಆದರೆ ಎಷ್ಟೇ ವರ್ಷ ಕಳೆದರೂ ಗಾಲವನಿಗೆ ಬರೀ 600 ಕುದುರೆ ಸಿಕ್ಕಿತು. ಈ ಪ್ರಪಂಚದಲ್ಲಿ 600 ಶ್ಯಾಮಕರ್ಣ ಕುದುರೆಗಳಷ್ಟೇ ಇರುವುದು ಎಂದು ಕೂಡ ಅವನಿಗೆ ಗೊತ್ತಾಯಿತು.
ಅವನು ಆ ಕುದುರೆ ಮತ್ತು ಮಾಧವಿಯನ್ನು ಕರೆದುಕೊಂಡು ವಿಶ್ವಾಮಿತ್ರರ ಬಳಿ ಹೋಗುತ್ತಾನೆ. ಮತ್ತು ಇಷ್ಟು ವರ್ಷಗಳ ಕಾಲ ನಾನು ಶ್ರಮ ಪಟ್ಟಿದ್ದಕ್ಕೆ 600 ಶ್ಯಾಮಕರ್ಣ ಕುದುರೆಗಳು ಸಿಕ್ಕಿದೆ. ನೀವು ಇನ್ನು 200 ಕುದುರೆ ಬದಲು, ಮಾಧವಿಯಿಂದ ಓರ್ವ ಪುತ್ರನನ್ನು ಪಡೆಯಿರಿ. ಅವನು ಮುಂದೆ ದೊಡ್ಡ ರಾಜನಾಗುತ್ತಾನೆ ಎಂದು ಹೇಳಿದ್ದಲ್ಲದೇ, ಈ ಹಿಂದೆ ಆಕೆಯಿಂದ ಮೂವರು ರಾಜರು ಪುತ್ರರನ್ನು ಪಡೆದಿದ್ದಾರೆಂದು ಹೇಳುತ್ತಾನೆ. ವಿಶ್ವಾಮಿತ್ರ ಆಕೆಯಿಂದ ಓರ್ವ ಮಗನನ್ನು ಪಡೆಯುತ್ತಾನೆ. ಅವನು ಕೂಡ ಮುಂದೆ ರಾಜನಾಗುತ್ತಾನೆ. ಬಳಿ ಗಾಲವ ಮಾಧವಿಯನ್ನು ಆಕೆಯ ತಂದೆ ಯಯಾತಿಗೆ ತಂದೊಪ್ಪಿಸುತ್ತಾನೆ.
ತಂದೆ ಮಗಳಿಗೆ ಸ್ವಯಂವರ ಮಾಡಲು ಹೊರಟಾಗ, ಅದನ್ನ ವಿರೋಧಿಸಿದ ಮಾಧವಿ, ಕಾಡಿಗೆ ಹೋಗಿ, ದೇವರ ನಾಮಸ್ಮರಣೆ ಮಾಡುತ್ತ ಕೊನೆಯಾಗುತ್ತಾಳೆ.
ಭಾರತದ ಅತ್ಯಂತ ಸ್ವಚ್ಛ ದೇವಸ್ಥಾನವೆಂಬ ಪ್ರಖ್ಯಾತಿ ಈ 2 ದೇವಾಲಯಕ್ಕಿದೆ..