Thursday, April 24, 2025

Latest Posts

ದುರ್ಯೋಧನ ಭಾನುಮತಿಯನ್ನು ವಿವಾಹವಾಗಿದ್ದು ಹೇಗೆ..?

- Advertisement -

Spiritual: ತನ್ನ ಸದ್ಗುಣಗಳಿಂದ ಸುಯೋಧನನಾಗಿದ್ದವನು, ದುರ್ಗುಣಗಳನ್ನ ಮೈಗೂಡಿಸಿಕೊಂಡು ದುರ್ಯೋಧನನಾದ. ಹಾಗಾದ್ರೆ ಭಾನುಮತಿ ದುರ್ಯೋಧನನ್ನು ವಿವಾಹವಾಗಿದ್ದು ಹೇಗೆ..? ಆಕೆಗೆ ಅವನ ದುರ್ಗುಣಗಳ ಬಗ್ಗೆ ಅರಿವಿರಲಿಲ್ಲವೇ..? ಅಥವಾ ಅರಿವಿದ್ದೇ ಆಕೆ ದುರ್ಯೋಧನನ್ನು ವಿವಾಹವಾದಳಾ..? ಈ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಕಾಂಬೋಜ ರಾಜ ಚಂದ್ರ ವರ್ಮನ ಮಗಳೇ ಭಾನುಮತಿ. ಸೌಂದರ್ಯದ ಗಣಿಯಂತಿದ್ದ ಭಾನುಮತಿ, ಸಕಲ ಕಲಾ ವಲ್ಲಭೆಯಾಗಿದ್ದಳು. ವಯಸ್ಸಿಗೆ ಬಂದ ಮಗಳನ್ನು ಮದುವೆ ಮಾಡಬೇಕೆಂದು ರಾಜ, ಈಕೆಗೆ ಸ್ವಯಂವರ ಏರ್ಪಡಿಸಿದ. ಹಲವು ರಾಜ್ಯದ ರಾಜರಿಗೆ ಕರೆ ನೀಡಿದ್ದ. ಈಕೆಯ ಸ್ವಯಂವರದಲ್ಲಿ ಭಾಗಿಯಾದ ರಾಜರಲ್ಲಿ ದುರ್ಯೋಧನ ಕೂಡ ಒಬ್ಬವ. ಜೊತೆಗೆ ಇವನ ಜೀವದ ಗೆಳೆಯ ಕರ್ಣ ಕೂಡ ಸ್ವಯಂವರಕ್ಕೆ ಬಂದಿರುತ್ತಾನೆ.

ಭಾನುಮತಿ ಮಾಲೆ ಹಿಡಿದು ಯಾರ ಕೊರಳಿಗೆ ಇದನ್ನು ಹಾಕಬೇಕು ಎಂದು ಎಲ್ಲರನ್ನೂ ನೋಡುತ್ತ ಮುಂದೆ ಸಾಗುತ್ತಿರುತ್ತಾಳೆ. ಆಕೆಯನ್ನು ಕಂಡು ದುರ್ಯೋಧನ ನಗು ಬೀರಿದರೂ ಕೂಡ, ಭಾನುಮತಿ ಅವನನ್ನು ನೋಡಿ, ಮುಂದೆ ಸಾಗುತ್ತಾಳೆ. ಆಗ ದುರ್ಯೋಧನ, ಭಾನುಮತಿಯನ್ನು ತನ್ನತ್ತ ಸೆಳೆದು ಆಕೆಯ ಕೈಯಲ್ಲಿದ್ದ ಮಾಲೆಯನ್ನು ಒತ್ತಾಯಪೂರ್ವಕವಾಗಿ, ತನ್ನ ಕೊರಳಿಗೆ ಹಾಕಿಸಿಕೊಂಡು ವಿವಾಹವಾಗುತ್ತಾನೆ.

ಕರ್ಣ ದುರ್ಯೋಧನನ ಜೊತೆ ಇದ್ದ ಕಾರಣ, ದುರ್ಯೋಧನನಿಗೆ ಭಾನುಮತಿ ಸಿಕ್ಕಿದ್ದು, ಕರ್ಣನಿಲ್ಲದಿದ್ದಲ್ಲಿ ಭಾನುಮತಿಯೊಂದಿಗೆ ದುರ್ಯೋಧನನ ವಿವಾಹ ಆಗುತ್ತಿರಲಿಲ್ಲವೆನ್ನಲಾಗುತ್ತದೆ. ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಅವಳಿ ಮಕ್ಕಳು ಜನಿಸುತ್ತಾರೆ. ಮಗ ಲಕ್ಷ್ಮಣ ಮಗಳು ಲಕ್ಷ್ಮಣಾ, ಮಗ ಅಭಿಮನ್ಯುವಿನಿಂದ ಕೊಲ್ಲಲ್ಪಟ್ಟರೆ, ಮಗಳು ಕೃಷ್ಣ ಮತ್ತು ಜಾಂಬವತಿಯ ಮಗ ಸಾಂಬನನ್ನು ವಿವಾಹವಾಗುತ್ತಾಳೆ.

ಹಿಂದೂಗಳು ಚಾರ್ ಧಾಮ್ ಯಾತ್ರೆ ಮಾಡಲೇಬೇಕು ಅಂತಾ ಹೇಳೋದು ಯಾಕೆ..?

ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಸಿಗುತ್ತದೆ ಈ ಸೂಚನೆ..

ಈ ಪಾಪ ಮಾಡಿದ್ರೆ, ಪ್ರಾಣಿಗಳ ಯೋನಿಯಲ್ಲಿ ಜನ್ಮ ಸಿಗುತ್ತಂತೆ..

- Advertisement -

Latest Posts

Don't Miss